ಲಂಚಬಾಕ ಅಧಿಕಾರಿ ಎಸಿಬಿ ಎಸ್ಪಿಯ ಕಾಲು ಮುಟ್ಟಿ ಸ್ಸಾರಿ ಸರ್ ಅಂತ ಹೇಳಿದ!

|

Updated on: Sep 30, 2020 | 5:27 PM

ಲಂಚ ಸ್ವೀಕರಿಸುವಾಗ ಭ್ರಷ್ಟಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳ ಕೈಗೆ ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿಯೊಬ್ಬರು ತನ್ನಿಂದ ತಪ್ಪಾಗಿದೆ, ಕ್ಷಮಿಸಿಬಿಡಿ ಎಂದು ಹೇಳುತ್ತಾ ದಾಳಿಯ ನೇತೃತ್ವ ವಹಿಸಿದ ಅಧಿಕಾರಿಯ ಕಾಲಿಗೆ ಬಿದ್ದ ಪ್ರಸಂಗ ಯಾದಗಿರಿಯಲ್ಲಿ ಇಂದು ನಡೆಯಿತು. ಯಾದಗಿರಿ ಜಿಲ್ಲಾ ತೋಟಗಾರಿಗೆ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಬಾಬು ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳಿಂದ ಟ್ರ್ಯಾಪ್ ಆಗಿ ಸಿಕ್ಕಿ ಬಿದ್ದವರು. ಜಿಲ್ಲೆಯ ಕೌಳೂರು ಗ್ರಾಮದ ಶಿವಾರೆಡ್ಡಿ ಹೆಸರಿನ ವ್ಯಕ್ತಿಗೆ ಹನಿ ನೀರಾವರಿ ಯೋಜನೆಯ ಒಂದು ಲಕ್ಷ ರೂಪಾಯಿ ಸಬ್ಸಿಡಿ […]

ಲಂಚಬಾಕ ಅಧಿಕಾರಿ ಎಸಿಬಿ ಎಸ್ಪಿಯ ಕಾಲು ಮುಟ್ಟಿ ಸ್ಸಾರಿ ಸರ್ ಅಂತ ಹೇಳಿದ!
Follow us on

ಲಂಚ ಸ್ವೀಕರಿಸುವಾಗ ಭ್ರಷ್ಟಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳ ಕೈಗೆ ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿಯೊಬ್ಬರು ತನ್ನಿಂದ ತಪ್ಪಾಗಿದೆ, ಕ್ಷಮಿಸಿಬಿಡಿ ಎಂದು ಹೇಳುತ್ತಾ ದಾಳಿಯ ನೇತೃತ್ವ ವಹಿಸಿದ ಅಧಿಕಾರಿಯ ಕಾಲಿಗೆ ಬಿದ್ದ ಪ್ರಸಂಗ ಯಾದಗಿರಿಯಲ್ಲಿ ಇಂದು ನಡೆಯಿತು.

ಯಾದಗಿರಿ ಜಿಲ್ಲಾ ತೋಟಗಾರಿಗೆ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಬಾಬು ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳಿಂದ ಟ್ರ್ಯಾಪ್ ಆಗಿ ಸಿಕ್ಕಿ ಬಿದ್ದವರು. ಜಿಲ್ಲೆಯ ಕೌಳೂರು ಗ್ರಾಮದ ಶಿವಾರೆಡ್ಡಿ ಹೆಸರಿನ ವ್ಯಕ್ತಿಗೆ ಹನಿ ನೀರಾವರಿ ಯೋಜನೆಯ ಒಂದು ಲಕ್ಷ ರೂಪಾಯಿ ಸಬ್ಸಿಡಿ ಮಂಜೂರು ಮಾಡುವಾಗ ಬಾಬು, 5 ಸಾವಿರ ರೂಪಾಯಿಗಳ ಲಂಚಕ್ಕೆ ಬೇಡಿಕೆಯಿಟ್ಟು ಅದನ್ನು ಪಡೆಯುತ್ತಿರುವಾಗಲೇ ಎಸಿಬಿ ಬಲೆಗೆ ಬಿದ್ದರು.

ಎಸಿಬಿ ಎಸ್ಪಿ ಮಹೇಶ್ ಮೇಘಣ್ಣವರ್, ಡಿವೈಎಸ್ಪಿ ಬಿಬಿ ಪಟೇಲ್ ದಾಳಿಯ ನೇತೃತ್ವ ವಹಿಸಿದ್ದರು. ಲಂಚಗುಳಿ ಅಧಿಕಾರಿ ಬಾಬು, ಮೇಘಣ್ಣನವರ್ ಅವರ ಕಾಲು ಮುಟ್ಟಿ ಕ್ಷಮಿಸುವಂತೆ ಗೋಗರೆದರು.

ಉಪ್ಪು ತಿಂದವನು ನೀರು ಕುಡಿಯಲೇಬೇಕು ಅಂತ ಹೇಳುತ್ತಾರೆ, ಹಾಗೆಯೇ ಲಂಚ ಪಡೆದವನು ಇಂದಲ್ಲ ನಾಳೆ ಸಿಕ್ಕಿಬೀಳಲೇ ಬೇಕು.