ಭೀಕರ ರಸ್ತೆ ಅಪಘಾತ.. ಪ್ರಾಣ ಬಿಟ್ಟ ಅಫ್ಘಾನಿಸ್ತಾನ್ ಆಟಗಾರ!
29 ವರ್ಷ ವಯಸ್ಸಸಷ್ಟೇ.. ಈಗ ತಾನೇ ಅಫ್ಘಾನಿಸ್ತಾನ ತಂಡದಲ್ಲಿ ಖಾಯಂ ಸ್ಥಾನ ಗಳಿಸಿಕೊಂಡಿದ್ದ ಕ್ರಿಕೆಟಿಗ. ಅದ್ರಲ್ಲೂ ಅಫ್ಘಾನ್ ಟಿಟ್ವೆಂಟಿ ತಂಡದಲ್ಲಿ ಈತನ ಸದ್ದು ಜೋರಾಗಿತ್ತು. ಆದ್ರೀಗ ಈತ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ. ನಜೀಬ್ ತರಕೈ.. ಅಫ್ಘಾನಿಸ್ತಾನ ತಂಡದ ಆರಂಭಿಕ ಬ್ಯಾಟ್ಸ್ಮನ್. ಅಫ್ಘಾನ್ ಪರ 12 ಟಿಟ್ವೆಂಟಿ ಮತ್ತು 1 ಏಕದಿನ ಪಂದ್ಯವನ್ನಾಡಿರೋ ನಜೀಬ್ ಅಪಘಾತದಲ್ಲಿ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ತನ್ನದಲ್ಲದ ತಪ್ಪಿಗೆ ಪ್ರಾಣ ಚೆಲ್ಲಿದ ನಜೀಬ್! ನಿಜ.. ನಜೀಬ್ ತನ್ನದಲ್ಲದ ತಪ್ಪಿಗೆ ಪಾಪ ಪ್ರಾಣ ಕಳೆದುಕೊಂಡಿದ್ದಾನೆ. […]
29 ವರ್ಷ ವಯಸ್ಸಸಷ್ಟೇ.. ಈಗ ತಾನೇ ಅಫ್ಘಾನಿಸ್ತಾನ ತಂಡದಲ್ಲಿ ಖಾಯಂ ಸ್ಥಾನ ಗಳಿಸಿಕೊಂಡಿದ್ದ ಕ್ರಿಕೆಟಿಗ. ಅದ್ರಲ್ಲೂ ಅಫ್ಘಾನ್ ಟಿಟ್ವೆಂಟಿ ತಂಡದಲ್ಲಿ ಈತನ ಸದ್ದು ಜೋರಾಗಿತ್ತು. ಆದ್ರೀಗ ಈತ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ.
ನಜೀಬ್ ತರಕೈ.. ಅಫ್ಘಾನಿಸ್ತಾನ ತಂಡದ ಆರಂಭಿಕ ಬ್ಯಾಟ್ಸ್ಮನ್. ಅಫ್ಘಾನ್ ಪರ 12 ಟಿಟ್ವೆಂಟಿ ಮತ್ತು 1 ಏಕದಿನ ಪಂದ್ಯವನ್ನಾಡಿರೋ ನಜೀಬ್ ಅಪಘಾತದಲ್ಲಿ ತನ್ನ ಪ್ರಾಣ ಕಳೆದುಕೊಂಡಿದ್ದಾನೆ.
ತನ್ನದಲ್ಲದ ತಪ್ಪಿಗೆ ಪ್ರಾಣ ಚೆಲ್ಲಿದ ನಜೀಬ್! ನಿಜ.. ನಜೀಬ್ ತನ್ನದಲ್ಲದ ತಪ್ಪಿಗೆ ಪಾಪ ಪ್ರಾಣ ಕಳೆದುಕೊಂಡಿದ್ದಾನೆ. ಶುಕ್ರವಾರ ನಜೀಬ್ ಜಲಾಲಾಬಾದ್ ಮಾರ್ಕೆಟ್ನಿಂದ ಮನೆಗೆ ತೆರಳುತ್ತಿದ್ದ. ಈ ವೇಳೆ ರಸ್ತೆ ದಾಟುವಾಗ ವೇಗವಾಗಿ ಬಂದ ಕಾರೊಂದು ನಜೀಬ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಜೀಬ್ಗೆ ಗಂಭೀರ ಗಾಯವಾಗಿದೆ. ತಕ್ಷಣ ಸ್ಥಳೀಯರು ನಜೀಬ್ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ನಜೀಬ್, ಕೋಮಾಕ್ಕೆ ಜಾರಿದ್ದ. ಆದ್ರೀಗ ಕೋಮಾದಲ್ಲಿದ್ದ ನಜೀಬ್ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಸಾವನ್ನಪ್ಪಿದ್ದಾನೆ. ನಜೀಬ್ ಅಕಾಲಿಕ ಮರಣಕ್ಕೆ ಅಫ್ಘಾನ್ ಕ್ರಿಕೆಟ್ ಮಂಡಳಿ ಸಂತಾಪ ಸೂಚಿಸಿದೆ. ಇತ್ತ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಈಗ ತಾನೇ ಸ್ಥಾನ ಮಾನ ಕಲ್ಪಿಸಿಕೊಂಡಿರೋ ಅಫ್ಘಾನ್ ಕ್ರಿಕೆಟ್ಗೆ, ನಜೀಬ್ ಅಕಾಲಿಕ ಮರಣ ದೊಡ್ಡ ನಷ್ಟ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.