ಬೆಂಗಳೂರಿನ ಮತ್ತೋರ್ವ ಕೊರೊನಾ ವಾರಿಯರ್​ ಸೋಂಕಿಗೆ ಬಲಿ

ಬೆಂಗಳೂರು: ನಗರದಲ್ಲಿ ಕೊರೊನಾ ಮಹಾಮಾರಿ ಪೊಲೀಸ್​ ಸಿಬ್ಬಂದಿಯನ್ನು ಬಿಡದೆ ಕಾಡುತ್ತಿದೆ. ಇದೀಗ ಸೋಂಕಿಗೆ ಮತ್ತೊಬ್ಬ ಪೊಲೀಸ್​ ಸಿಬ್ಬಂದಿ ಬಲಿಯಾಗಿದ್ದಾರೆ. ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ASI ಒಬ್ಬರು ಇಂದು ಸೋಂಕಿಗೆ ಸಾವನ್ನಪ್ಪಿದ್ದಾರೆ. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಕಳೆದ ಎರಡು ದಿನಗಳ ಹಿಂದೆ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಆಸ್ಪತ್ರೆಯಲ್ಲಿ ಅಸುನೀಗಿದ್ದರು. ಹಾಗಾಗಿ ಅವರ ಸಾವಿನ ನಂತರ ಕೊವಿಡ್ ಟೆಸ್ಟ್ ಮಾಡಲಾಗಿದ್ದು ಅದರಲ್ಲಿ ಪಾಸಿಟಿವ್​ ಎಂದು ತಿಳಿದುಬಂದಿದೆ.  ಇದುವರೆಗೆ ಬೆಂಗಳೂರಲ್ಲಿ ಕೊರೊನಾಗೆ ಐವರು […]

ಬೆಂಗಳೂರಿನ ಮತ್ತೋರ್ವ ಕೊರೊನಾ ವಾರಿಯರ್​ ಸೋಂಕಿಗೆ ಬಲಿ

Updated on: Jun 28, 2020 | 11:10 AM

ಬೆಂಗಳೂರು: ನಗರದಲ್ಲಿ ಕೊರೊನಾ ಮಹಾಮಾರಿ ಪೊಲೀಸ್​ ಸಿಬ್ಬಂದಿಯನ್ನು ಬಿಡದೆ ಕಾಡುತ್ತಿದೆ. ಇದೀಗ ಸೋಂಕಿಗೆ ಮತ್ತೊಬ್ಬ ಪೊಲೀಸ್​ ಸಿಬ್ಬಂದಿ ಬಲಿಯಾಗಿದ್ದಾರೆ. ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ASI ಒಬ್ಬರು ಇಂದು ಸೋಂಕಿಗೆ ಸಾವನ್ನಪ್ಪಿದ್ದಾರೆ.

ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಕಳೆದ ಎರಡು ದಿನಗಳ ಹಿಂದೆ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಆಸ್ಪತ್ರೆಯಲ್ಲಿ ಅಸುನೀಗಿದ್ದರು. ಹಾಗಾಗಿ ಅವರ ಸಾವಿನ ನಂತರ ಕೊವಿಡ್ ಟೆಸ್ಟ್ ಮಾಡಲಾಗಿದ್ದು ಅದರಲ್ಲಿ ಪಾಸಿಟಿವ್​ ಎಂದು ತಿಳಿದುಬಂದಿದೆ.  ಇದುವರೆಗೆ ಬೆಂಗಳೂರಲ್ಲಿ ಕೊರೊನಾಗೆ ಐವರು ಪೊಲೀಸರು ಬಲಿಯಾಗಿದ್ದಾರೆ.

Published On - 11:08 am, Sun, 28 June 20