Viral Video: ಅಂಗಡಿಯವನಿಂದ ಧಮ್ಕಿ: ಸಾರ್ವಜನಿಕವಾಗಿ ಪ್ಯಾಂಟಿಯನ್ನೇ ತೆಗೆದು ಮಾಸ್ಕ್​ ಮಾಡಿಕೊಂಡ ಮಹಿಳೆ

|

Updated on: Feb 27, 2021 | 2:20 PM

ಮಹಿಳೆಯೋರ್ವಳು ಶಾಪಿಂಗ್​ ಮಾಡಲು ಸೂಪರ್​ ಮಾರ್ಕೇಟ್​ಗೆ ಬಂದಿದ್ದಳು. ಮನೆಯಿಂದ ಹೊರಡುವ ತರಾತುರಿಯಲ್ಲಿ ಮಾಸ್ಕ್​ ಮರೆತು ಬಂದಿದ್ದಾಳೆ.

Viral Video: ಅಂಗಡಿಯವನಿಂದ ಧಮ್ಕಿ: ಸಾರ್ವಜನಿಕವಾಗಿ ಪ್ಯಾಂಟಿಯನ್ನೇ ತೆಗೆದು ಮಾಸ್ಕ್​ ಮಾಡಿಕೊಂಡ ಮಹಿಳೆ
ಪ್ಯಾಂಟಿಯನ್ನು ಮಾಸ್ಕ್​ ಮಾಡಿಕೊಂಡ ಮಹಿಳೆ
Follow us on

ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಮಾಸ್ಕ್​ ಧರಿಸುವುದನ್ನು ಎಲ್ಲ ಸರ್ಕಾರಗಳು ಕಡ್ಡಾಯ ಮಾಡಿವೆ. ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವಾದ್ಯಂತ ಮಾಸ್ಕ್​ ಧರಿಸೋದು ಕಡ್ಡಾಯವಾಗಿದೆ. ಆದರೆ, ಬಹುತೇಕರಿಗೆ ಮನೆಯಿಂದ ಹೊರ ಹೋಗುವಾಗ ಮಾಸ್ಕ್​ ಧರಿಸೋದು ಮರೆತೇ ಹೋಗುತ್ತದೆ. ದಂಡ ಬೀಳುತ್ತದೆ ಎನ್ನುವ ಕಾರಣಕ್ಕೆ ಕೆಲವರು ಹೊಸ ಮಾಸ್ಕ್​ ಖರೀದಿ ಮಾಡಿದರೆ, ಕೆಲವರು ತಮ್ಮ ಬಳಿ ಇರುವ ವೇಲ್​, ಕರ್ಚೀಫ್​ಅನ್ನೇ ಮಾಸ್ಕ್​ ಮಾಡಿಕೊಂಡ ಉದಾಹರಣೆಯೂ ಇದೆ. ಆದರೆ, ಇಲ್ಲೋರ್ವ ಮಹಿಳೆ ತನ್ನ ಒಳಉಡುಪನ್ನೇ ಮಾಸ್ಕ್​ ಮಾಡಿಕೊಂಡಿದ್ದಾರೆ! ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್​ ಆಗಿದೆ.

ಈ ಘಟನೆ ನಡೆದಿರುವುದು ದಕ್ಷಿಣ ಆಫ್ರಿಕಾದಲ್ಲಿ.. ಮಹಿಳೆಯೊಬ್ಬರು ಶಾಪಿಂಗ್​ ಮಾಡಲು ಸೂಪರ್​ ಮಾರ್ಕೇಟ್​ಗೆ ಬಂದಿದ್ದರು. ಮನೆಯಿಂದ ಹೊರಡುವ ತರಾತುರಿಯಲ್ಲಿ ಮಾಸ್ಕ್​ ಮರೆತು ಬಂದಿದ್ದಾಳೆ. ಯಾರೂ ಕೇಳುವುದಿಲ್ಲ ಎನ್ನುವ ಧೈರ್ಯದಲ್ಲೇ ಆಕೆ ಸೂಪರ್​ ಮಾರ್ಕೆಟ್​ ಒಳಗೆ ತೆರಳಿದ್ದಾರೆ. ಸೂಪರ್​ ಮಾರ್ಕೆಟ್​ ಒಳಗೆ ಹೋಗುವಾಗ ಭದ್ರತಾ ಸಿಬ್ಬಂದಿ ಆಕೆಯನ್ನು ಪ್ರಶ್ನೆ ಮಾಡಿಲ್ಲ. ಹೀಗಾಗಿ, ಖರೀದಿ ಮಾಡಲು ಶುರು ಮಾಡಿದ್ದಾರೆ.

