ರಾಜ್ಯದ ವಿವಿಧೆಡೆ ಮುಂದುವರಿದ ಕಾಡಾನೆ ಉಪಟಳ: ರೈತರ ಬೆಳೆ ಹಾನಿ

|

Updated on: Mar 02, 2020 | 12:46 PM

ಮಡಿಕೇರಿ: ರಾಜ್ಯದ ವಿವಿಧ ಭಾಗಗಳಲ್ಲಿ ಇಂದು ಕಾಡಾನೆಗಳು ತಮ್ಮ ಹಾವಳಿಯನ್ನು ಮುಂದುವರಿಸಿವೆ. ರೈತರ ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸಿವೆ. ಸೋಮವಾರಪೇಟೆ ತಾಲೂಕಿನ ಕಟ್ಟೆಪುರ ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿದ್ದು, ತೋಟದಲ್ಲಿನ ಬೆಳೆಗಳನ್ನು ನಾಶಪಡಿಸಿದೆ. ಕಳೆದ ಮೂರು ತಿಂಗಳಿನಿಂದ ಗ್ರಾಮದ ತೋಟಗಳಲ್ಲೇ ಕಾಡಾನೆ ಬೀಡು ಬಿಟ್ಟಿದ್ದು, ಕಾಡಾನೆ ಹಾವಳಿಗೆ ಕಟ್ಟೆಪುರ ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ. ಹಗಲು ರಾತ್ರಿ ಎನ್ನದೆ ಜನವಸತಿ ಪ್ರದೇಶದಲ್ಲಿ ಆನೆ ವಾಕ್ ಮಾಡುತ್ತಿದ್ದು, ಕಾಡಾನೆ ವಾಕಿಂಗ್‌ಗೆ ಗ್ರಾಮದ ಜನತೆ ಹೈರಾಣಾಗಿದ್ದಾರೆ. ಮೂರು ತಿಂಗಳಾದರೂ ಇತ್ತ ಬರದ […]

ರಾಜ್ಯದ ವಿವಿಧೆಡೆ ಮುಂದುವರಿದ ಕಾಡಾನೆ ಉಪಟಳ: ರೈತರ ಬೆಳೆ ಹಾನಿ
Follow us on

ಮಡಿಕೇರಿ: ರಾಜ್ಯದ ವಿವಿಧ ಭಾಗಗಳಲ್ಲಿ ಇಂದು ಕಾಡಾನೆಗಳು ತಮ್ಮ ಹಾವಳಿಯನ್ನು ಮುಂದುವರಿಸಿವೆ. ರೈತರ ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸಿವೆ. ಸೋಮವಾರಪೇಟೆ ತಾಲೂಕಿನ ಕಟ್ಟೆಪುರ ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿದ್ದು, ತೋಟದಲ್ಲಿನ ಬೆಳೆಗಳನ್ನು ನಾಶಪಡಿಸಿದೆ. ಕಳೆದ ಮೂರು ತಿಂಗಳಿನಿಂದ ಗ್ರಾಮದ ತೋಟಗಳಲ್ಲೇ ಕಾಡಾನೆ ಬೀಡು ಬಿಟ್ಟಿದ್ದು, ಕಾಡಾನೆ ಹಾವಳಿಗೆ ಕಟ್ಟೆಪುರ ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ.

ಹಗಲು ರಾತ್ರಿ ಎನ್ನದೆ ಜನವಸತಿ ಪ್ರದೇಶದಲ್ಲಿ ಆನೆ ವಾಕ್ ಮಾಡುತ್ತಿದ್ದು, ಕಾಡಾನೆ ವಾಕಿಂಗ್‌ಗೆ ಗ್ರಾಮದ ಜನತೆ ಹೈರಾಣಾಗಿದ್ದಾರೆ. ಮೂರು ತಿಂಗಳಾದರೂ ಇತ್ತ ಬರದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಡಿಯಲ್ಲೂ ಮುಂದುವರಿದ ಕಾಡಾನೆಗಳ ಹಾವಳಿ:
ಕೋಲಾರ: ಜಿಲ್ಲೆಯ ಗಡಿಯಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಮಾಲೂರು ತಾಲೂಕಿನ ಎಳೇಸಂದ್ರ ಗ್ರಾಮದ ಬಳಿ ರೈತರ ಬೆಳೆ ನಾಶಪಡಿಸಿವೆ. ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳು ದಾಳಿ ನಡೆಸಿ 2 ಎಕರೆಯಲ್ಲಿ ಬೆಳೆದಿದ್ದ ವಿವಿಧ ಬೆಳೆಗಳನ್ನು ನಾಶಪಡಿಸಿವೆ. ಕಾಡಾನೆಗಳ ದಾಳಿಯಿಂದ ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತರು, ಸ್ಥಳಕ್ಕೆ ಬಾರದ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಲೆನಾಡು ಭಾಗದಲ್ಲೂ ಒಂಟಿ ಸಲಗ ಉಪಟಳ:
ಹಾಸನ: ಮಲೆನಾಡು ಭಾಗದಲ್ಲೂ ಕಾಡಾನೆ ಉಪಟಳ ಹೆಚ್ಚಾಗಿದ್ದು, ಸಕಲೇಶಪುರ ತಾಲೂಕಿನ ಹೆಗ್ಗೋವೆ ಗ್ರಾಮದಲ್ಲಿ ದನದ ಕೊಟ್ಟಿಗೆಗೆ ಹಾಕಿದ್ದ ಶೀಟ್​ಗಳನ್ನೇ ಒಂಟಿ ಸಲಗ ಧ್ವಂಸಗೊಳಿಸಿದೆ. ಪ್ರತಿನಿತ್ಯ ಮನೆಯ ಆವರಣಕ್ಕೆ ಬಂದು ಕಾಡಾನೆಗಳು ಆತಂಕ ಸೃಷ್ಟಿಸುತ್ತಿವೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಆನೆ ದಾಳಿಯ ಸಮಸ್ಯೆ ಪರಿಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.