ಮಳೆ ಮಳೆ: ಮರೀನ್ ಡ್ರೈವ್​ ಬಳಿ ಭಯಾನಕ ಅಲೆಗಳು..! ICU ನಲ್ಲಿದೆ ನೆರೆಯ ಮಹಾರಾಷ್ಟ್ರ

[lazy-load-videos-and-sticky-control id=”dGSIidq1L6g”] ಪಶ್ಚಿಮ ಘಟ್ಟದ ಹಸಿರು ಹಾದುಹೋಗಿರುವ ದೇಶದ ಪ್ರತಿಯೊಂದು ರಾಜ್ಯವೂ ಮಳೆ ಆರ್ಭಟಕ್ಕೆ ನಲುಗಿದೆ. ಈ ಪೈಕಿ ನೆರೆಯ ಮಹಾರಾಷ್ಟ್ರ ICU ತಲುಪಿದೆ. ಕಳೆದ 2 ದಿನಗಳಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬಿಟ್ಟೂಬಿಡದೆ ಮಳೆ ಸುರಿಯುತ್ತಿರುವುದರಿಂದ ಭಾರಿ ಪ್ರವಾಹ ಸೃಷ್ಟಿಯಾಗಿದೆ. ಯಾಮಾರಿದ್ರೆ ಮರುಕ್ಷಣವೇ ಆ ವ್ಯಕ್ತಿ ಹೆಣವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಂದರಲ್ಲಿ ನುಗ್ಗಿರುವ ಮಳೆ ನೀರು. ರಸ್ತೆಯಲ್ಲಿ ಚಲಿಸಲು ಹರಸಾಹಪಡುತ್ತಿರುವ ವಾಹನ ಸವಾರರು. ನೆರೆಯ ಮಹಾರಾಷ್ಟ್ರದ ಪರಿಸ್ಥಿತಿ ಚಿಂತಾಜನಕವಾಗಿದೆ. ಮಳೆಯ ಹೊಡೆತಕ್ಕೆ ಸಿಲುಕಿ ಜನ […]

ಮಳೆ ಮಳೆ: ಮರೀನ್ ಡ್ರೈವ್​ ಬಳಿ ಭಯಾನಕ ಅಲೆಗಳು..! ICU ನಲ್ಲಿದೆ ನೆರೆಯ ಮಹಾರಾಷ್ಟ್ರ
Follow us
ಸಾಧು ಶ್ರೀನಾಥ್​
|

Updated on:Aug 07, 2020 | 12:53 PM

[lazy-load-videos-and-sticky-control id=”dGSIidq1L6g”]

ಪಶ್ಚಿಮ ಘಟ್ಟದ ಹಸಿರು ಹಾದುಹೋಗಿರುವ ದೇಶದ ಪ್ರತಿಯೊಂದು ರಾಜ್ಯವೂ ಮಳೆ ಆರ್ಭಟಕ್ಕೆ ನಲುಗಿದೆ. ಈ ಪೈಕಿ ನೆರೆಯ ಮಹಾರಾಷ್ಟ್ರ ICU ತಲುಪಿದೆ. ಕಳೆದ 2 ದಿನಗಳಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬಿಟ್ಟೂಬಿಡದೆ ಮಳೆ ಸುರಿಯುತ್ತಿರುವುದರಿಂದ ಭಾರಿ ಪ್ರವಾಹ ಸೃಷ್ಟಿಯಾಗಿದೆ. ಯಾಮಾರಿದ್ರೆ ಮರುಕ್ಷಣವೇ ಆ ವ್ಯಕ್ತಿ ಹೆಣವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಂದರಲ್ಲಿ ನುಗ್ಗಿರುವ ಮಳೆ ನೀರು. ರಸ್ತೆಯಲ್ಲಿ ಚಲಿಸಲು ಹರಸಾಹಪಡುತ್ತಿರುವ ವಾಹನ ಸವಾರರು. ನೆರೆಯ ಮಹಾರಾಷ್ಟ್ರದ ಪರಿಸ್ಥಿತಿ ಚಿಂತಾಜನಕವಾಗಿದೆ. ಮಳೆಯ ಹೊಡೆತಕ್ಕೆ ಸಿಲುಕಿ ಜನ ಜೀವನ ಜರ್ಜರಿತವಾಗಿಬಿಟ್ಟಿದೆ.