ಆದರೆ, ಸೂಪರ್​ ಮಾರ್ಕೆಟ್​ನ ಮಾಲೀಕ ಮಾಸ್ಕ್​ ಧರಿಸದಿದ್ದರೆ ನಾವು ಇಲ್ಲಿ ಖರೀದಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾನೆ. ಆಕೆ, ಪರವಾಗಿಲ್ಲ ಅಡ್ಜಸ್ಟ್​ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಆದರೆ, ಅದು ಸಾಧ್ಯವೇ ಇಲ್ಲ ಎಂದು ಮಾಲೀಕ ಕಟುವಾಗಿ ಹೇಳಿದ್ದ. ಅಲ್ಲದೆ, ಮಾಸ್ಕ್​ ಧರಿಸದಿದ್ದರೆ ಶಾಪ್​ನಿಂದ ಹೊರಗೆ ಹಾಕುತ್ತೇವೆ ಎಂದೂ ಧಮ್ಕಿ ಕೂಡ ಹಾಕಿದ್ದ.

ಇದರಿಂದ ಅವಮಾನಕ್ಕೆ ಒಳಗಾದ ಮಹಿಳೆ ತಡ ಮಾಡಲಿಲ್ಲ. ಎಲ್ಲರ ಎದುರೇ ತನ್ನ ಪ್ಯಾಂಟಿಯನ್ನು ತೆಗೆದು, ಅದನ್ನು ಮಾಸ್ಕ್​ ರೀತಿಯಲ್ಲಿ ಧರಿಸಿದ್ದಾರೆ. ಇದನ್ನು ಕೆಲವರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್​ನಲ್ಲಿ ಈ ವಿಡಿಯೋ ಬರೋಬ್ಬರಿ 2.2 ಲಕ್ಷ ಬಾರಿ ವೀಕ್ಷಣೆ ಕಂಡಿದೆ.

ಒಳ ಉಡುಪನ್ನು ತೆಗೆದು ಮಾಸ್ಕ್ ಮಾಡಿಕೊಂಡಿದ್ದು ಇದೇ ಮೊದಲೇನಲ್ಲ. ಕಳೆದ ಮೇ ತಿಂಗಳಲ್ಲಿ ಮತ್ತೊಬ್ಬ ಮಹಿಳೆ ಉಕ್ರೇನ್​ನಲ್ಲಿ ತನ್ನ ಅಂಡರ್​ವೇರ್​ ತೆಗೆದು ಮಾಸ್ಕ್​ ಮಾಡಿಕೊಂಡಿದ್ದ ವಿಡಿಯೋ ಸಹ ಭಾರೀ ವೈರಲ್​ ಆಗಿತ್ತು.

ಇದನ್ನೂ ಓದಿ: ಸ್ವಂತ ವಾಹನದಲ್ಲಿ ಮಾಸ್ಕ್​ ಹಾಕದಿದ್ದರೆ ದಂಡ ಹಾಕುವಂತಿಲ್ಲ! ಮುಂಬೈನಲ್ಲಿ ಜಾರಿಗೆ ಬಂತು ಹೊಸ ನಿಯಮ; ಬೆಂಗಳೂರಿನಲ್ಲಿ ಯಾವಾಗ?

Published On - 2:13 pm, Sat, 27 February 21