ಚಿಕ್ಕೋಡಿ: ಶಿವಸೇನೆ ಕಾರ್ಯಕರ್ತರ ಪುಂಡಾಟಕ್ಕೆ ರೊಸಿ ಹೋದ ಗ್ರಾಮಸ್ಥರು ತಿರುಗಿಬಿದ್ದು ಅವರನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ವಲಯದ ಹುಕ್ಕೇರಿ ತಾಲೂಕಿನಲ್ಲಿ ಸಂಭವಿಸಿದೆ. ಶಿವಾಜಿ ಪ್ರತಿಮೆ ವಿಚಾರಕ್ಕೆ ಸಂಬಂಧಿಸಿದಂತೆ ಪುಂಡಾಟ ನಡೆಸುತ್ತಿದ್ದ ಶಿವಸೇನೆ ಕಾರ್ಯಕರ್ತರು, ರಸ್ತೆ ತಡೆದು ಕನ್ನಡಿಗರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಈ ಪುಂಡ ಮರಾಠಿಗರ ಕಾಟದಿಂದ ಬೆಸೆತ್ತು ಹೊದ ಮನಗುತ್ತಿ ಗ್ರಾಮಸ್ಥರು, ಹಲ್ಲೆ ಮಾಡಲು ಬಂದ ಶಿವಸೇನೆ ಪುಂಡರ ಮೇಲೆ ತಿರುಗಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಎರಡು ಗುಂಪುಗಳು ದೊಣ್ಣೆಯಿಂದ […]
Ad
Follow us on
ಚಿಕ್ಕೋಡಿ: ಶಿವಸೇನೆ ಕಾರ್ಯಕರ್ತರ ಪುಂಡಾಟಕ್ಕೆ ರೊಸಿ ಹೋದ ಗ್ರಾಮಸ್ಥರು ತಿರುಗಿಬಿದ್ದು ಅವರನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ವಲಯದ ಹುಕ್ಕೇರಿ ತಾಲೂಕಿನಲ್ಲಿ ಸಂಭವಿಸಿದೆ.
ಶಿವಾಜಿ ಪ್ರತಿಮೆ ವಿಚಾರಕ್ಕೆ ಸಂಬಂಧಿಸಿದಂತೆ ಪುಂಡಾಟ ನಡೆಸುತ್ತಿದ್ದ ಶಿವಸೇನೆ ಕಾರ್ಯಕರ್ತರು, ರಸ್ತೆ ತಡೆದು ಕನ್ನಡಿಗರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಈ ಪುಂಡ ಮರಾಠಿಗರ ಕಾಟದಿಂದ ಬೆಸೆತ್ತು ಹೊದ ಮನಗುತ್ತಿ ಗ್ರಾಮಸ್ಥರು, ಹಲ್ಲೆ ಮಾಡಲು ಬಂದ ಶಿವಸೇನೆ ಪುಂಡರ ಮೇಲೆ ತಿರುಗಿ ಬಿದ್ದಿದ್ದಾರೆ.
ಈ ಸಂದರ್ಭದಲ್ಲಿ ಎರಡು ಗುಂಪುಗಳು ದೊಣ್ಣೆಯಿಂದ ಹೊಡೆದಾಡಿಕೊಂಡಿವೆ. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಸಾಕಷ್ಟು ಹರಸಾಹಸ ಪಡೆಬೇಕಾಯಿತು. ಸದ್ಯ ಪರಿಸ್ಥಿತಿ ನಿಂಯಂತ್ರಣದಲ್ಲಿದ್ದು, ಪೊಲೀಸರು ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ.