ಗದಗ: 108 ಆ್ಯಂಬುಲೆನ್ಸ್ನಲ್ಲೇ ಗರ್ಭಿಣಿಗೆ ಹೆರಿಗೆ ಮಾಡಿಸಿ ನಂತರ ಆಕೆಯನ್ನ ಅಮಾನವೀಯವಾಗಿ ಆಸ್ಪತ್ರೆಗೆ ನಡೆಸಿಕೊಂಡೇ ಕರೆತಂದಿರುವ ಘಟನೆ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆದಿದೆ.
ತುಂಬು ಬಸುರಿಯಾದ ಅಡವಿಸೋಮಾಪುರ ತಾಂಡದ ಸೋಮವ್ವ ಲಮಾಣಿನ್ನು ಹೆರಿಗೆಗಾಗಿ ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರುವ ವೇಳೆ ಆಕೆಗೆ ಬೇನೆ ಶುರುವಾಗಿದೆ. ಈ ವೇಳೆ ಆ್ಯಂಬುಲೆನ್ಸ್ನಲ್ಲಿ ಚಾಲಕ ಮಹೇಶ್ ಮಾರನಬಸರಿ ಬಿಟ್ರೇ ಬೇರೆ ಯಾವ ನರ್ಸಿಂಗ್ ಸ್ಟಾಫ್ ಇರಲಿಲ್ಲ. ಆದರೂ ಧೃತಿಗೆಡದ ಚಾಲಕ ಆ್ಯಂಬುಲೆನ್ಸ್ನಲ್ಲೇ ಹೆರಿಗೆ ಮಾಡಿಸಿ ತಾಯಿ ಹಾಗೂ ಮಗುವಿನ ಪ್ರಾಣ ಉಳಿಸಿದ್ದಾನೆ.
ತದನಂತರ ಬಾಣಂತಿ ಮತ್ತು ಮಗುವಿಗೆ ಕ್ಲೀನಿಂಗ್ ಮಾಡಿಸಲು ಮಹೇಶ್ ಲಕ್ಕುಂಡಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಇಲ್ಲಿಯೂ ನಿರ್ಲಕ್ಷ್ಯ ತೋರಿರುವ ಆಸ್ಪತ್ರೆಯ ಸಿಬ್ಬಂದಿ ಬಾಣಂತಿಗೆ ವಾಹನದಿಂದ ಆಸ್ಪತ್ರೆ ತಲುಪಲು ವೀಲ್ಚೇರ್ ಸಹ ನೀಡಲಿಲ್ಲವಂತೆ. ಹೀಗಾಗಿ, ಬಾಣಂತಿ ಆಸ್ಪತ್ರೆಯ ವಾರ್ಡ್ಗೆ ನಡೆದುಕೊಂಡೇ ಬಂದಿದ್ದಾರೆ. ಇದನ್ನು ಕಂಡ ಸೋಮವ್ವಳ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 6:22 pm, Thu, 9 July 20