ಮದುವೆ ವಿಚಾರ ಮಾತನಾಡುವುದಾಗಿ ಕರೆಸಿ ಹುಡುಗಿ ಮನೆಯವರಿಂದಲೇ ಯುವಕನ ಕೊಲೆ!

ನೆಲಮಂಗಲ: ಪ್ರೀತಿಸಿದ್ದ ಹುಡುಗಿ ಮನೆಯವರಿಂದಲೇ ಯುವಕನ ಕೊಲೆಯಾಗಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕನಕೇನಹಳ್ಳಿ ಬಳಿ ನಡೆದಿದೆ. ಲಕ್ಷ್ಮೀಪತಿ(24) ಮೃತ ಯುವಕ. ನೆಲಮಂಗಲ ತಾಲೂಕಿನ ಬಸವನಹಳ್ಳಿ ನಿವಾಸಿ ಲಕ್ಷ್ಮೀಪತಿ ಹಾಗೂ ಅಂಬ್ರಿನಾ ಇಬ್ಬರೂ 4 ವರ್ಷಗಳಿಂದ ಪರಸ್ಪರ ಪ್ರೀತಿಸ್ತಿದ್ರು. ಒಂದು ಜೀವ ಎರಡು ದೇಹದಂತಿತ್ತು ಇವರ ಪ್ರೀತಿ. ಹೀಗಾಗಿ ಇಸ್ಲಾಂ ಧರ್ಮದ ರೀತಿಯಲ್ಲಿ ಮದುವೆ ಮಾಡುವ ಸಲುವಾಗಿ ಮಾತುಕತೆಗೆ ವಿಚಾರವಾಗಿ ಕರೆಸಿ ಲಕ್ಷ್ಮೀಪತಿಯ ಹತ್ಯೆ ಮಾಡಲಾಗಿದೆ. ಅನ್ಯ ಜಾತಿ ಎಂಬ ಕಾರಣಕ್ಕೆ ಕುತ್ತಿಗೆಗೆ ಬೆಲ್ಟ್‌ ಬಿಗಿದು […]

ಮದುವೆ ವಿಚಾರ ಮಾತನಾಡುವುದಾಗಿ ಕರೆಸಿ ಹುಡುಗಿ ಮನೆಯವರಿಂದಲೇ ಯುವಕನ ಕೊಲೆ!

Updated on: Oct 07, 2020 | 9:23 AM

ನೆಲಮಂಗಲ: ಪ್ರೀತಿಸಿದ್ದ ಹುಡುಗಿ ಮನೆಯವರಿಂದಲೇ ಯುವಕನ ಕೊಲೆಯಾಗಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕನಕೇನಹಳ್ಳಿ ಬಳಿ ನಡೆದಿದೆ. ಲಕ್ಷ್ಮೀಪತಿ(24) ಮೃತ ಯುವಕ.

ನೆಲಮಂಗಲ ತಾಲೂಕಿನ ಬಸವನಹಳ್ಳಿ ನಿವಾಸಿ ಲಕ್ಷ್ಮೀಪತಿ ಹಾಗೂ ಅಂಬ್ರಿನಾ ಇಬ್ಬರೂ 4 ವರ್ಷಗಳಿಂದ ಪರಸ್ಪರ ಪ್ರೀತಿಸ್ತಿದ್ರು. ಒಂದು ಜೀವ ಎರಡು ದೇಹದಂತಿತ್ತು ಇವರ ಪ್ರೀತಿ. ಹೀಗಾಗಿ ಇಸ್ಲಾಂ ಧರ್ಮದ ರೀತಿಯಲ್ಲಿ ಮದುವೆ ಮಾಡುವ ಸಲುವಾಗಿ ಮಾತುಕತೆಗೆ ವಿಚಾರವಾಗಿ ಕರೆಸಿ ಲಕ್ಷ್ಮೀಪತಿಯ ಹತ್ಯೆ ಮಾಡಲಾಗಿದೆ.

ಅನ್ಯ ಜಾತಿ ಎಂಬ ಕಾರಣಕ್ಕೆ ಕುತ್ತಿಗೆಗೆ ಬೆಲ್ಟ್‌ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಅಂಬ್ರಿನಾ ಅಪ್ಪ ನಜೀಮುದ್ದೀನ್, ತಮ್ಮ ಸಿಕಂದರ್ ಸೇರಿದಂತೆ ನಾಲ್ವರ ವಿರುದ್ಧ ಲಕ್ಷ್ಮೀಪತಿ ಕೊಲೆ ಆರೋಪ ಕೇಳಿ ಬಂದಿದ್ದು, ನಜೀಮುದ್ದೀನ್, ಸಿಕಂದರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ನಾಪತ್ತೆಯಾಗಿರುವ ಮತ್ತಿಬ್ಬರಿಗಾಗಿ ಕುದೂರು ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.