ರಾಜಸ್ತಾನ ರಾಯಲ್ಸ್ ಬ್ಯಾಟ್ಸ್ಮನ್ಗಳಿಗೆ ಇಂದು ಸತ್ವ ಪರೀಕ್ಷೆ!
ಸುಲಭವೆನಿಸುವ ಕ್ಯಾಚ್ಗಳನ್ನು ನೆಲಸಮ ಮಾಡುವುದು ಪರಿಪಾಠವಾಗಿರುವ ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಅವೃತಿಯಲ್ಲಿ ಇಂದು ರೋಹಿತ್ ಶರ್ಮ ಅವರ ಮುಂಬೈ ಇಂಡಿಯನ್ಸ್ ಮತ್ತು ಸ್ಟಿವೆನ್ ಸ್ಮಿತ್ ನಾಯಕತ್ವದ ರಾಜಸ್ತಾನ ರಾಯಲ್ಸ್ ನಡುವೆ ಸೀಸನ್ನ 20ನೇ ಪಂದ್ಯ ನಡೆಯಲಿದೆ. ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 3 ಗೆದ್ದು 2 ರಲ್ಲಿ ಸೋತಿರುವ ಮುಂಬೈ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲಿನೆರಡು ಪಂದ್ಯಗಳನ್ನು ಗೆದ್ದು, ನಂತರದ ಎರಡು ಪಂದ್ಯಗಳಲ್ಲಿ ಸೋತಿರುವ ರಾಯಲ್ಸ್ 5ನೇ ಸ್ಥಾನದಲ್ಲಿದೆ. ಬ್ಯಾಟಿಂಗ್ಗೆ ಸ್ವರ್ಗವಾಗಿರುವ ಮತ್ತು ಚಿಕ್ಕ […]
ಸುಲಭವೆನಿಸುವ ಕ್ಯಾಚ್ಗಳನ್ನು ನೆಲಸಮ ಮಾಡುವುದು ಪರಿಪಾಠವಾಗಿರುವ ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಅವೃತಿಯಲ್ಲಿ ಇಂದು ರೋಹಿತ್ ಶರ್ಮ ಅವರ ಮುಂಬೈ ಇಂಡಿಯನ್ಸ್ ಮತ್ತು ಸ್ಟಿವೆನ್ ಸ್ಮಿತ್ ನಾಯಕತ್ವದ ರಾಜಸ್ತಾನ ರಾಯಲ್ಸ್ ನಡುವೆ ಸೀಸನ್ನ 20ನೇ ಪಂದ್ಯ ನಡೆಯಲಿದೆ. ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 3 ಗೆದ್ದು 2 ರಲ್ಲಿ ಸೋತಿರುವ ಮುಂಬೈ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲಿನೆರಡು ಪಂದ್ಯಗಳನ್ನು ಗೆದ್ದು, ನಂತರದ ಎರಡು ಪಂದ್ಯಗಳಲ್ಲಿ ಸೋತಿರುವ ರಾಯಲ್ಸ್ 5ನೇ ಸ್ಥಾನದಲ್ಲಿದೆ.
ಬ್ಯಾಟಿಂಗ್ಗೆ ಸ್ವರ್ಗವಾಗಿರುವ ಮತ್ತು ಚಿಕ್ಕ ಅಂತರದ ಬೌಂಡರಿಗಳಿರುವ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ಸ್ ಬ್ಯಾಟ್ಸ್ಮನ್ಗಳು ಮನಬಂದಂತೆ ಎದುರಾಳಿ ಬೌಲರ್ಗಳನ್ನು ದಂಡಿಸಿದರು. ಆದರೆ, ಅಬು ಧಾಬಿ ಮತ್ತು ದುಬೈನ ದೊಡ್ಡ ದೊಡ್ಡ ಮೈದಾನಗಳಲ್ಲಿ ಅದರ ಬ್ಯಾಟ್ಸ್ಮನ್ಗಳ ಹೊಡೆತಗಳು ಬೌಂಡರಿ ಗೆರೆಯನ್ನು ಕ್ಲೀಯರ್ ಮಾಡುತ್ತಿಲ್ಲ. ಸಂಜು ಸ್ಯಾಮ್ಸನ್, ರಾಹಲ್ ತೆವಾಟಿಯಾ, ರಾಬಿನ್ ಉತ್ತಪ್ಪ, ಸ್ಮಿತ್ ಮತ್ತು ಜಾಸ್ ಬಟ್ಲರ್ ಮೊದಲಾದವರೆಲ್ಲ ದೊಡ್ಡ ಹೊಡೆತಗಳನ್ನು ಬಾರಿಸುವುದಕ್ಕೆ ಖ್ಯಾತರು. ಶಾರ್ಜಾದಲ್ಲಿ ಅವರ ಹೊಡೆತಗಳು ಬಾಲನ್ನು ಬೌಂಡರಿ ಲೈನ್ ಮೇಲಿಂದ ಸುಲಭವಾಗಿ ಆಚೆ ತೆಗೆದುಕೊಂಡು ಹೋಗುತ್ತಿದ್ದವು. ಆದರೆ ಬೇರೆ ಮೈದಾನಗಳಲ್ಲಿ ಅದು ಸಾಧ್ಯವಾಗುತ್ತಿಲ್ಲ.
