AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿಗೆ ತಮ್ಮ ಆಟಗಾರರನ್ನು ಬೆಂಬಲಿಸುವ ಪರಿ ಎಣಿಕೆಗೆ ನಿಲುಕದ್ದು: ಬ್ರೆಟ್ ಲೀ

ಆಸ್ಟ್ರೇಲಿಯನ್ನರು ಯಾರನ್ನೂ ಸುಮ್ಮನೆ ಹೊಗಳುವುದಿಲ್ಲ, ಕ್ರಿಕೆಟ್​ನಲ್ಲಂತೂ ಅಂಥ ಉದಾಹರಣೆಗಳು ತೀರಾ ಕಡಿಮೆ. ಆದರೆ ಇಂಡಿಯನ್ ಪ್ರಿಮೀಯರ್ ಲೀಗ್ ಶುರುವಾದಾಗಿನಿಂದ ಅವರ ಮನೋಭಾವನೆ ಬದಲಾಗಿದೆ. ಐಪಿಎಲ್ ಸೀಸನ್​ಗಳಲ್ಲಿ ಅನಲಿಸ್ಟ್ ಆಗಿ ಕೆಲಸ ಮಾಡುವ ಆಸ್ಟ್ರೇಲಿಯಾದ ಬ್ರೆಟ್ ಲೀ, ಚೆನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ತಂಡದ ಆಟಗಾರರ ಮೇಲಿಡುವ ನಂಬಿಕೆ ಮತ್ತು ವೈಫಲ್ಯಗಳ ಹೊರತಾಗಿಯೂ ಅವರನ್ನು ಹುರಿದುಂಬಿಸಿ ಬೆಂಬಲಿಸುವುದನ್ನು ಮನಸಾರೆ ಕೊಂಡಾಡಿದ್ದಾರೆ. ಸಿಎಸ್​ಕೆ ಓಪನರ್ ಶೇನ್ ವಾಟ್ಸನ್ ನಿಸ್ಸಂದೇಹವಾಗಿ ಅತ್ಯುತ್ತಮ ಆಟಗಾರ. ಅಸಲಿಗೆ […]

ಧೋನಿಗೆ ತಮ್ಮ ಆಟಗಾರರನ್ನು ಬೆಂಬಲಿಸುವ ಪರಿ ಎಣಿಕೆಗೆ ನಿಲುಕದ್ದು: ಬ್ರೆಟ್ ಲೀ
ಅರುಣ್​ ಕುಮಾರ್​ ಬೆಳ್ಳಿ
|

Updated on: Oct 06, 2020 | 6:42 PM

Share

ಆಸ್ಟ್ರೇಲಿಯನ್ನರು ಯಾರನ್ನೂ ಸುಮ್ಮನೆ ಹೊಗಳುವುದಿಲ್ಲ, ಕ್ರಿಕೆಟ್​ನಲ್ಲಂತೂ ಅಂಥ ಉದಾಹರಣೆಗಳು ತೀರಾ ಕಡಿಮೆ. ಆದರೆ ಇಂಡಿಯನ್ ಪ್ರಿಮೀಯರ್ ಲೀಗ್ ಶುರುವಾದಾಗಿನಿಂದ ಅವರ ಮನೋಭಾವನೆ ಬದಲಾಗಿದೆ.

ಐಪಿಎಲ್ ಸೀಸನ್​ಗಳಲ್ಲಿ ಅನಲಿಸ್ಟ್ ಆಗಿ ಕೆಲಸ ಮಾಡುವ ಆಸ್ಟ್ರೇಲಿಯಾದ ಬ್ರೆಟ್ ಲೀ, ಚೆನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ತಂಡದ ಆಟಗಾರರ ಮೇಲಿಡುವ ನಂಬಿಕೆ ಮತ್ತು ವೈಫಲ್ಯಗಳ ಹೊರತಾಗಿಯೂ ಅವರನ್ನು ಹುರಿದುಂಬಿಸಿ ಬೆಂಬಲಿಸುವುದನ್ನು ಮನಸಾರೆ ಕೊಂಡಾಡಿದ್ದಾರೆ.

ಸಿಎಸ್​ಕೆ ಓಪನರ್ ಶೇನ್ ವಾಟ್ಸನ್ ನಿಸ್ಸಂದೇಹವಾಗಿ ಅತ್ಯುತ್ತಮ ಆಟಗಾರ. ಅಸಲಿಗೆ ಅವರೊಬ್ಬ ಆಲ್​ರೌಂಡರ್ ಅಂತ ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಈ ಸೀಸನ್​ನಲ್ಲಿ ಅವರು ಕೇವಲ ಬ್ಯಾಟಿಂಗ್ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ವಯಸ್ಸಾಗುತ್ತಿರುವುದರಿಂದ ವ್ಯಾಟೊ ಬೌಲಿಂಗ್ ಮಾಡದಿರಲು ನಿರ್ಧರಿಸಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಈ ಬಾರಿಯ ಸೀಸನ್​ನಲ್ಲಿ ವಾಟ್ಸನ್ ಯಾವ ಮಟ್ಟಿಗೆ ಫೇಲಾಗಲಾರಂಭಿಸಿದ್ದರೆಂದರೆ, ತಮ್ಮನ್ನು ಡ್ರಾಪ್ ಮಾಡುವುದು ನಿಶ್ವಿತ ಅಂತ ಭಾವಿಸಿದ್ದರು. ಆದರೆ ನಾಯಕ ಧೋನಿಗೆ ಮಾತ್ರ ತಮ್ಮ ಓಪನರ್ ಮೇಲಿನ ನಂಬಿಕೆ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಹಾಗಾಗೇ ಧೋನಿ, ಆಸ್ಟ್ರೇಲಿಯಾದ ಈ ಮಾಜಿ ಆಟಗಾರನನ್ನು ಆಡುವ ಎಲೆವೆನ್​ನಲ್ಲಿ ಮುಂದುವರಿಸಿದರು.

