ಒಂದಲ್ಲಾ 2 ಆಟೋ ಬದಲಿಸಿದ್ದ ಟೋಪಿವಾಲ, ಬಾಂಬರ್​ನ ಬಳಿ ಇದ್ದ ಮತ್ತೊಂದು ಬ್ಯಾಗ್ ಎಲ್ಲಿ?

ಮಂಗಳೂರು: ಏರ್​ಪೋರ್ಟ್​ನಲ್ಲಿ ಪತ್ತೆಯಾದ ಬಾಂಬ್ ದೇಶಕ್ಕೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ದೊಡ್ಡ ಅನಾಹುತವೇ ನಡೆದುಹೋಗ್ತಿತ್ತು. ಆದ್ರೆ ಭದ್ರತಾ ಸಿಬ್ಬಂದಿ, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಮತ್ತು ಮಂಗಳೂರು ಪೊಲೀಸರು ದುಷ್ಕರ್ಮಿಗಳ ಪ್ಲಾನ್ ಫ್ಲಾಪ್ ಮಾಡಿದ್ರು. ಇದೆಲ್ಲಾ ಒಂದ್ಕಡೆಯಾದ್ರೆ ಸಿಸಿ ಟಿವಿ ದೃಶ್ಯಗಳಲ್ಲಿ ಕಾಣ್ತಿರೋ ಶಂಕಿತನೇ ಬಾಂಬ್ ಇಟ್ಟಿದ್ದಾ..? ಆತನ ಹಿಂದೆ ಇನ್ಯಾಱರು ಇದ್ದಾರೆ ಅನ್ನೋದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಪೊಲೀಸರು ತಲೆಗೆ ಹುಳ ಬಿಟ್ಕೊಂಡು ಬಾಂಬರ್​ಗಾಗಿ ಇನ್ನಿಲ್ಲದಂತೆ ಹುಡುಕಾಟ ನಡೆಸ್ತಿದ್ದಾರೆ. ಬಾಂಬರ್ ಬೆನ್ನತ್ತಿ […]

ಒಂದಲ್ಲಾ 2 ಆಟೋ ಬದಲಿಸಿದ್ದ ಟೋಪಿವಾಲ, ಬಾಂಬರ್​ನ ಬಳಿ ಇದ್ದ ಮತ್ತೊಂದು ಬ್ಯಾಗ್ ಎಲ್ಲಿ?
Follow us
ಸಾಧು ಶ್ರೀನಾಥ್​
|

Updated on:Jan 22, 2020 | 7:30 AM

ಮಂಗಳೂರು: ಏರ್​ಪೋರ್ಟ್​ನಲ್ಲಿ ಪತ್ತೆಯಾದ ಬಾಂಬ್ ದೇಶಕ್ಕೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ದೊಡ್ಡ ಅನಾಹುತವೇ ನಡೆದುಹೋಗ್ತಿತ್ತು. ಆದ್ರೆ ಭದ್ರತಾ ಸಿಬ್ಬಂದಿ, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಮತ್ತು ಮಂಗಳೂರು ಪೊಲೀಸರು ದುಷ್ಕರ್ಮಿಗಳ ಪ್ಲಾನ್ ಫ್ಲಾಪ್ ಮಾಡಿದ್ರು.

ಇದೆಲ್ಲಾ ಒಂದ್ಕಡೆಯಾದ್ರೆ ಸಿಸಿ ಟಿವಿ ದೃಶ್ಯಗಳಲ್ಲಿ ಕಾಣ್ತಿರೋ ಶಂಕಿತನೇ ಬಾಂಬ್ ಇಟ್ಟಿದ್ದಾ..? ಆತನ ಹಿಂದೆ ಇನ್ಯಾಱರು ಇದ್ದಾರೆ ಅನ್ನೋದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಪೊಲೀಸರು ತಲೆಗೆ ಹುಳ ಬಿಟ್ಕೊಂಡು ಬಾಂಬರ್​ಗಾಗಿ ಇನ್ನಿಲ್ಲದಂತೆ ಹುಡುಕಾಟ ನಡೆಸ್ತಿದ್ದಾರೆ. ಬಾಂಬರ್ ಬೆನ್ನತ್ತಿ ಹೋದಂತೆ ಹೆಜ್ಜೆ ಹೆಜ್ಜೆಗೂ ಆಘಾತಕಾರಿ ಸಂಗತಿಗಳು ಬಯಲಾಗ್ತಿವೆ.

ಶಂಕಿತ ಬಳಸಿದ್ದು ಒಂದು ಆಟೋವಲ್ಲ.. ಎರಡು ಆಟೋ! ಯೆಸ್, ಮಂಗಳೂರು ಏರ್​ಪೋರ್ಟ್​ನಲ್ಲಿ ಸ್ಫೋಟಕ ತುಂಬಿದ ಬ್ಯಾಗ್ ಇಟ್ಟು ಎಸ್ಕೇಪ್ ಆಗಿದ್ದ ಬಾಂಬರ್ ಓಡೋಡಿ ಹೋಗಿ ಆಟೋ ಹತ್ತಿದ ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಆದ್ರೀಗ ಅದೇ ಬಾಂಬರ್ ಏರ್​ಪೋರ್ಟ್​ಗೆ ಎಂಟ್ರಿಕೊಟ್ಟಿದ್ದು ಕೂಡ ಆಟೋದಲ್ಲೇ ಅನ್ನೋದು ಸ್ಪಷ್ಟವಾಗಿದೆ.