ಹಾಗಂತ, ಅವರೆಲ್ಲ ಶಾರ್ಜಾ ಹೊರತಾದ ಮೈದಾನಗಳಲ್ಲಿ ರನ್ ಗಳಿಸಲಾರರು ಅಂತೇನಿಲ್ಲ. ಮೇಲೆ ಉಲ್ಲೇಖಿಸಿರುವ ಆಟಗಾರರರೆಲ್ಲ ಅಚ್ಚ ಪ್ರತಿಭಾವಂತರು ಮತ್ತ್ತು ಅನುಭವಿಗಳೂ ಹೌದು. ಇತರ ಮೈದಾನಗಳಲ್ಲಿ ಅವರೆಲ್ಲ ಒಮ್ಮೆ ಅಟಕ್ಕೆ ಕುದಿರಿಕೊಂಡರೆ ಸಾಕು, ಅವರ ಬ್ಯಾಟ್ಗಳಿಂದ ರನ್ ಹೊಳೆ ಮತ್ತೆ ಹರಿಯಲಿದೆ. [yop_poll id=”6″]
ರಾಯಲ್ಸ್ನ ಕನ್ನಡಿಗ ಉತ್ತಪ್ಪ ಪದೇಪದೆ ವಿಫಲರಾಗುತ್ತಿರುವುದರಿಂದ ಇವತ್ತಿನ ಪಂದ್ಯದಲ್ಲಿ ಆಡುವುದು ಅನುಮಾನ.ಅವರ ಸ್ಥಾನಕ್ಕೆ ಮೊದಲ ಪಂದ್ಯದಲ್ಲಿ ಆಡಿದ ಯುವ ಆಟಗಾರ ಯಶಸ್ವೀ ಜೈಸ್ವಾಲ್ ವಾಪಸ್ಸು ಬರಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಉತ್ತಮವಾಗಿ ಆಡಿದ ಮಹಿಪಾಲ್ ಲೊಮ್ರೊರ್ ಸ್ಥಾನವುಳಿಸಿಕೊಳ್ಳ್ಳಲಿದ್ದಾರೆ. ಸ್ಸ್ಟಾರ್ ಅಲ್ರೌಂಡರ್ ಬೆನ್ ಸ್ಟೋಕ್ಸ್ ಅವರ ಅನುಪಸ್ಥಿತಿ ರಾಯಲ್ಸ್ ಟೀಮನ್ನು ಕಾಡುತ್ತಿದೆ. ಸ್ಟೋಕ್ಸ್, ನ್ಯೂಜಿಲೆಂಡ್ನಿಂದ ವಾಪಸ್ಸು ಬಂದು ಟೀಮನ್ನು ಸೇರಿಕೊಂಡಿರುವರಾದರೂ ಕ್ವಾರಂಟೈನ್ ನಿಯಮದ ಹಿನ್ನೆಲೆಯಲ್ಲಿ ಅಕ್ಟೋಬರ್ 10ರ ನಂತರವೇ ಆಯ್ಕೆಗೆ ಲಭ್ಯರಾಗುತ್ತಾರೆ. ಹಿಂದೊಮ್ಮೆ, ಐಪಿಎಲ್ನ ಅತ್ಯಂತ ದುಬಾರಿ ಆಟಗಾರಲ್ಲೊಬ್ಬರಾಗಿದ್ದ ರಾಯಲ್ಸ್ನ ವೇಗದ ಬೌಲರ್ ಜಯದೇವ್ ಉನಾಡ್ಕಟ್ ಈ ಸೀಸನ್ನಲ್ಲಿ ಕಳಪೆ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಹಾಗಾಗಿ ಇವತ್ತಿನ ಪಂದ್ಯಕ್ಕೆ ಅವರನ್ನು ಕೈಬಿಟ್ಟು ವರುಣ್ ಆರನ್ ಅವರನ್ನು ಆಡಿಸಬಹುದು. ಉಳಿದಂತೆ, ಜೊಫ್ರಾ ಆರ್ಚರ್, ಟಾಮ್ ಕರನ್, ಶ್ರೇಯಸ್ ಗೋಪಾಲ, ತೆವಾಟಿಯ ಅವರನ್ನೊಳಗೊಂಡ ರಾಯಲ್ಸ್ ಬೌಲಿಂಗ್ ಆಕ್ರಮಣ ತನ್ನ ಕೆಲಸವನ್ನು ಚೆನ್ನಾಗಿಯೇ ನಿಭಾಯಿಸುತ್ತಿದೆ.
