ಶಂಭೋ ಶಿವ ಶಂಕರ ಎಂದ ಡಾಲಿ, ವಸಿಷ್ಠ ಸಿಂಹ
ಕೊರೊನಾ ಅಟ್ಟಹಾಸದಿಂದ ಕಳೆದ ನಾಲ್ಕು ತಿಂಗಳಿಂದ ಮಂಕಾಗಿದ್ದ ಕನ್ನಡ ಚಿತ್ರರಂಗ ಮತ್ತೆ ಚುರುಕಾಗಿದೆ. ಶ್ರಾವಣದ ಶುಭ ದಿನದಲ್ಲಿ ಒಂದೊಂದೆ ಚಿತ್ರಗಳು ಆ್ಯಕ್ಟೀವ್ ಆಗಿದೆ. ಈ ಸಂದರ್ಭದಲ್ಲಿ ಹೊಸ ಚಿತ್ರಕ್ಕೆ ಡಾಲಿ ಧನಂಜಯ್ ಹಾಗೂ ವಸಿಷ್ಠ ಸಿಂಹ ಸಾಥ್ ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶಂಭೋ ಶಿವ ಶಂಕರ ಚಿತ್ರ ಸೆಟ್ಟೇರಿದೆ. ಈ ಸಂದರ್ಭದಲ್ಲಿ ಚಿತ್ರದ ಪೋಸ್ಟರ್ ಹಾಗೂ ಶೀರ್ಷಿಕೆಯನ್ನು ಕನ್ನಡ ಚಿತ್ರರಂಗದ ಖ್ಯಾತ ನಟರಾದ ಡಾಲಿ ಧನಂಜಯ ಹಾಗೂ ವಸಿಷ್ಠ ಸಿಂಹ ಬಿಡುಗಡೆಗೊಳಿಸಿದ್ದಾರೆ. ಈ ಚಿತ್ರ ಸೆಪ್ಟೆಂಬರ್ […]
ಕೊರೊನಾ ಅಟ್ಟಹಾಸದಿಂದ ಕಳೆದ ನಾಲ್ಕು ತಿಂಗಳಿಂದ ಮಂಕಾಗಿದ್ದ ಕನ್ನಡ ಚಿತ್ರರಂಗ ಮತ್ತೆ ಚುರುಕಾಗಿದೆ. ಶ್ರಾವಣದ ಶುಭ ದಿನದಲ್ಲಿ ಒಂದೊಂದೆ ಚಿತ್ರಗಳು ಆ್ಯಕ್ಟೀವ್ ಆಗಿದೆ. ಈ ಸಂದರ್ಭದಲ್ಲಿ ಹೊಸ ಚಿತ್ರಕ್ಕೆ ಡಾಲಿ ಧನಂಜಯ್ ಹಾಗೂ ವಸಿಷ್ಠ ಸಿಂಹ ಸಾಥ್ ನೀಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶಂಭೋ ಶಿವ ಶಂಕರ ಚಿತ್ರ ಸೆಟ್ಟೇರಿದೆ. ಈ ಸಂದರ್ಭದಲ್ಲಿ ಚಿತ್ರದ ಪೋಸ್ಟರ್ ಹಾಗೂ ಶೀರ್ಷಿಕೆಯನ್ನು ಕನ್ನಡ ಚಿತ್ರರಂಗದ ಖ್ಯಾತ ನಟರಾದ ಡಾಲಿ ಧನಂಜಯ ಹಾಗೂ ವಸಿಷ್ಠ ಸಿಂಹ ಬಿಡುಗಡೆಗೊಳಿಸಿದ್ದಾರೆ. ಈ ಚಿತ್ರ ಸೆಪ್ಟೆಂಬರ್ ಮೊದಲವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ಶಂಭೋ ಶಿವ ಶಂಕರ ಮೂರು ನಾಯಕ ಪಾತ್ರಗಳ ಹೆಸರಾಗಿದ್ದು, ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ಈ ಮೂರು ಪಾತ್ರಗಳಲ್ಲಿ ಕಾಣಿಕೊಳುತ್ತಿದ್ದಾರೆ. ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸೋನಾಲ್ ಮಾಂಟೆರೊ ಈ ಚಿತ್ರದ ನಾಯಕಿ. ಒಟ್ನಲ್ಲಿ ಕೊರೊನಾ ಸಮಯದಲ್ಲಿ ಹೊಸಬರಿಗೆ ಸ್ಟಾರ್ ನಟರು ಜೊತೆಯಾಗ್ತಿರೋದು ಸಂಚಲ ಸೃಷ್ಟಿಸಿದೆ.
Published On - 10:46 am, Sun, 16 August 20