ಏರ್​ಪೋರ್ಟ್​ ಬಳಿ ಆಟೋದಿಂದ ಇಳಿಯೋ ಶಂಕಿತ ಸ್ಫೋಟಕ ತುಂಬಿದ 10 ಕೆಜಿ ತೂಕದ ಬ್ಯಾಗ್​ ಹೊತ್ತು ವಿಮಾನ ನಿಲ್ದಾಣ ಕಡೆ ಹೆಜ್ಜೆ ಹಾಕುತ್ತಾನೆ. ಬಂದವನೇ ಎಸ್ಕಲೇಟರ್ ಮೂಲಕ ಹೋಗುತ್ತಾನೆ.

ಹೀಗೆ ಏರ್​ಪೋರ್ಟ್​ಗೆ ಎಂಟ್ರಿಕೊಡೋ ಕಿರಾತಕ ಬಾಂಬ್ ಇದ್ದ ಬ್ಯಾಗನ್ನ ಅಲ್ಲಿದ್ದ ಬೆಂಚ್ ಮೇಲೆ ಇಟ್ಟು ಜಾಗ ಖಾಲಿ ಮಾಡುತ್ತಾನೆ. ವಾಪಸ್ ಹೋಗುವಾಗಲೂ ಮೆಟ್ಟಿಲುಗಳನ್ನ ಬಳಸದೇ ಎಸ್ಕಲೇಟರ್ ಮೂಲಕ ಕೆಳಗಿಳಿದು ಹೋಗುತ್ತಾನೆ. ಈ ವೇಳೆ ಕೊಂಚ ಗಾಬರಿಯಾದಂತೆ ಕಾಣೋ ಬಾಂಬರ್ ಹೊರಗೆ ಹೋದವನೇ ಓಡೋಡಿ ಹೋಗಿ ಆಟೋ ಹತ್ತುತ್ತಾನೆ.

ಏರ್​ಪೋರ್ಟ್​ ಬಳಿ ಆಟೋ ಹತ್ತೋ ಬಾಂಬರ್ ಕೆಂಜಾರು ಬಳಿಯ ಕಾಂಪ್ಲೆಕ್ಸ್​ಗೆ ಹೋಗಿ ಬಾಂಬ್ ಇದ್ದ ಮತ್ತೊಂದು ಬ್ಯಾಗ್ ತೆಗೆದುಕೊಂಡು ಅದೇ ಆಟೋದಲ್ಲಿ ಕಾವೂರಿಗೆ ಹೋಗುತ್ತಾನೆ. ಕಾವೂರು ಬಳಿ ಆಟೋದಿಂದ ಇಳಿಯೋ ಆಸಾನಿ ಸದ್ಯ ಎಲ್ಲಿದ್ದಾನೆ..? ಬಾಂಬ್ ಇದ್ದ ಮತ್ತೊಂದು ಬ್ಯಾಗ್ ಏನಾಯ್ತು ಅನ್ನೋದು ಇನ್ನೂ ನಿಗೂಢವಾಗಿದೆ.

ಕಾಂಪ್ಲೆಕ್ಸ್​ ತಾತ್ಕಾಲಿಕ ಅಡ್ಡಾ..! ಇನ್ನು ಏರ್​ಪೋರ್ಟ್​ಗೆ ಹೋಗುವ ಮುನ್ನ ಮಂಗಳೂರಿನಿಂದ ರಾಜ್​ಕುಮಾರ್​ ಬಸ್​ ಹತ್ತೋ ಬಾಂಬರ್ ಕೆಂಜಾರು ಸಮೀಪ ಕೆಳಗಿಳಿಯುತ್ತಾನೆ. ಬಳಿಕ ಅಲ್ಲೇ ಇದ್ದ ಕಾಂಪ್ಲೆಕ್ಸ್​ನ ಸಲೂನ್​ವೊಂದಕ್ಕೆ ಹೋಗಿ ಅಲ್ಲಿದ್ದ ಹುಡುಗರಿಗೆ ಹೊರಗಡೆ ಬ್ಯಾಗ್ ಇಡಬಹುದಾ ಅಂತ ಕೇಳಿದ್ದ. ಅದಕ್ಕೆ ಅವರು ನಿರಾಕರಿಸ್ತಿದ್ದಂತೆ ಕಾಂಪ್ಲೆಕ್ಸ್​ನ ಕತ್ತಲೆ ಕೋಣೆಯೊಂದ್ರಲ್ಲಿ ಟ್ಯಾಬ್ ಮೂಲಕ ಟೈಮರ್ ಫಿಕ್ಸ್ ಮಾಡಿ ಆಟೋದಲ್ಲಿ ಏರ್​ಪೋರ್ಟ್​ಗೆ ಹೊರಡುತ್ತಾನೆ.

ಇನ್ನು ಬಾಂಬರ್ ತನ್ನ ಬೋಳು ತಲೆಯನ್ನ ಕವರ್ ಮಾಡಿ ಗುರುತು ಪತ್ತೆಯಾಗದಂತೆ ಮಾಡಲು ಕ್ಯಾಪ್ ಧರಿಸಿದ್ದ ಅನ್ನೋದು ಬಯಲಾಗಿದೆ. ಸದ್ಯ ಸಿಸಿ ಟಿವಿ ದೃಶ್ಯಗಳ ಆಧರಿಸಿ ತನಿಖೆ ನಡೆಸುತ್ತಿರೋ ಖಾಕಿ ಪಡೆ ಬಾಂಬರ್ ಯಾರು..? ಆತನ ಉದ್ದೇಶವೇನಾಗಿತ್ತು ಅನ್ನೋದನ್ನ ಪತ್ತೆಹಚ್ಚುತ್ತಿದ್ದಾರೆ.

Published On - 7:28 am, Wed, 22 January 20

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್