ದಕ್ಷಿಣ ಕಾಶ್ಮೀರ: ಮತ್ತೊಬ್ಬ ಸರಪಂಚ್ ಮೇಲೆ ಉಗ್ರರ ದಾಳಿ
ಶಂಕಿತ ಉಗ್ರಗಾಮಿಗಳು ದಕ್ಷಿಣ ಕಾಶ್ಮೀರ್ನಲ್ಲಿ ಬಿಜೆಪಿ ಸರಪಂಚ್ಗಳ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದ್ದಾರೆ. ಇಂದು ಬೆಳಗ್ಗೆ ಕುಲ್ಗಾಮ್ ಜಿಲ್ಲೆಯ ವೆಸ್ಸು ಎಂಬ ಗ್ರಾಮದ ಸರಪಂಚ್ ಸಾಜದ್ ಅಹ್ಮದ್ ಖಂಡೇ ಅವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಪರಾರಿಯಾದರು. ಗಂಭೀರವಾಗಿ ಗಾಯಗೊಂಡಿದ್ದ ಸಾಜದ್ ಅವರನ್ನು ಅನಂತನಾಗ್ನಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜಿಗೆ (ಜಿ ಎಮ್ ಸಿ) ತೆಗೆದುಕೊಂಡು ಹೋಗಲಾಯಿತಾದರೂ ಅಲ್ಲಿಗೆ ತಲುಪುವ ಮೊದಲೇ ಅವರ ಪ್ರಾಣಪಕ್ಷಿ ಹಾರಿಹೋಗಿದೆಯೆಂದು ವೈದ್ಯರು ಘೋಷಿಸಿದರು. ಕಳೆದೆರಡು ದಿನಗಳಿಂದ ದಕ್ಷಿಣ ಕಾಶ್ಮೀರನಲ್ಲಿ ಬಿಜೆಪಿ ಸರಪಂಚ್ಗಳ […]
ಶಂಕಿತ ಉಗ್ರಗಾಮಿಗಳು ದಕ್ಷಿಣ ಕಾಶ್ಮೀರ್ನಲ್ಲಿ ಬಿಜೆಪಿ ಸರಪಂಚ್ಗಳ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದ್ದಾರೆ. ಇಂದು ಬೆಳಗ್ಗೆ ಕುಲ್ಗಾಮ್ ಜಿಲ್ಲೆಯ ವೆಸ್ಸು ಎಂಬ ಗ್ರಾಮದ ಸರಪಂಚ್ ಸಾಜದ್ ಅಹ್ಮದ್ ಖಂಡೇ ಅವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಪರಾರಿಯಾದರು.
ಗಂಭೀರವಾಗಿ ಗಾಯಗೊಂಡಿದ್ದ ಸಾಜದ್ ಅವರನ್ನು ಅನಂತನಾಗ್ನಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜಿಗೆ (ಜಿ ಎಮ್ ಸಿ) ತೆಗೆದುಕೊಂಡು ಹೋಗಲಾಯಿತಾದರೂ ಅಲ್ಲಿಗೆ ತಲುಪುವ ಮೊದಲೇ ಅವರ ಪ್ರಾಣಪಕ್ಷಿ ಹಾರಿಹೋಗಿದೆಯೆಂದು ವೈದ್ಯರು ಘೋಷಿಸಿದರು.
ಕಳೆದೆರಡು ದಿನಗಳಿಂದ ದಕ್ಷಿಣ ಕಾಶ್ಮೀರನಲ್ಲಿ ಬಿಜೆಪಿ ಸರಪಂಚ್ಗಳ ಮೇಲೆ ಉಗ್ರಗಾಮಿಗಳು ನಡೆಸಿರುವ ಎರಡನೇ ದಾಳಿ ಇದಾಗಿದೆ. ಆಗಸ್ಟ ನಾಲ್ಕರಂದು ಇದೇ ಕುಲ್ಗಾಮ್ ಜಿಲ್ಲೆಯ ಅಖ್ರಾನ್ ಖಾಜಿಗುಂಡ್ ಎಂಬ ಗ್ರಾಮದ ಸರಪಂಚ್, ಆರಿಫ್ ಅಹ್ಮದ್ರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಆರಿಫ್, ಜಿ ಎಮ್ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.