AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಲಾಶಯವೇ ಇದ್ದರೂ ಕುಡಿಯೋಕೆ ನೀರಿಲ್ಲ: ತುಂಗಾ ತಟದಲ್ಲಿ ‘ಭದ್ರೆಯರ’ ಆಕ್ರೋಶ

ಬಳ್ಳಾರಿ: ಕೈಯಲ್ಲಿ ಖಾಲಿ ಕೊಡ.. ಕಣ್ಣಲ್ಲಿ ಬೆಂಕಿ ಕಿಡಿ.. ಎಲ್ಲರಿಗೂ ಆಕ್ರೋಶ ಉಕ್ಕಿ ಬರ್ತಿದೆ. ರೋಷಾವೇಶ ಹೊರ ಹಾಕ್ತಿದ್ದಾರೆ, ಸರ್ಕಾರದ ವಿರುದ್ಧ ಧಿಕ್ಕಾರದ ಕಹಳೆ ಮೊಳಗಿಸಿದ್ದಾರೆ. ಒಂದು ದಿನ ಊಟ ಇಲ್ಲ ಅಂದ್ರೂ ಪರವಾಗಿಲ್ಲ. ಕೈಯಲ್ಲಿ ಕಾಸಿಲ್ಲ ಅಂದ್ರೂ ಅಡ್ಜಸ್ಟ್ ಮಾಡಿಕೊಳ್ಳಬಹುದು. ಆದ್ರೆ, ತುಂಗಾಭದ್ರ ಜಲಾಶಯ ಊರಿನ ಪಕ್ಕದಲ್ಲೇ ಇದ್ರು ಕುಡಿಯಲು ನೀರಿಲ್ಲ ಅಂದ್ರೆ ಹೇಗ್ ಆಗ್ಬೇಡ ಹೇಳಿ. ಕೈಯಲ್ಲಿ ಖಾಲಿ ಕೊಡ ಹಿಡಿದು ಪ್ರತಿಭಟನೆ: ಹೀಗಾಗಿಯೇ ಹೊಸಪೇಟೆ ತಾಲೂಕು ಬೈಲುವದ್ದಿಗೇರಿ ಗ್ರಾಮದ ಜನ ಕೈಯಲ್ಲಿ ಖಾಲಿ […]

ಜಲಾಶಯವೇ ಇದ್ದರೂ ಕುಡಿಯೋಕೆ ನೀರಿಲ್ಲ: ತುಂಗಾ ತಟದಲ್ಲಿ ‘ಭದ್ರೆಯರ’ ಆಕ್ರೋಶ
ಸಾಧು ಶ್ರೀನಾಥ್​
|

Updated on:Jan 22, 2020 | 11:20 AM

Share

ಬಳ್ಳಾರಿ: ಕೈಯಲ್ಲಿ ಖಾಲಿ ಕೊಡ.. ಕಣ್ಣಲ್ಲಿ ಬೆಂಕಿ ಕಿಡಿ.. ಎಲ್ಲರಿಗೂ ಆಕ್ರೋಶ ಉಕ್ಕಿ ಬರ್ತಿದೆ. ರೋಷಾವೇಶ ಹೊರ ಹಾಕ್ತಿದ್ದಾರೆ, ಸರ್ಕಾರದ ವಿರುದ್ಧ ಧಿಕ್ಕಾರದ ಕಹಳೆ ಮೊಳಗಿಸಿದ್ದಾರೆ. ಒಂದು ದಿನ ಊಟ ಇಲ್ಲ ಅಂದ್ರೂ ಪರವಾಗಿಲ್ಲ. ಕೈಯಲ್ಲಿ ಕಾಸಿಲ್ಲ ಅಂದ್ರೂ ಅಡ್ಜಸ್ಟ್ ಮಾಡಿಕೊಳ್ಳಬಹುದು. ಆದ್ರೆ, ತುಂಗಾಭದ್ರ ಜಲಾಶಯ ಊರಿನ ಪಕ್ಕದಲ್ಲೇ ಇದ್ರು ಕುಡಿಯಲು ನೀರಿಲ್ಲ ಅಂದ್ರೆ ಹೇಗ್ ಆಗ್ಬೇಡ ಹೇಳಿ.