ವಾಟ್ಸನ್ ಸಹ ತಮ್ಮ ನಾಯಕನ ವಿಶ್ವಾಸವನ್ನು ಅದ್ಹೇಗೆ ಉಳಿಸಿಕೊಂಡರೆನ್ನುವುದು ರವಿವಾರದಂದು ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ಧ ಆಡಿದ ಪಂದ್ಯದಲ್ಲಿ ವಿದಿತವಾಯಿತು. ಗೆಲ್ಲಲು 175 ರನ್ ಮೊತ್ತದ ಬೆನ್ನಟ್ಟಿದ ಸಿಎಸ್​ಕೆ ವಿಕೆಟ್ ನಷ್ಟವಿಲ್ಲದೆ, ಇನ್ನೂ 14 ಎಸೆತಗಳು ಬಾಕಿಯಿರುವಂತೆಯೇ ಗುರಿ ಸಾಧಿಸಿತು. ವಾಟ್ಸನ್ 53 ಎಸೆತಗಳಲ್ಲಿ 83 ರನ್ ಬಾರಿಸಿದರೆ, ಅವರ ಜೊತೆಗಾರ ಫಫ್ ಡು ಪ್ಲೆಸ್ಸಿ ಸಹ 53 ಎಸೆತಗಳನ್ನಾಡಿ 87 ರನ್ ಬಾರಿಸಿದರು. ಈ ಪಂದ್ಯದ ನಂತರವೇ ಲೀ, ಧೋನಿಯ ನಾಯಕತ್ವದ ಬಗ್ಗೆ ಗುಣಗಾನ ಮಾಡಿದ್ದು.

‘‘ಎಮ್​ಎಸ್ ಧೋನಿಯಲ್ಲಿರುವ ಶ್ರೇಷ್ಠ ಗುಣವೆಂದರೆ, ತಮ್ಮ ಆಟಗಾರರ ಮೇಲಿಡುವ ನಂಬಿಕೆ. ಆಟಗಾರರು ಗಾಯಗೊಳ್ಳಬಹುದಾದ ಹಿನ್ನೆಲೆಯಲ್ಲಿ ಅವರು ಉಳಿದ 13-14 ಆಟಗಾರರನ್ನು ಸಹ ಬೆಂಬಲಿಸುತ್ತಾರೆ. ಆಡುವ ಎಲೆವೆನ್ ಮೇಲೆ ಅವರಿಗೆ ವಿಶ್ವಾಸ ಹುಟ್ಟಿತೆಂದರೆ ಅದಕ್ಕವರು ಬದ್ಧರಾಗಿರುತ್ತಾರೆ. ರವಿವಾರದಂದು ವಾಟ್ಸನ್ ಮತ್ತು ಡು ಪ್ಲೆಸ್ಸಿ ಅದೆಷ್ಟು ಚೆನ್ನಾಗಿ ಆಡಿದರೆಂದರೆ, ತಂಡದ ಇತರ ಸದಸ್ಯರೆಲ್ಲ ಅಂದು ರಾತ್ರಿ ಸಿಂಹಗಳಂತೆ ನಿರಾತಂಕದಿಂದ ನಿದ್ರೆ ಮಾಡಿದರು,’’ ಎಂದು ಲೀ ಹೇಳಿದ್ದಾರೆ.

‘‘ವಾಟ್ಸನ್​ರನ್ನು ಬೆಂಬಲಿಸಿ ಅವರಿಗೆ ಮತ್ತೊಂದು ಅವಕಾಶ ಕಲ್ಪಸಿದ ಧೋನಿ ಪ್ರಶಂಸಾರ್ಹರು. ಆ ವಿಶ್ವಾಸವನ್ನು ಉಳಿಸಿಕೊಂಡ ವ್ಯಾಟೊ ಅಧಿಕಾರಯುತ ಬ್ಯಾಟಿಂಗ್ ಪ್ರದರ್ಶಿಸಿದರು. ರವಿವಾರದಂದು ಅಕ್ಷರಶಃ ಬೆಂಕಿಯುಗುಳಿದ ವ್ಯಾಟೊ, ಫಾರ್ಮ್​ನಲ್ಲಿದ್ದರೆ ಯಾವ ಹೊಡೆತವನ್ನಾದರೂ ಆಡಬಲ್ಲರು,’’ ಎಂದು ಲೀ ಹೇಳಿದ್ದಾರೆ.

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