ಸಿಎಎ ವಿರೋಧಿ ಅಲೆ: ಬೆಂಗಳೂರಿನಲ್ಲಿ ಯುವಕನ ಮೇಲೆ ಅಟ್ಯಾಕ್, 6 SDPI ಕಾರ್ಯಕರ್ತರ ಅರೆಸ್ಟ್
ಬೆಂಗಳೂರು: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿಯೂ ಡಿ. 22ರಂದು ಸಿಎಎ ಪರ ಜನಜಾಗೃತಿ ಕಾರ್ಯಕ್ರಮ ಮುಗಿಸಿ ತೆರಳುವಾಗ ಜೆಸಿ ನಗರದ ರಸ್ತೆಯಲ್ಲಿ ಯುವಕನ ಮೇಲೆ ಅಟ್ಯಾಕ್ ನಡೆದಿತ್ತು. ಇದೀಗ ಪ್ರಕರಣ ಸಂಬಂಧ ಸಾಧಿಕ್, ಅಕ್ಬರ್ ಸೇರಿದಂತೆ ಆರು ಜನ ಆರೋಪಿಗಳನ್ನ ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಕಮಿಷನರ್ ಭಾಸ್ಕರ್ ರಾವ್ ಏನ್ ಹೇಳಿದ್ರು?: ಡಿ. 22ರಂದು ಟೌನ್‌ಹಾಲ್ ಬಳಿ ಇಂಡಿಯಾ ಫಾರ್ ಸಿಎಎ ವತಿಯಿಂದ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಮುಗಿಸಿ ಸಂಜೆ […]
ಬೆಂಗಳೂರು: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿಯೂ ಡಿ. 22ರಂದು ಸಿಎಎ ಪರ ಜನಜಾಗೃತಿ ಕಾರ್ಯಕ್ರಮ ಮುಗಿಸಿ ತೆರಳುವಾಗ ಜೆಸಿ ನಗರದ ರಸ್ತೆಯಲ್ಲಿ ಯುವಕನ ಮೇಲೆ ಅಟ್ಯಾಕ್ ನಡೆದಿತ್ತು. ಇದೀಗ ಪ್ರಕರಣ ಸಂಬಂಧ ಸಾಧಿಕ್, ಅಕ್ಬರ್ ಸೇರಿದಂತೆ ಆರು ಜನ ಆರೋಪಿಗಳನ್ನ ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಕಮಿಷನರ್ ಭಾಸ್ಕರ್ ರಾವ್ ಏನ್ ಹೇಳಿದ್ರು?: ಡಿ. 22ರಂದು ಟೌನ್‌ಹಾಲ್ ಬಳಿ ಇಂಡಿಯಾ ಫಾರ್ ಸಿಎಎ ವತಿಯಿಂದ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಮುಗಿಸಿ ಸಂಜೆ 6 ಗಂಟೆ ವೇಳೆಗೆ ಮನೆಗೆ ಹೊರಟಿದ್ದ ವರುಣ್ ಎಂಬ ಯುವಕನ ಮೇಲೆ ಆರೋಪಿಗಳು ಅಟ್ಯಾಕ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 2 ಬೈಕ್ನಲ್ಲಿ ಬಂದಿದ್ದ SDPI ಕಾರ್ಯಕರ್ತರು ಹಿಂಬದಿಯಿಂದ ಬಂದು ರಾಡ್ ಹಾಗು ಲಾಂಗ್ಗಳಿಂದ ಹಲ್ಲೆ ಮಾಡಿ, ಎಸ್ಕೇಪ್ ಆಗಿದ್ದರು.
ಪ್ರಕರಣ ಸಂಬಂಧ ಸಿಸಿಟಿವಿ ಆಧಾರದ ಮೇರೆಗೆ 6 ಜನ SDPI ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಪೊಲೀಸರೇ ಶಾಕ್ ಆಗಿದ್ದಾರೆ. ವರುಣ್ ಮೇಲೆ ಹಲ್ಲೆಗೆ ವೈಯಕ್ತಿಕ ಕಾರಣವೇ ಇರಲಿಲ್ಲ. ಸಿಎಎನಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ವರುಣ್ ಹತ್ಯೆಗೆ ಆರೋಪಿಗಳು ಮುಂದಾಗಿದ್ದರು ಎನ್ನಲಾಗಿದೆ.
ಸಿಎಎ ಪರ ಱಲಿ ಬಳಿಕ ವರುಣ್ ಕೊಲೆಗೆ ಯತ್ನಿಸಲಾಗಿತ್ತು. ತುರ್ತು ಚಿಕಿತ್ಸೆಯ ಬಳಿಕ ಆತ ಬದುಕುಳಿದಿದ್ದಾನೆ. ಟೌನ್‌ಹಾಲ್ ಬಳಿ ಸಿಎಎ ಪರವಾಗಿ ಱಲಿ ನಡೆಸಿದ್ದರು. ಈ ಕಾರ್ಯಕ್ರಮದ ಬಗ್ಗೆ ಎಸ್‌ಡಿಪಿಐ ಸದಸ್ಯರಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ SDPIನ 6 ಸದಸ್ಯರು 2 ಸಭೆ ಮಾಡಿದ್ದರು. ಸಿಎಎ ಪರ ಱಲಿಯಲ್ಲಿ ಗಲಾಟೆಗೆ ಪ್ಲ್ಯಾನ್ ಮಾಡಿದ್ದರು. ಆದ್ರೆ ಸಮಾವೇಶಕ್ಕೆ ಪೊಲೀಸರ ಹೆಚ್ಚು ಭದ್ರತೆ ನೀಡಿದ್ದರಿಂದ ಅವರ ಕೈಲಿ ಆಗಲಿಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Published On - 11:41 am, Fri, 17 January 20