ಅತ್ತ, ಕೊಲ್ಕತಾ ನೈಟ್ ರೈಡರ್ಸ್ ಟೀಮನ್ನು 48 ರನ್ಗಳಿಂದ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 34 ರನ್ಗಳಿಂದ ಸುಲಭವಾಗಿ ಸೋಲಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ರೋಹಿತ್ ಶರ್ಮ ಪಡೆ ಸತತ ಮೂರನೆ ಗೆಲುವು ಸಾಧಿಸುವೆಡೆ ಗಮನ ಕೇಂದ್ರೀಕರಿಸಿದೆ. ಖುದ್ದು ಶರ್ಮ, ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಷನ್ ರನ್ ಗಳಿಸುತ್ತಿದ್ದಾರೆ.
ಕೃಣಾಲ್ ಪಾಂಡೆ, ಹೈದರಾಬಾದ್ ವಿರುದ್ಧ ಕೇವಲ 4 ಎಸೆತಗಳಲ್ಲಿ ಅಜೇಯ 20 ರನ್ ಬಾರಿಸಿದ್ದು, ಮೈನವಿರೇಳಿಸಿತ್ತು. ಪವರ್ ಹಿಟ್ಟಿಂಗ್ನ ಪರ್ಫೆಕ್ಟ್ ಉದಾಹರಣೆ ಅದಾಗಿತ್ತು. ಪಾಂಡೆ ಐಪಿಎಲ್ ಇತಿಹಾಸದ ಗರಿಷ್ಠ ಸ್ಟ್ರೈಕ್ರೇಟ್ (500) ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಕೈರನ್ ಪೊಲ್ಲಾರ್ಡ್ ಟಿ20 ಆವೃತಿಗೆ ಹೇಳಿಮಾಡಿಸಿದಂಥ ಆಟಗಾರ. ಆರ್ಸಿಬಿ ವಿರುದ್ಧ ಕಿಷನ್ ಜೊತೆ ಸೇರಿ ಅವರು ಬೌಲರ್ಗಳನ್ನು ದಂಡಿಸಿದ ರೀತಿ, ಬಹಳ ದಿನಗಳ ಕಾಲ ನೆನಪಿನಲ್ಲಿ ಉಳಿಯಲಿದೆ.
ಜಸ್ಪ್ರಿತ್ ಬುಮ್ರಾ ಮತ್ತು ಟ್ರೆಂಟ್ ಬೌಲ್ಟ್ ಅವರಲ್ಲಿ ಮುಂಬೈ ಅತ್ಯಂತ ಪರಿಣಾಮಕಾರಿ ಆರಂಭಿಕ ದಾಳಿಯನ್ನು ಹೊಂದಿದೆ. ಜೇಮ್ಸ್ ಪ್ಯಾಟಿನ್ಸನ್ ಸಹ ಟೀಮಿಗೆ ಬ್ರೇಕ್ಥ್ರೂಗಳನ್ನು ಒದಗಿಸುತ್ತಿದ್ದಾರೆ. ಹಾರ್ದಿಕ್ ಪಾಂಡೆ ತಮ್ಮಿಂದ ನಿರೀಕ್ಷಿಸಿರುವುದನ್ನು ಡೆಲಿವರ್ ಮಾಡುತ್ತಿಲ್ಲ. ಹೈದರಾಬಾದ್ ವಿರುದ್ಧ ಆಡಿದ ಟೀಮನ್ನೇ ರೋಹಿತ್ ಇವತ್ತು ಉಳಿಸಿಕೊಳ್ಳಬಹುದು.
ಒಟ್ಟಿನಲ್ಲಿ ಆತ್ಮವಿಶ್ವಾಸದ ಪ್ರತೀಕವಾಗಿರುವ ಮುಂಬೈ ಮತ್ತು ಭಾರಿ ಪ್ರತಿಭಾವಂತ ಆಟಗಾರರನ್ನು ಹೊಂದಿರುವ ರಾಜಸ್ತಾನ ನಡುವೆ ಇವತ್ತಿನ ಪಂದ್ಯ ನಡೆಯಲಿದೆ. ಮನರಂಜನೆ ಖಚಿತ.
Published On - 5:13 pm, Tue, 6 October 20