ಒಂದೇ ದಿನ.. ಒಂದೇ ನಗರ..! ಸುರಿದಿದ್ದು ಬರೋಬ್ಬರಿ 215.8 ಮಿ.ಮೀ ಮಳೆ..! ಕಳೆದ ಕೆಲ ವರ್ಷಗಳಿಂದ ಮಯಾನಗರಿ ಮುಂಬೈನ ನಿವಾಸಿಗಳು ಮಳೆಗಾಲ ಅಂದರೆ ಸಾಕು ಬೆಚ್ಚಿಬೀಳ್ತಿದ್ದಾರೆ. ಯಾಕಂದ್ರೆ ಮಳೆಗಾಲ ಶುರುವಾದ್ರೆ ಸಾಕು ವರುಣ ಕೊಡುತ್ತಿರುವ ಕಾಟಕ್ಕೆ ಇವರೆಲ್ಲಾ ಸುಸ್ತಾಗಿ ಹೋಗಿದ್ದಾರೆ. ಯಾವ ಸಂದರ್ಭದಲ್ಲಿ, ಅದೆಷ್ಟು ಪ್ರಮಾಣದ ಮಳೆ ಬೀಳುತ್ತೋ ಆ ವರುಣ ದೇವನಿಗೆ ಗೊತ್ತು, ಮಳೆ ಸುರಿಸುವ ಮೋಡಗಳಿಗೆ ಗೊತ್ತು. ಈ ಬಾರಿ ಕೂಡ ಇದೇ ಸೀನ್ ರಿಪೀಟ್ ಆಗಿದೆ. ಒಂದೇ ದಿನ ಒಂದೇ ನಗರದಲ್ಲಿ ಬರೋಬ್ಬರಿ 215.8 ಮಿಲಿ ಮೀಟರ್ ಮಳೆ ಸುರಿದಿದೆ. ಹನ್ನೆರಡು ಗಂಟೆಗಳಲ್ಲಿ ಬಿರುಗಾಳಿ ಸಹಿತ ದಾಖಲೆ ಪ್ರಮಾಣದಲ್ಲಿ ಮಳೆಯಾಗಿರೋದ್ರಿಂದ ಇಡೀ ಮುಂಬೈ ಸಮುದ್ರದಲ್ಲಿ ಮುಳುಗಿದಂತಾಗಿದೆ. ಭೋರ್ಗರೆಯುತ್ತಿದೆ ಸಮುದ್ರ, ಮರೀನ್ ಡ್ರೈವ್​ ಬಳಿ ಭಯಾನಕ ಅಲೆಗಳು..! ಭಾರಿ ಪ್ರಮಾಣದ ಮಳೆ ಹಾಗೂ ಗಾಳಿಯಿಂದಾಗಿ ಮುಂಬೈನ ಕಡಲತೀರದಲ್ಲಿ ರಾಕ್ಷಸ ಗಾತ್ರದ ಅಲೆಗಳು ಈಗ ಸೃಷ್ಟಿಯಾಗಿದ್ದು, ಕಡ ತಡಿಯಲ್ಲಿ ಸಮುದ್ರ ಭೋರ್ಗರೆಯುತ್ತಿದೆ. ಅದರಲ್ಲೂ ಮುಂಬೈನ ಮರೀನ್ ಡ್ರೈವ್ ಬೀಚ್‌ನಲ್ಲಿ ರಾಕ್ಷಸ ಗಾತ್ರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿವೆ. ಮೊದಲೇ ಭಯಗೊಂಡಿದ್ದ ಮುಂಬೈ ನಿವಾಸಿಗಳಲ್ಲಿ ರಾಕ್ಷಸ ಗಾತ್ರದ ಸಮುದ್ರದ ಅಲೆಗಳು ಮತ್ತಷ್ಟು ಭೀತಿ ಹುಟ್ಟಿಸಿವೆ.

ಮಹಾರಾಷ್ಟ್ರದ ಬಹುಭಾಗ ನೀರಲ್ಲಿ ಮುಳುಗಡೆ..! ಮಳೆ ಕಾಟಕ್ಕೆ ಮುಂಬೈ ಮಾತ್ರ ನಲುಗಿಲ್ಲ, ಮಹಾರಾಷ್ಟ್ರದ ಬಹುಭಾಗ ನೀರಲ್ಲಿ ಮುಳುಗಡೆಯಾಗಿದೆ. ಹಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. ಅದರಲ್ಲೂ ಕೊಲ್ಹಾಪುರದಲ್ಲಿ ಹರಿಯುವ ಪಂಚಗಂಗಾ ನದಿ, ಭಾಗಶಃ ಭೂ ಭಾಗವನ್ನು ತನ್ನೊಡಲಿಗೆ ಸೇರಿಕೊಂಡುಬಿಟ್ಟಿದೆ. ಈಗಾಗಲೇ ಕೊರೊನಾ ಕಾಟದಿಂದ ಬೆಚ್ಚಿಬಿದ್ದಿದ್ದ ಕೃಷಿಕರು, ಇದೀಗ ಎದುರಾಗಿರುವ ಭೀಕರ ನೆರೆಯಿಂದ ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.

ಇದಿಷ್ಟೇ ಅಲ್ಲ ನೆರೆಯ ರಾಜ್ಯಗಳಾದ ಕೇರಳ, ಆಂಧ್ರ ಮತ್ತು ತೆಲಂಗಾಣದಲ್ಲೂ ಮಳೆಯ ಎಫೆಕ್ಟ್ ಜೋರಾಗಿದೆ. ಇನ್ನೂ ಕೆಲವು ದಿನಗಳ ಕಾಲ ಪರಿಸ್ಥಿತಿ ಹೀಗೆ ಇರಲಿದೆ ಅಂತಾ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

Published On - 8:17 am, Fri, 7 August 20

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