ಬೆಳಗಾವಿ: ರಾಜ್ಯ ಉತ್ತರ ಭಾಗದ ಬೆಳಗಾವಿ ಜಿಲ್ಲೆ ಮತ್ತು ಹೊಂದಿಕೊಂಡಿರುವ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಹಳ್ಳಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಹೀಗಾಗಿ ಘಟಪ್ರಭಾ ನದಿಯೂ ಕೂಡಾ ತುಂಬಿ ಹರಿಯುತ್ತಿದ್ದು, ಇದರ ಪರಿಣಾಮ ಪ್ರಖ್ಯಾತ ಗೋಕಾಕ್ ಫಾಲ್ಸ್ ಮೇಲಾಗಿದೆ.
ಹೌದು ಸತತ ಮಳೆ ಸುರಿಯುತ್ತಿರೋದ್ರಿಂದ ಬೆಳಗಾವಿ ಜಿಲ್ಲೆಯಲ್ಲಿರುವ ಗೋಕಾಕ್ ಫಾಲ್ಸ್‌ಗೆ ಈಗ ಎಲ್ಲಿಲ್ಲದ ಕಳೆ ಬಂದಿದೆ. ಇದುವರೆಗೆ ಸೈಲೆಂಟ್ ಆಗಿದ್ದ ಗೋಕಾಕ್ ಫಾಲ್ಸ್ ಈಗ ವೈಲೆಂಟ್ ಆಗಿದೆ. ಹರಿಯುತ್ತಿರುವ ನೀರಿನ ರಭಸಕ್ಕೆ ಭೋರ್ಗೆರೆಯುತ್ತಿದೆ. ನೀರು ಫಾಲ್ಸ್‌ನಲ್ಲಿ ದುಮುಕಿ ಬೀಳುತ್ತಿದ್ದರೆ ನೋಡುವವರ ಎದೆ ಝಲ್ ಎನಿಸುವಂತಿದೆ.
ಹಾಗೇನೆ ದೂರದಿಂದ ನೋಡಿದ್ರೆ ಎರಡು ಕಣ್ಣುಗಳ ಸಾಲದು. ಹಾಲಿನ ಹೊಳೆಯೇ ಹರಿಯುತ್ತಿದೆಯಾ ಎನ್ನುವಂತಿದೆ ಫಾಲ್ಸ್‌ನಿಂದ ದುಮುಕಿ ಬೀಳುತ್ತಿರುವ ನೀರು. ಈ ರೀತಿ ಫಾಲ್ಸ್‌ನಲ್ಲಿ ನೀರು ಹರಿಯುತ್ತಿರೋದು ಗೊತ್ತಾಗುತ್ತಿದ್ದಂತೆ ಜನರು ಕೂಡಾ ನೋಡಿ ಕಣ್ತುಂಬಿಕೊಳ್ಳಲು ಗೋಕಾಕ್ ಫಾಲ್ಸ್‌ನತ್ತ ಬರುತ್ತಿದ್ದಾರೆ.
ಆದ್ರೆ ಸರ್ಕಾರ ಮಾತ್ರ ಇಲ್ಲಿ ಯಾವುದೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಶತಮಾನದ ಇತಿಹಾಸ ವಿರುವ ಹಾಗೂ ಭಾರತದ ನಯಾಗಾರ ಎಂದೇ ಖ್ಯಾತಿಯಾಗಿರುವ ಗೋಕಾಕ್ ಫಾಲ್ಸ್‌ನಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದ್ರೆ ಇದು ಈಗಿನ ಮಟ್ಟಕ್ಕಿಂತ ದೊಡ್ಡ ಪ್ರಮಾಣ ಟೂರಿಸಮ್ ಕೇಂದ್ರವಾಗೋದ್ರಲ್ಲಿ ಅನುಮಾನವೇ ಇಲ್ಲ.