ಕೋಲಾರ: ಚುನಾವಣೆಗೈ ಮುನ್ನ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿ ಭರವಸೆಗಳನ್ನು ಇದೀಗ ಸಿದ್ದರಾಮಯ್ಯನವರ ಸರ್ಕಾರ ಜಾರಿ ಮಾಡಿದೆ. ಆದ್ರೆ, ಕೆಲ ಯೋಜನೆಗಳಿಗೆ ನಾನಾ ಷರತ್ತುಗಳು ವಿಧಿಸಲಾಗಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಗೃಹಜ್ಯೋತಿ ಯೋಜನೆ ಸಂಬಂಧ ಜನರು ವಿದ್ಯುತ್ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಈ ಐದು ಗ್ಯಾರಂಟಿಗಳಿಂದ ಒಂದಲ್ಲ ಒಂದು ರೀತಿಯಾಗಿ ರಾಜ್ಯದಲ್ಲಿ ಕಿರಿಕ್ಗಳು ಆಗುತ್ತಿವೆ. ಇದೀಗ ಕೋಲಾರದಲ್ಲಿ ಜನರು ಲೋನ್ ಕಟ್ಟಲ್ಲ ಎನ್ನುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ವೋಟ್ ಹಾಕಿದ್ದೇವೆ. ಹಾಗಾಗಿ ಲೋನ್ ಕಟ್ಟಲ್ಲ ಎಂದು ಮಹಿಳೆಯರು ಪಟ್ಟು ಹಿಡಿದಿದ್ದಾರೆ.