ಮುಂಬರುವ ಚುನಾವಣೆಯಲ್ಲಿ 30-40 ಸ್ಥಾನ ಬಂದರೆ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ: ಹೆಚ್ ಡಿ ಕುಮಾರಸ್ವಾಮಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 20, 2022 | 1:05 PM

ಮೈಸೂರಲ್ಲಿ ಗುರುವಾರ ಪಂಚರತ್ನ ಕಾರ್ಯಾಗಾರ ಶುರುಮಾಡುವ ಮೊದಲು ಮಾಧ್ಯಮದವರ ಜೊತೆ ಮಾತಾಡಿದ ಅವರಲ್ಲಿ ಆ ಆತ್ಮವಿಶ್ವಾಸ ಮಾಯವಾಗಿರೋದು ನಿಚ್ಚಳವಾಗಿ ಕಾಣಸಿತು.

ಮೈಸೂರು: ಸುಮಾರು ಆರು ತಿಂಗಳ ಹಿಂದೆ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯರು (HD Kumaraswamy) 2023 ರ ವಿಧಾನ ಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸಲೀಸಾಗಿ 100 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಅಂತ ಭಾರಿ ಆತ್ಮವಿಶ್ವಾಸದಿಂದ ಹೇಳುತ್ತಿದ್ದರು. ಆದರೆ, ಮೈಸೂರಲ್ಲಿ ಗುರುವಾರ ಪಂಚರತ್ನ ಕಾರ್ಯಾಗಾರ (Pancharatna Workshop) ಶುರುಮಾಡುವ ಮೊದಲು ಮಾಧ್ಯಮದವರ ಜೊತೆ ಮಾತಾಡಿದ ಅವರಲ್ಲಿ ಆ ಆತ್ಮವಿಶ್ವಾಸ (confidence) ಮಾಯವಾಗಿರೋದು ನಿಚ್ಚಳವಾಗಿ ಕಾಣಸಿತು. ತಮ್ಮ ಅನಿಸಿಕೆಯನ್ನು ಪಕ್ಷದ ಬೇರೆ ನಾಯಕರು ಹೇಳಿರುವರೇನೋ ಎಂಬಂತೆ ಮಾತಾಡಿ ಜೆಡಿಎಸ್ 30-40 ಸ್ಥಾನಗಳನ್ನು ಗೆದ್ದರೆ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರದ ಭಾಗವಾಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.