India vs Australia Test Series | ಬೆದರಿಕೆಯ ಪರಾಕಾಷ್ಠೆ ಜನಾಂಗೀಯ ನಿಂದನೆ; ಕೊಹ್ಲಿ ಟ್ವೀಟ್

|

Updated on: Jan 10, 2021 | 5:11 PM

ಇಂತಹ ಅನೇಕ ಘಟನೆಗಳು ನನ್ನ ಅನುಭವಕ್ಕೂ ಬಂದಿವೆ. ಹೀಗಾಗಿ ಜನಾಂಗೀಯ ಟೀಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ ಎಂದು ಬರೆದುಕೊಂಡಿದ್ದಾರೆ.

India vs Australia Test Series | ಬೆದರಿಕೆಯ ಪರಾಕಾಷ್ಠೆ ಜನಾಂಗೀಯ ನಿಂದನೆ; ಕೊಹ್ಲಿ ಟ್ವೀಟ್
ಟೆಸ್ಟ್ ಮತ್ತು ಟಿ 20 ಸರಣಿಯಲ್ಲಿ ಗೆದ್ದುಬೀಗಿದ ನಂತರ ಭಾರತದ ನಾಯಕ ವಿರಾಟ್ ಕೊಹ್ಲಿ ಏಕದಿನ ಸರಣಿಯ ಮೇಲೆ ಕಣ್ಣಿಟ್ಟಿದ್ದಾರೆ. ವಿರಾಟ್ ಇಂಗ್ಲೆಂಡ್ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ 5 ದಾಖಲೆಗಳನ್ನು ತಮ್ಮ ಖಾತೆಗೆ ಬರೆದುಕೊಳ್ಳುವ ತವಕದಲ್ಲಿದ್ದಾರೆ.
Follow us on

ಸಿಡ್ನಿ: ಭಾರತ- ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸಂದರ್ಭದಲ್ಲಿ ಜನಾಂಗೀಯ ನಿಂದನೆ ವಿಚಾರವಾಗಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಟ್ವಿಟರ್​ನಲ್ಲಿ ತಮ್ಮ ಅಸಮಾದಾನವನ್ನ ಹೊರಹಾಕಿದ್ದಾರೆ. ಈ ವಿಚಾರದ ಬಗ್ಗೆ ಟ್ವೀಟ್​ ಮಾಡಿರುವ ಕಿಂಗ್​ ಕೊಹ್ಲಿ, ಇಂತಹ ನಡವಳಿಕೆಯನ್ನು ಸಹಿಸಲು, ಒಪ್ಪಿಕೊಳ್ಳಲು ಆಗುವುದಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇಂತಹ ಅನೇಕ ಘಟನೆಗಳು ನನ್ನ ಅನುಭವಕ್ಕೂ ಬಂದಿವೆ. ಹೀಗಾಗಿ ಜನಾಂಗೀಯ ಟೀಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ ಎಂದು ಬರೆದುಕೊಂಡಿದ್ದಾರೆ.

ಸಿಡ್ನಿ ಟೆಸ್ಟ್ ಸಮಯದಲ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಕೆಲವು ವೀಕ್ಷಕರಿಂದ ಜನಾಂಗೀಯ ನಿಂದನೆಗೆ ಒಳಗಾದರು. ಈ ಘಟನೆ ಕುರಿತು ಕೊಹ್ಲಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದು, ಯಾವುದೇ ರೀತಿಯ ಜನಾಂಗೀಯ ನಿಂದನೆಗಳನ್ನು ಒಪ್ಪಲು ಆಗುವುದಿಲ್ಲ. ಬೌಂಡರಿ ಲೈನ್​ನಲ್ಲಿ ಫೀಲ್ಡಿಂಗ್​ ಮಾಡುವ ವೇಳೆ ನಾನು ಸಹ ಇಂತಹ ಅನೇಕ ಕೆಟ್ಟ ಸನ್ನಿವೇಶಗಳನ್ನು ಎದುರಿಸಿದ್ದೇನೆ. ಇದು ಬೆದರಿಕೆಯ ಪರಾಕಾಷ್ಠೆಯಾಗಿದೆ. ಮೈದಾನದಲ್ಲಿ ಇದೆಲ್ಲ ನಡೆಯುತ್ತಿರುವುದನ್ನು ನೋಡಿ ಬೇಸರವಾಗಿದೆ. ಈ ಘಟನೆಯನ್ನು ಗಂಭೀರವಾಗಿ ಮತ್ತು ವಿಳಂಬ ಮಾಡದೆ ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಅಪರಾಧಿಗಳ ವಿರುದ್ಧ ತೆಗೆದುಕೊಳ್ಳುವ ಕಠಿಣ ಕ್ರಮಗಳು, ಮುಂದೆ ಇಂತಹ ತಪ್ಪುಗಳು ಆಗದಂತೆ ತಡೆಯುತ್ತವೆ ಎಂದಿದ್ದಾರೆ.

India vs Australia Test Series | ಜನಾಂಗೀಯ ನಿಂದನೆ ಪ್ರಕರಣ: ಟೀಂ ಇಂಡಿಯಾದ ಕ್ಷಮೆಯಾಚಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

Published On - 5:09 pm, Sun, 10 January 21