ಫಸ್ಟ್ ನೈಟ್​ನಲ್ಲೇ ಮದ್ಯ ಸಮಾರಾಧನೆ..ಒಂದೇ ತಿಂಗಳಿಗೆ ಮುರಿದು ಬಿತ್ತು ಮದುವೆ..ಯಾವೂರಲ್ಲಿ?

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬುದು ಸವಕಲು ಗಾದೆಯೇ ಸರಿ. ಇಲ್ಲೊಬ್ಬ ಭಂಡ ತನಗೆ ಮೊದಲೇ ಮದುವೆಯಾಗಿದ್ದರೂ ಅದನ್ನು ಮುಚ್ಚಿಟ್ಟು ಮತ್ತೊಂದು ಮದುವೆಯಾಗಿದ್ದಾನೆ. ಅಲ್ಲದೆ ಫಸ್ಟ್‌ ನೈಟ್‌ನಲ್ಲಿ ಕಂಠ ಪೂರ್ತಿ ಕುಡಿದು ಬಂದಿದ್ದಾನಂತೆ ಹೀಗಾಗಿ ಪತ್ನಿ ಗಂಡನ ವಿರುದ್ಧ ಕೇಸ್ ದಾಖಲಿಸಿ ಅರೆಸ್ಟ್ ಮಾಡಿಸಿದ್ದಾಳೆ.

ಫಸ್ಟ್ ನೈಟ್​ನಲ್ಲೇ ಮದ್ಯ ಸಮಾರಾಧನೆ..ಒಂದೇ ತಿಂಗಳಿಗೆ ಮುರಿದು ಬಿತ್ತು ಮದುವೆ..ಯಾವೂರಲ್ಲಿ?
ಭರತ್
Updated By: guruganesh bhat

Updated on: Dec 03, 2020 | 12:44 PM

ಬೆಂಗಳೂರು: ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬುದು ಸವಕಲು ಗಾದೆಯೇ ಸರಿ. ಇಲ್ಲೊಬ್ಬ ಭಂಡ ತನಗೆ ಮೊದಲೇ ಮದುವೆಯಾಗಿದ್ದರೂ ಅದನ್ನು ಮುಚ್ಚಿಟ್ಟು ಮತ್ತೊಂದು ಮದುವೆಯಾಗಿದ್ದಾನೆ. ಅಲ್ಲದೆ ಫಸ್ಟ್‌ ನೈಟ್‌ನಲ್ಲಿ ಕಂಠ ಪೂರ್ತಿ ಕುಡಿದು ಬಂದಿದ್ದಾನಂತೆ ಹೀಗಾಗಿ ಪತ್ನಿ ಗಂಡನ ವಿರುದ್ಧ ಕೇಸ್ ದಾಖಲಿಸಿ ಅರೆಸ್ಟ್ ಮಾಡಿಸಿದ್ದಾಳೆ.

 

ಪತಿ ಮಹಾಶಯ ಭರತ್

ಮದುವೆಯಾದ ಒಂದೇ ತಿಂಗಳಲ್ಲಿ ಮುರಿದು ಬಿತ್ತು ದಾಂಪತ್ಯ ಜೀವನ:
ಅಕ್ಟೋಬರ್ 29ಕ್ಕೆ ಮದುವೆಯಾಗಿ ನವೆಂಬರ್ 29ಕ್ಕೆ ಆ ಮದುವೆ ಮುರಿದುಬಿದ್ದಿದೆ ಇಂತಹ ಘಟನೆಗೆ ಸಾಕ್ಷಿಯಾಗಿದ್ದು ಬೆಂಗಳೂರಿನ ಎಲ್‌ಬಿಎಸ್ ನಗರ. ಮದುವೆಯಾಗಿ ಹೊಸ ಜೀವನದ ಕನಸು ಕಂಡಿದ್ದ ಆಕೆಗೆ ಇದು ತನ್ನ ಜೀವನದಲ್ಲೇ ಮರೆಯಲಾಗದ ಘಟನೆಯಾಗಿದೆ. ಫಸ್ಟ್ ನೈಟ್​ಗೆ ಕುಡಿದು ಬಂದ ಗಂಡ ಭರತ್​ನನ್ನು ಕಂಡು ಹೆಂಡತಿ ಕಕ್ಕಾಬಿಕ್ಕಿಯಾಗಿದ್ದಳು.

ವರೋಪಚಾರಕ್ಕೆ ಐಷಾರಾಮಿ ಕಾರನ್ನೇ ಪಡೆದಿದ್ದ ಪತಿರಾಯ

ಮೊದಲ ರಾತ್ರಿಯೇ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿತ್ತು. ಹೀಗಾಗಿ ಯುವತಿ ಪೋಷಕರು ಸಮಾಧಾನ ಮಾಡಿ ಫಸ್ಟ್ ನೈಟ್ ಮುಂದೂಡಿದ್ದರು. ಆದರೆ ಎರಡನೇ ದಿನವೂ ಭತರ್ ಮತ್ತೆ ಕಂಠಪೂರ್ತಿ ಕುಡಿದು ಬಂದಿದ್ದ. ಎರಡನೇ ದಿನದ ರಾತ್ರಿಯೂ ಕುಡುಕ ಗಂಡನೊಂದಿಗೆ ಕಿರಿಕ್ ಆಗಿ ಫಸ್ಟ್ ನೈಟ್​ಗೆ ಪತ್ನಿ ನಿರಾಕರಿಸಿದ್ದಳು. ಇದಕ್ಕೆ ರೊಚ್ಚಿಗೆದ್ದ ಪತಿರಾಯ ಆಕೆಯನ್ನು ಥಳಿಸಿದ್ದಾನೆ. ಬಳಿಕ ಪತ್ನಿ ಕಂಠಪೂರ್ತಿ ಕುಡಿಯುವ ಅಭ್ಯಾಸವಿದ್ರೂ ವಿಷಯ ಮುಚ್ಚಿಟ್ಟಿದ್ದಾರೆ ಎಂದು ಗಂಡನ ವಿರುದ್ಧ ದೂರು ದಾಖಲಿಸಿದ್ದಾಳೆ.

ಪತಿ ಭರತ್ ಜೊತೆ ಇರಲು ನಿರಾಕರಿಸಿದ ಪತ್ನಿ:
ಇದಾದ ಬಳಿಕ ಪತಿ ಭರತ್ ಹಾಗೂ ಆತನ ಪೋಷಕರಿಂದ ಕಿರುಕುಳ ಶುರುವಾಗಿತ್ತು. ಮಾಟಮಂತ್ರ ಮಾಡಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ನನ್ನ ಮೇಲೆ ನನ್ನ ಗಂಡ ಭರತ್ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾಳೆ. ಈ ಮೊದಲೇ ವಿವಾಹವಾಗಿದ್ರೂ ತಿಳಿಸದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ನವೆಂಬರ್ 29ರಂದು ಭರತ್, ಅತ್ತೆ, ಮಾವನ ವಿರುದ್ಧ ಹೆಚ್‌ಎಎಲ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪತ್ನಿಗೆ ಕಿರುಕುಳ ನೀಡಿದ ಆರೋಪದಡಿ ಪತಿ ಭರತ್​ನನ್ನು ಅರೆಸ್ಟ್ ಮಾಡಲಾಗಿದೆ.

Published On - 8:57 am, Thu, 3 December 20