ಕೈಯಲ್ಲಿ ಖಾಲಿ ಕೊಡ ಹಿಡಿದು ಪ್ರತಿಭಟನೆ: ಹೀಗಾಗಿಯೇ ಹೊಸಪೇಟೆ ತಾಲೂಕು ಬೈಲುವದ್ದಿಗೇರಿ ಗ್ರಾಮದ ಜನ ಕೈಯಲ್ಲಿ ಖಾಲಿ ಕೊಡ ಹಿಡ್ಕೊಂಡು ರೋಡಿಗೆ ಇಳಿದಿದ್ರು. ನಮಗೆ ಕುಡಿಯಲು ನೀರು ಕೊಡಿ ಅಂತಾ ಆಗ್ರಹಿಸಿದ್ರು. ನಾಲ್ಕು ಗ್ರಾಮಗಳಿಗೂ ಆಧಾರವಾಗಿದ್ದು ಕೆರೆಯೂ ಬಾಡಿ ಹೋಗಿದೆ. ಜಲಾಶಯದಿಂದ್ಲೂ ನೀರು ಹರಿಸ್ತಿಲ್ಲ. ಹೀಗಾಗಿ ಗ್ರಾಮದ ಮುಂದೆ ಹಾದು ಹೋಗಿರುವ ಜಿಂದಾಲ್ ಪೈಪ್ ಲೈನ್ ಮೂಲಕ, ಕೆರೆಗೆ ನೀರು ಹರಿಸಿ ಅಂತಾ ಜನ ಮನವಿ ಮಾಡ್ತಿದ್ದಾರೆ. ಇತ್ತ, ಸ್ಥಳಕ್ಕೆ ಜಿಂದಾಲ್ ಕಂಪನಿ ಅಧಿಕಾರಿಗಳು ಹಾಗೂ ಹೊಸಪೇಟೆಯ ಉಪ ತಹಶೀಲ್ದಾರ್ ಭೇಟಿ ನೀಡಿದ್ರು. ಈ ವೇಳೆ ಸಮಸ್ಯೆಗೆ ಪರಿಹಾರ ಹುಡುಕುತ್ತೇವೆ ಅಂತಾ ಭರವಸೆ ಕೊಟ್ರು.

ಸದ್ಯ, ಟಿ.ಬಿ ಡ್ಯಾಂ ನೀರನ್ನು ಜಿಂದಾಲ್ ಕಂಪನಿ ಪೈಪ್ ಲೈನ್ ಮೂಲಕ ಬೈಲುವದ್ದಿಗೇರಿ ಗ್ರಾಮಕ್ಕೆ ನೀರು ಬಿಡಬಹುದು. ಆದ್ರೆ, ಒಂದು ಗ್ರಾಮಕ್ಕೆ ನೀರು ಹರಿಸಿದ್ರೆ, ಬೇರೆಲ್ಲಾ ಗ್ರಾಮಗಳು ಬೇಡಿಕೆ ಇಡುತ್ತವೆ ಎಂಬ ಭಯ ಜಿಂದಾಲ್​ಗೆ ಆವರಿಸಿದೆ. ಹೀಗಿರುವಾಗ ಇಲ್ಲಿನ ನೀರಿನ ಸಮಸ್ಯೆಗೆ ಅಧಿಕಾರಿಗಳು ಹೇಗ್ ಬ್ರೇಕ್ ಕೊಡ್ತಾರೆ ಅನ್ನೋ ಕುತೂಹಲ ಕೆರಳಿಸಿದೆ.

Published On - 8:31 pm, Tue, 21 January 20