ಆನೆ ದಾಳಿ: ಅರಣ್ಯ ಇಲಾಖೆಯ ಗೂಡ್ಸ್ ಟೆಂಪೋ ಜಖಂ, ಡ್ರೇವರ್​ ಬಚಾವ್!

|

Updated on: Jan 17, 2020 | 11:00 AM

ಮೈಸೂರು: ಅರಣ್ಯ ಇಲಾಖೆಗೆ ಸೇರಿದ ಗೂಡ್ಸ್ ಟೆಂಪೋ ಮೇಲೆ ಆನೆ ದಾಳಿ ಮಾಡಿರುವ ಘಟನೆ ಹಣಸೂರು ತಾಲೂಕಿನ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ನಾಗರಹೊಳೆ ಅರಣ್ಯದ ವೀರನಹೊಸಳ್ಳಿ ರೇಂಜ್​ನ ರಸ್ತೆಯಲ್ಲಿ ಆನೆ ದಾಳಿ ಮಾಡಿ ವಾಹನವನ್ನು ಜಖಂಗೊಳಿಸಿದೆ. ಆನೆ ಬರುತ್ತಿದ್ದಂತೆ ಚಾಲಕ ವಾಹನವನ್ನು ಹಿಂಬದಿಯಾಗಿ ಚಲಾಯಿಸಿದ್ದಾನೆ. ಆದ್ರೂ ಸಹ ವಾಹನದ ಮುಂಭಾಗ ನಜ್ಜುಗುಜ್ಜಾಗಿದೆ. ಆನೆಯ ಹಿಂಭಾಗದಲ್ಲಿ ಹೊಗೆ ಸಹ ಕಾಣಿಸಿಕೊಂಡಿದೆ. ಈ ಕಾರಣದಿಂದ ಆನೆ ದಾಳಿ ಮಾಡಿರಬಹುದು ಎನ್ನಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆನೆ ದಾಳಿಯ ವಿಡಿಯೋ […]

ಆನೆ ದಾಳಿ: ಅರಣ್ಯ ಇಲಾಖೆಯ ಗೂಡ್ಸ್ ಟೆಂಪೋ ಜಖಂ, ಡ್ರೇವರ್​ ಬಚಾವ್!
Follow us on

ಮೈಸೂರು: ಅರಣ್ಯ ಇಲಾಖೆಗೆ ಸೇರಿದ ಗೂಡ್ಸ್ ಟೆಂಪೋ ಮೇಲೆ ಆನೆ ದಾಳಿ ಮಾಡಿರುವ ಘಟನೆ ಹಣಸೂರು ತಾಲೂಕಿನ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ನಾಗರಹೊಳೆ ಅರಣ್ಯದ ವೀರನಹೊಸಳ್ಳಿ ರೇಂಜ್​ನ ರಸ್ತೆಯಲ್ಲಿ ಆನೆ ದಾಳಿ ಮಾಡಿ ವಾಹನವನ್ನು ಜಖಂಗೊಳಿಸಿದೆ.

ಆನೆ ಬರುತ್ತಿದ್ದಂತೆ ಚಾಲಕ ವಾಹನವನ್ನು ಹಿಂಬದಿಯಾಗಿ ಚಲಾಯಿಸಿದ್ದಾನೆ. ಆದ್ರೂ ಸಹ ವಾಹನದ ಮುಂಭಾಗ ನಜ್ಜುಗುಜ್ಜಾಗಿದೆ. ಆನೆಯ ಹಿಂಭಾಗದಲ್ಲಿ ಹೊಗೆ ಸಹ ಕಾಣಿಸಿಕೊಂಡಿದೆ. ಈ ಕಾರಣದಿಂದ ಆನೆ ದಾಳಿ ಮಾಡಿರಬಹುದು ಎನ್ನಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆನೆ ದಾಳಿಯ ವಿಡಿಯೋ ವೈರಲ್ ಆಗಿದೆ.



Published On - 9:44 am, Fri, 17 January 20