ಎತ್ತಿನಗಾಡಿಯಲ್ಲಿ ಬರುವಾಗ ವಿದ್ಯುತ್ ಸ್ಪರ್ಶ: ರಾಸು, ಇಬ್ಬರು ಗ್ರಾಮಸ್ಥರು ಸ್ಥಳದಲ್ಲೇ ಸಾವು

ಯಾದಗಿರಿ: ವಿದ್ಯುತ್ ಸ್ಪರ್ಶದಿಂದ ಎತ್ತು ಹಾಗೂ ಇಬ್ಬರು ಗ್ರಾಮಸ್ಥರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಜಿಲ್ಲಯ ವಡಗೇರ ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಸಮೀಪವಿರುವ ಜಮೀನಿನಲ್ಲಿ ನಡೆದಿದೆ. ಗ್ರಾಮದ ನಿವಾಸಿಗಳಾದ ಮೌಲಾಲಿ(30) ಹಾಗೂ ಬಸಪ್ಪ(30) ಎತ್ತಿನ ಗಾಡಿಯಲ್ಲಿ ಹೊಲದಿಂದ ಬರುವಾಗ ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ಬೇಲಿಗೆ ಗಾಡಿ ಸ್ಪರ್ಶವಾಗಿದೆ. ವಿದ್ಯುತ್ ತಂತಿ ಸ್ಪರ್ಶವಾಗಿದ್ದರಿಂದ ಬಂಡಿಯ ಎತ್ತು ಒದ್ದಾಡಲು ಪ್ರಾರಂಭಿಸಿತು. ಎತ್ತನ್ನು ರಕ್ಷಿಸಲು ಹೋದ ಇಬ್ಬರಿಗೆ ವಿದ್ಯುತ್​ ತಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಎತ್ತಿನಗಾಡಿಯಲ್ಲಿ ಬರುವಾಗ ವಿದ್ಯುತ್ ಸ್ಪರ್ಶ: ರಾಸು, ಇಬ್ಬರು ಗ್ರಾಮಸ್ಥರು ಸ್ಥಳದಲ್ಲೇ ಸಾವು

Updated on: Sep 28, 2020 | 8:02 PM

ಯಾದಗಿರಿ: ವಿದ್ಯುತ್ ಸ್ಪರ್ಶದಿಂದ ಎತ್ತು ಹಾಗೂ ಇಬ್ಬರು ಗ್ರಾಮಸ್ಥರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಜಿಲ್ಲಯ ವಡಗೇರ ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಸಮೀಪವಿರುವ ಜಮೀನಿನಲ್ಲಿ ನಡೆದಿದೆ.

ಗ್ರಾಮದ ನಿವಾಸಿಗಳಾದ ಮೌಲಾಲಿ(30) ಹಾಗೂ ಬಸಪ್ಪ(30) ಎತ್ತಿನ ಗಾಡಿಯಲ್ಲಿ ಹೊಲದಿಂದ ಬರುವಾಗ ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ಬೇಲಿಗೆ ಗಾಡಿ ಸ್ಪರ್ಶವಾಗಿದೆ. ವಿದ್ಯುತ್ ತಂತಿ ಸ್ಪರ್ಶವಾಗಿದ್ದರಿಂದ ಬಂಡಿಯ ಎತ್ತು ಒದ್ದಾಡಲು ಪ್ರಾರಂಭಿಸಿತು. ಎತ್ತನ್ನು ರಕ್ಷಿಸಲು ಹೋದ ಇಬ್ಬರಿಗೆ ವಿದ್ಯುತ್​ ತಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Published On - 8:01 pm, Mon, 28 September 20