ತುರಿಮಣೆ ಬಳಸಿ ಸೊಸೆಯಿಂದ ಮಾರಣಾಂತಿಕ ಹಲ್ಲೆ: ಚಿಕಿತ್ಸೆ ಫಲಿಸದೆ ಅತ್ತೆ-ಮಾವ ಸಾವು
ಮಂಡ್ಯ: ಸೊಸೆಯಿಂದ ಅತ್ತೆ, ಮಾವ ಗಂಡನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಗಂಡನ ಸಾವಿನ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಅತ್ತೆ, ಮಾವ ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಹೆಮ್ಮಡಹಳ್ಳಿಯಲ್ಲಿ 15ದಿನದ ಹಿಂದೆ ಕ್ಷುಲ್ಲಕ ಕಾರಣಕ್ಕೆ ಪತಿ ಹಾಗೂ ಅತ್ತೆ-ಮಾವನ ಮೇಲೆ ಸೊಸೆ ನಾಗಮಣಿ ತುರಿಮಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಅಕ್ಟೋಬರ್ 21ರಂದು ಚಿಕಿತ್ಸೆ ಫಲಕಾರಿಯಾಗದೆ ಪತಿ ನಾಗರಾಜು(50) ಮೃತಪಟ್ಟಿದ್ದರು. ರಾತ್ರಿ ಅತ್ತೆ ಕುಳ್ಳಮ್ಮ(69), ಮಾವ ವೆಂಕಟೇಗೌಡ(80) ಚಿಕಿತ್ಸೆ ಫಲಿಸಿದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ […]

ಮಂಡ್ಯ: ಸೊಸೆಯಿಂದ ಅತ್ತೆ, ಮಾವ ಗಂಡನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಗಂಡನ ಸಾವಿನ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಅತ್ತೆ, ಮಾವ ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಹೆಮ್ಮಡಹಳ್ಳಿಯಲ್ಲಿ 15ದಿನದ ಹಿಂದೆ ಕ್ಷುಲ್ಲಕ ಕಾರಣಕ್ಕೆ ಪತಿ ಹಾಗೂ ಅತ್ತೆ-ಮಾವನ ಮೇಲೆ ಸೊಸೆ ನಾಗಮಣಿ ತುರಿಮಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಅಕ್ಟೋಬರ್ 21ರಂದು ಚಿಕಿತ್ಸೆ ಫಲಕಾರಿಯಾಗದೆ ಪತಿ ನಾಗರಾಜು(50) ಮೃತಪಟ್ಟಿದ್ದರು.
ರಾತ್ರಿ ಅತ್ತೆ ಕುಳ್ಳಮ್ಮ(69), ಮಾವ ವೆಂಕಟೇಗೌಡ(80) ಚಿಕಿತ್ಸೆ ಫಲಿಸಿದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂವರ ಸಾವಿನಿಂದ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಕೆಆರ್ ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಾಗಮಣಿಯನ್ನ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ತುರಿಯೋ ಮಣೆಯಿಂದ ಗಂಡ, ಅತ್ತೆ-ಮಾವನ ಮೇಲೆ ಭೀಕರ ಹಲ್ಲೆ: ಪತಿ ಸಾವು, ಅತ್ತೆ-ಮಾವ ಗಂಭೀರ




