ಗ್ರಾ.ಪಂ ಸದಸ್ಯೆ ಮನೆಗೆ ಗ್ರಾಮಸ್ಥರಿಂದ ಮುತ್ತಿಗೆ, ಯಾಕೆ?

|

Updated on: Jun 08, 2020 | 2:24 PM

ಹಾಸನ: ಕುಡಿಯೋ ನೀರಿಗಾಗಿ ಗ್ರಾಮಸ್ಥರು ಗ್ರಾ.ಪಂ ಸದಸ್ಯರ ಮನೆಗೆ ಮುತ್ತಿಗೆ ಹಾಕಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬ್ಯಾಗದೀಣೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹಲವು ಮನೆಗಳಿಗೆ ದಶಕಗಳಿಂದ ಕುಡಿಯೋ ನೀರಿನ ಸಮಸ್ಯೆ ಇದೆ. ಈ ಸಮಸ್ಯೆ ಪರಿಹಾರಕ್ಕಾಗಿ ಬ್ಯಾಕರವಳ್ಳಿ ಗ್ರಾ.ಪಂ ವತಿಯಿಂದ ಒಂದು ಕೊಳವೆ ಬಾವಿ ಕೊರೆಸಲಾಗಿದೆ. ಆ ಬೋರ್ ವೆಲ್​ಗೆ ಮೋಟರ್ ಅಳವಡಿಸಿ ಪೈಪ್ ಲೈನ್ ಹಾಕೋ ಮುನ್ನವೇ ಗ್ರಾ.ಪಂ. ಸದಸ್ಯೆ ಜಯಮಾಲಾ ತಾವೇ ವೈಯಕ್ತಿಕವಾಗಿ ಅದಕ್ಕೆ ಮೋಟರ್ ಅಳವಡಿಸಿಕೊಂಡಿದ್ದಾರೆ. ಇದ್ರಿಂದ ತಮಗೆ ಕುಡಿಯುವ […]

ಗ್ರಾ.ಪಂ ಸದಸ್ಯೆ ಮನೆಗೆ ಗ್ರಾಮಸ್ಥರಿಂದ ಮುತ್ತಿಗೆ, ಯಾಕೆ?
Follow us on

ಹಾಸನ: ಕುಡಿಯೋ ನೀರಿಗಾಗಿ ಗ್ರಾಮಸ್ಥರು ಗ್ರಾ.ಪಂ ಸದಸ್ಯರ ಮನೆಗೆ ಮುತ್ತಿಗೆ ಹಾಕಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬ್ಯಾಗದೀಣೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹಲವು ಮನೆಗಳಿಗೆ ದಶಕಗಳಿಂದ ಕುಡಿಯೋ ನೀರಿನ ಸಮಸ್ಯೆ ಇದೆ. ಈ ಸಮಸ್ಯೆ ಪರಿಹಾರಕ್ಕಾಗಿ ಬ್ಯಾಕರವಳ್ಳಿ ಗ್ರಾ.ಪಂ ವತಿಯಿಂದ ಒಂದು ಕೊಳವೆ ಬಾವಿ ಕೊರೆಸಲಾಗಿದೆ.

ಆ ಬೋರ್ ವೆಲ್​ಗೆ ಮೋಟರ್ ಅಳವಡಿಸಿ ಪೈಪ್ ಲೈನ್ ಹಾಕೋ ಮುನ್ನವೇ ಗ್ರಾ.ಪಂ. ಸದಸ್ಯೆ ಜಯಮಾಲಾ ತಾವೇ ವೈಯಕ್ತಿಕವಾಗಿ ಅದಕ್ಕೆ ಮೋಟರ್ ಅಳವಡಿಸಿಕೊಂಡಿದ್ದಾರೆ. ಇದ್ರಿಂದ ತಮಗೆ ಕುಡಿಯುವ ನೀರಿಗೆ ಸಮಸ್ಯೆ ಆಗಿದೆ ಎಂದು ಜನರು ಸದಸ್ಯೆ ಮನೆಗೆ ಮುತ್ತಿಗೆ ಹಾಕಿದ್ರು. ಈ ವೇಳೆ ಬೇಜವಾಬ್ದಾರಿತನದಿಂದ ಮಾತನಾಡಿದ ಸದಸ್ಯೆಗೆ ಫುಲ್ ಕ್ಲಾಸ್ ತೆಗೆದುಕೊಂಡ ಜನರು, ಸಾರ್ವಜನಿಕ‌ ಕೊಳವೆ ಬಾವಿ ಖಾಸಗಿಯಾಗಿ ಬಳಸಿಕೊಳ್ಳುತ್ತಿರೋದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೆ ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಬೇಕು ಎಂದು ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗೆ ಮನವಿ ಸಲ್ಲಿಸಿದ್ರು.

Published On - 10:07 am, Mon, 8 June 20