ಉತ್ತರ ಕನ್ನಡ: ದೀಪಾವಳಿ ಎಂದರೆ ಯಾರಿಗೆ ಖುಷಿಯಿಲ್ಲ ಹೇಳಿ? ಒಂದೊಂದೆಡೆ ಒಂದೊಂದು ಸಂಪ್ರದಾಯ, ಒಂದೊಂದು ತಿಂಡಿ ತಿನಿಸು. ಆಚರಣೆಗಳಲ್ಲೂ ದೀಪಾವಳಿ ವಿಶಿಷ್ಟವಾಗಿದೆ. ದೀಪಾವಳಿ ಆಚರಣೆ ಪರಿಸರದ ಜೊತೆ ಬೆಸೆದುಕೊಂಡಿದೆ. ಹೇಗೆ ಏನು ಎತ್ತ ಕುತೂಹಲವಾಯಿತೇ? ಇಲ್ಲಿದೆ ನೋಡಿ ಫೋಟೋ ಸ್ಟೋರಿ!
ಮಲೆನಾಡ ಭಾಗದಲ್ಲಿ ದೀಪಾವಳಿಯಂದು ಆಕಳನ್ನು ಅಲಂಕರಿಸುತ್ತಾರೆ. ಅಡಿಕೆಯ ಸರ ತೊಡಿಸಿ ಪೂಜಿಸುತ್ತಾರೆ. ಜೊತೆಗೆ ಹುಲಿಯಪ್ಪನ ಪೂಜೆ ಮಾಡುತ್ತಾರೆ! ಹುಲಿಯಪ್ಪ ಎಂದರೆ ಕಾಡಿನಲ್ಲಿರುವ ಹುಲಿ. ಹುಲ್ಲು ಮೇಯಲು ಸಾಕಿದ ಆಕಳನ್ನು ಹೊರಗೆ ಬಿಟ್ಟಾಗ ತಿನ್ನದೇ ಕಾಪಾಡು ಎಂದು ಹುಲಿಯ ಬಳಿಯೇ ಪ್ರಾರ್ಥಿಸುತ್ತಾರೆ!
ಗುರಿಗಾಯಿ ಎಂಬ ವಿಶಿಷ್ಟ ಆಟ!
40 ಅಡಿ ದೂರದಲ್ಲಿ ಸುಲಿದ ತೆಂಗಿನಕಾಯಿ ಇಡುತ್ತಾರೆ. ಸ್ಪರ್ಧಾಳುಗಳು ಕಲ್ಲುಗಳಿಂದ ಅದನ್ನು ಹೊಡೆದು ಒಡೆಯಬೇಕು. ಪ್ರತಿ ಕಲ್ಲಿಗೂ ದರ ನಿಗದಿ ಮಾಡಲಾಗುತ್ತದೆ. ಗೆದ್ದವರಿಗೆ ಬಹುಮಾನವಾಗಿ ಒಡೆದ ಕಾಯನ್ನೇ ನೀಡಲಾಗುತ್ತದೆ ಎಂದು ಶಿರಸಿಯ ಸೌಮ್ಯಾ ಭಟ್ ವಿವರಿಸಿದರು.
“ವರ್ಕ್ ಫ್ರಾಮ್ ಹೋಮ್ ನೀಡಿರುವದರಿಂದ ದೀಪಾವಳಿಯ ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿದೆ. ಹುಲಿಯಪ್ಪನ ಪೂಜೆ, ಗುರಿಕಾಯಿ ಆಟಗಳು ಬಾಲ್ಯವನ್ನು ನೆನಪಿಸುತ್ತವೆ.”
-ಸೌಮ್ಯಾ ಭಟ್, ಶಿರಸಿ