ತ್ರಿವಿಕ್ರಮನ ಹುಟ್ಟುಹಬ್ಬಕ್ಕೆ ಕ್ರೇಜಿ ಟೀಸರ್ ರಿಲೀಸ್
ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಅವರ ತ್ರಿವಿಕ್ರಮನ ಬಗ್ಗೆ ದೊಡ್ಡ ಕ್ರೇಜ್ ಸೃಷ್ಟಿಯಾಗಿದೆ. ಕೊರೊನಾ ಎಫೆಕ್ಟ್ನಿಂದ ಈಗಾಗ್ಲೇ ರಿಲೀಸ್ ಆಗ್ಬೇಕಿದ್ದ ಈ ತ್ರಿವಿಕ್ರಮ ಈಗ ಕೊಂಚ ತಡವಾಗಿದೆ. ಹಾಗಾಗಿ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡದೆ ತಮ್ಮ ಹುಟ್ಟುಹಬ್ಬದಂದು ಟೀಸರ್ ರಿಲೀಸ್ ಮಾಡ್ತಿದೆ ಚಿತ್ರತಂಡ. ಆಗಸ್ಟ್ 16ನೇ ತಾರೀಕು ತ್ರಿವಿಕ್ರಮನ ಟೀಸರ್ ರಿಲೀಸ್ ವಿಕ್ರಮ್ ನನ್ನ ಕಣ್ತುಂಬಿಕೊಳ್ಳೋಕೆ ಕ್ರೇಜಿ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ವಿಕ್ರಮನ ಅಪಿಯರೆನ್ಸ್, ಗೆಟಪ್, ಮ್ಯಾನರಿಸಂಗೆ ಈಗಾಗ್ಲೇ ಕುತೂಹಲ ಹೆಚ್ಚಾಗಿದೆ. ಹೀಗಾಗಿ ಟೀಸರ್ ಸಾಕಷ್ಟು […]
ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಅವರ ತ್ರಿವಿಕ್ರಮನ ಬಗ್ಗೆ ದೊಡ್ಡ ಕ್ರೇಜ್ ಸೃಷ್ಟಿಯಾಗಿದೆ. ಕೊರೊನಾ ಎಫೆಕ್ಟ್ನಿಂದ ಈಗಾಗ್ಲೇ ರಿಲೀಸ್ ಆಗ್ಬೇಕಿದ್ದ ಈ ತ್ರಿವಿಕ್ರಮ ಈಗ ಕೊಂಚ ತಡವಾಗಿದೆ. ಹಾಗಾಗಿ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡದೆ ತಮ್ಮ ಹುಟ್ಟುಹಬ್ಬದಂದು ಟೀಸರ್ ರಿಲೀಸ್ ಮಾಡ್ತಿದೆ ಚಿತ್ರತಂಡ.
ಆಗಸ್ಟ್ 16ನೇ ತಾರೀಕು ತ್ರಿವಿಕ್ರಮನ ಟೀಸರ್ ರಿಲೀಸ್ ವಿಕ್ರಮ್ ನನ್ನ ಕಣ್ತುಂಬಿಕೊಳ್ಳೋಕೆ ಕ್ರೇಜಿ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ವಿಕ್ರಮನ ಅಪಿಯರೆನ್ಸ್, ಗೆಟಪ್, ಮ್ಯಾನರಿಸಂಗೆ ಈಗಾಗ್ಲೇ ಕುತೂಹಲ ಹೆಚ್ಚಾಗಿದೆ. ಹೀಗಾಗಿ ಟೀಸರ್ ಸಾಕಷ್ಟು ಕುತೂಹಲ ಕೆರಳಿಸಿದೆ. ಸದ್ಯ ಚಿತ್ರದ ಎರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದ್ದು, ಆ ಎರಡು ಹಾಡುಗಳು ಮುಗಿದ್ರೆ, ಸಿನಿಮಾ ರಿಲೀಸ್ಗೆ ರೆಡಿಯಾಗುತ್ತೆ. ಈ ನಡುವೆ ಆಗಸ್ಟ್ 16 ರಂದು ವಿಕ್ರಂ ಬರ್ತ್ಡೇ ಇರೋದ್ರಿಂದ, ಟೀಸರ್ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ಚಿತ್ರತಂಡ ಮುಂದಾಗಿದೆ.
₹50 ಲಕ್ಷಕ್ಕೆ ಆಡಿಯೋ ರೈಟ್ಸ್ ಸೋಲ್ಡ್ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆದಾಗಿನಿಂದಲೇ ತ್ರಿವಿಕ್ರಮನ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ. ಒಂದಲ್ಲ ಒಂದು ವಿಚಾರದಿಂದ ಸಿನಿಮಾ ಸದ್ದು ಮಾಡುತ್ತಲೇ ಇದೆ. ಕೆಲದಿನಗಳ ಹಿಂದೆ ಚಿತ್ರದ ಆಡಿಯೋ ರೈಟ್ಸ್ ₹50 ಲಕ್ಷಕ್ಕೆ ಸೋಲ್ಡ್ ಔಟ್ ಆಗಿದೆ. ಹೀಗಾಗಿ ಸಿನಿಮಾದ ಹಂಚಿಕೆ, ಸ್ಯಾಟಲೈಟ್ ರೈಟ್ಸಿಗೂ ದೊಡ್ಡ ಆಫರ್ಸ್ ಬರ್ತಿದೆಯಂತೆ. ಏನೇ ಇದ್ರೂ, ಅರ್ಜುನ್ ಜನ್ಯ ಮ್ಯೂಸಿಕ್, ಸಂತೋಷ್ ರೈ ಪಾತಾಜೆಯ ಕ್ಯಾಮೆರಾ ವರ್ಕ್, ಕ್ರೇಜಿ ಪುತ್ರನ ಕ್ರೇಜ್ ಇವೆಲ್ಲವೂ ಟೀಸರ್ನಲ್ಲಿ ಪ್ರತಿಬಿಂಬಿಸಲಿದೆ.