‘ನಮ್ಮ ಗ್ರಾಮ ಸ್ಥಳಾಂತರಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ತೇವೆ’

|

Updated on: Oct 17, 2020 | 12:53 PM

ಯಾದಗಿರಿ: ನಮ್ಮ ಗ್ರಾಮ ಸ್ಥಳಾಂತರಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ತೇವೆ ಎಂದು ಶಿವನೂರ ಗ್ರಾಮದ ಸಂತ್ರಸ್ತರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ವಡಗೇರ ತಾಲೂಕಿನ ಶಿವನೂರ ಗ್ರಾಮದಲ್ಲಿ ಭೀಮಾ ನದಿ ನೀರು ನುಗ್ಗಿ ಗ್ರಾಮಸ್ಥರು ಪರದಾಡುವಂತ ಪರಿಸ್ಥಿತಿ ಬಂದಿದೆ. ಹೀಗಾಗಿ ಮನನೊಂದ ಸಂತ್ರಸ್ತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಗ್ರಾಮ ಸ್ಥಳಾಂತರಿಸಲು 30 ವರ್ಷಗಳಿಂದ ಕೇಳಿಕೊಳ್ಳುತ್ತಿದ್ದೇವೆ. ಈಗ ಮತ್ತೆ ಭೀಮಾ ನದಿ ನೀರು ನುಗ್ಗಿ ಗ್ರಾಮ ಜಲಾವೃತವಾಗಿದೆ. ಹೀಗಾಗಿ ನಾವು ಪರಿಹಾರ ಕೇಂದ್ರಕ್ಕೆ ಬರಬೇಕಾದ ಸ್ಥಿತಿ ಬಂದಿದೆ. ಈಗ ನೀವು […]

ನಮ್ಮ ಗ್ರಾಮ ಸ್ಥಳಾಂತರಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ತೇವೆ
Follow us on

ಯಾದಗಿರಿ: ನಮ್ಮ ಗ್ರಾಮ ಸ್ಥಳಾಂತರಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ತೇವೆ ಎಂದು ಶಿವನೂರ ಗ್ರಾಮದ ಸಂತ್ರಸ್ತರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ವಡಗೇರ ತಾಲೂಕಿನ ಶಿವನೂರ ಗ್ರಾಮದಲ್ಲಿ ಭೀಮಾ ನದಿ ನೀರು ನುಗ್ಗಿ ಗ್ರಾಮಸ್ಥರು ಪರದಾಡುವಂತ ಪರಿಸ್ಥಿತಿ ಬಂದಿದೆ. ಹೀಗಾಗಿ ಮನನೊಂದ ಸಂತ್ರಸ್ತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಗ್ರಾಮ ಸ್ಥಳಾಂತರಿಸಲು 30 ವರ್ಷಗಳಿಂದ ಕೇಳಿಕೊಳ್ಳುತ್ತಿದ್ದೇವೆ. ಈಗ ಮತ್ತೆ ಭೀಮಾ ನದಿ ನೀರು ನುಗ್ಗಿ ಗ್ರಾಮ ಜಲಾವೃತವಾಗಿದೆ. ಹೀಗಾಗಿ ನಾವು ಪರಿಹಾರ ಕೇಂದ್ರಕ್ಕೆ ಬರಬೇಕಾದ ಸ್ಥಿತಿ ಬಂದಿದೆ. ಈಗ ನೀವು ನಮ್ಮ ಗ್ರಾಮ ಸ್ಥಳಾಂತರಿಸದಿದ್ದರೆ ಇಲ್ಲೇ ಇರ್ತೇವೆ. ಸಾವಾಗಲಿ, ಬದುಕಾಗಲಿ ಪರಿಹಾರ ಕೇಂದ್ರದಲ್ಲೇ ಇರುತ್ತೇವೆ. ಕೇಂದ್ರವನ್ನು ಮಾತ್ರ ನಾವು ಬಿಟ್ಟು ಹೋಗುವುದಿಲ್ಲ. ಶಾಸಕರಿಗೆ ಚುನಾವಣೆ ಇದ್ದಾಗ ಮಾತ್ರ ನಮ್ಮೂರು ನೆನಪಾಗುತ್ತೆ. ಉಳಿದಂತೆ ಯಾವತ್ತೂ ಶಾಸಕರಿಗೆ ನಮ್ಮೂರು ನೆನಪಾಗಲ್ಲ ಎಂದು ಬೆಂಡೆಬೆಂಬಳಿ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡಿದ್ದಾರೆ.