ಬಳ್ಳಾರಿ: ಕೈಯಲ್ಲಿ ಖಾಲಿ ಕೊಡ.. ಕಣ್ಣಲ್ಲಿ ಬೆಂಕಿ ಕಿಡಿ.. ಎಲ್ಲರಿಗೂ ಆಕ್ರೋಶ ಉಕ್ಕಿ ಬರ್ತಿದೆ. ರೋಷಾವೇಶ ಹೊರ ಹಾಕ್ತಿದ್ದಾರೆ, ಸರ್ಕಾರದ ವಿರುದ್ಧ ಧಿಕ್ಕಾರದ ಕಹಳೆ ಮೊಳಗಿಸಿದ್ದಾರೆ. ಒಂದು ದಿನ ಊಟ ಇಲ್ಲ ಅಂದ್ರೂ ಪರವಾಗಿಲ್ಲ. ಕೈಯಲ್ಲಿ ಕಾಸಿಲ್ಲ ಅಂದ್ರೂ ಅಡ್ಜಸ್ಟ್ ಮಾಡಿಕೊಳ್ಳಬಹುದು. ಆದ್ರೆ, ತುಂಗಾಭದ್ರ ಜಲಾಶಯ ಊರಿನ ಪಕ್ಕದಲ್ಲೇ ಇದ್ರು ಕುಡಿಯಲು ನೀರಿಲ್ಲ ಅಂದ್ರೆ ಹೇಗ್ ಆಗ್ಬೇಡ ಹೇಳಿ.
ಕೈಯಲ್ಲಿ ಖಾಲಿ ಕೊಡ ಹಿಡಿದು ಪ್ರತಿಭಟನೆ:
ಸದ್ಯ, ಟಿ.ಬಿ ಡ್ಯಾಂ ನೀರನ್ನು ಜಿಂದಾಲ್ ಕಂಪನಿ ಪೈಪ್ ಲೈನ್ ಮೂಲಕ ಬೈಲುವದ್ದಿಗೇರಿ ಗ್ರಾಮಕ್ಕೆ ನೀರು ಬಿಡಬಹುದು. ಆದ್ರೆ, ಒಂದು ಗ್ರಾಮಕ್ಕೆ ನೀರು ಹರಿಸಿದ್ರೆ, ಬೇರೆಲ್ಲಾ ಗ್ರಾಮಗಳು ಬೇಡಿಕೆ ಇಡುತ್ತವೆ ಎಂಬ ಭಯ ಜಿಂದಾಲ್ಗೆ ಆವರಿಸಿದೆ. ಹೀಗಿರುವಾಗ ಇಲ್ಲಿನ ನೀರಿನ ಸಮಸ್ಯೆಗೆ ಅಧಿಕಾರಿಗಳು ಹೇಗ್ ಬ್ರೇಕ್ ಕೊಡ್ತಾರೆ ಅನ್ನೋ ಕುತೂಹಲ ಕೆರಳಿಸಿದೆ.
Published On - 8:31 pm, Tue, 21 January 20