ಕೊರೊನಾ ಆಟ, ಆಸ್ಪತ್ರೆಗಳ ಚೆಲ್ಲಾಟ! ತಾಯಿ ಜೀವಕ್ಕಾಗಿ ಯುವತಿ ಪರದಾಟ

|

Updated on: May 26, 2020 | 5:55 PM

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಇನ್ನೂ ಏನೆಲ್ಲ ಕಾಟ ಕೊಡುತ್ತದೋ.. ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿರುವ ಯುವತಿಯೊಬ್ಬಳು, ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ತಾಯಿಯನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ಕರುಣಾಜನಕ ಕತೆಯಿದು. ತಾಯಿಗೆ ವಾರಕ್ಕೆ 3 ಬಾರಿ ಡಯಾಲಿಸಿಸ್‌ ಮಾಡಿಸಬೇಕು. ಆದ್ರೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದಾಗಿದೆ. ದುಡ್ಡಿಲ್ಲದಿದ್ರೆ ತಾಯಿಗೆ ಡಯಾಲಿಸಿಸ್‌ ಮಾಡಿಸೋಕ್ಕೆ ಆಗೋಲ್ಲ ಎಂದು ಯುವತಿ ಪರಿತಪಿಸುತ್ತಿದ್ದಾಳೆ. 23 ವರ್ಷದ ದೀಪಿಕಾ ಹೆಸರಿನ ಈ ಯುವತಿ ಎನ್.ಸಿ.ಸಿ ಯಲ್ಲಿ ಪ್ರತಿಭಾನ್ವಿತೆ. ಆದ್ರೆ ವ್ಯಾಸಂಗ ಮುಂದುವರಿಸಿ, ಡಿಗ್ರಿ ಮುಗಿಸಲು ಸಹ ಸಾಧ್ಯವಾಗದೇ […]

ಕೊರೊನಾ ಆಟ, ಆಸ್ಪತ್ರೆಗಳ ಚೆಲ್ಲಾಟ! ತಾಯಿ ಜೀವಕ್ಕಾಗಿ ಯುವತಿ ಪರದಾಟ
Follow us on

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಇನ್ನೂ ಏನೆಲ್ಲ ಕಾಟ ಕೊಡುತ್ತದೋ.. ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿರುವ ಯುವತಿಯೊಬ್ಬಳು, ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ತಾಯಿಯನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ಕರುಣಾಜನಕ ಕತೆಯಿದು.

ತಾಯಿಗೆ ವಾರಕ್ಕೆ 3 ಬಾರಿ ಡಯಾಲಿಸಿಸ್‌ ಮಾಡಿಸಬೇಕು. ಆದ್ರೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದಾಗಿದೆ. ದುಡ್ಡಿಲ್ಲದಿದ್ರೆ ತಾಯಿಗೆ ಡಯಾಲಿಸಿಸ್‌ ಮಾಡಿಸೋಕ್ಕೆ ಆಗೋಲ್ಲ ಎಂದು ಯುವತಿ ಪರಿತಪಿಸುತ್ತಿದ್ದಾಳೆ.

23 ವರ್ಷದ ದೀಪಿಕಾ ಹೆಸರಿನ ಈ ಯುವತಿ ಎನ್.ಸಿ.ಸಿ ಯಲ್ಲಿ ಪ್ರತಿಭಾನ್ವಿತೆ. ಆದ್ರೆ ವ್ಯಾಸಂಗ ಮುಂದುವರಿಸಿ, ಡಿಗ್ರಿ ಮುಗಿಸಲು ಸಹ ಸಾಧ್ಯವಾಗದೇ ತೊಳಲಾಡುತ್ತಿದ್ದಾಳೆ.

ಸರ್ಕಾರಿ ಸಿಬ್ಬಂದಿಗೆ ತಾಂತ್ರಿಕ ದೋಷ: 
ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿರುವ ದೀಪಿಕಾ, ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ತಾಯಿಯನ್ನ ಉಳಿಸಿಕೊಳ್ಳಲು ಪರದಾಡುತ್ತಿದ್ದಾಳೆ. ತಾಯಿಗೆ ವಾರಕ್ಕೆ 3 ಬಾರಿ ಡಯಾಲಿಸಿಸ್‌ ಮಾಡಿಸಬೇಕು. ಆದ್ರೆ ಕೆಲಸ ಕಳೆದುಕೊಂಡಿದ್ರಿಂದ ಹಣ ಇಲ್ಲದಾಗಿದೆ. ದುಡ್ಡಿಲ್ಲದಿದ್ರೆ ಡಯಾಲಿಸಿಸ್‌ ಇಲ್ಲ ಎನ್ನುತ್ತಿದ್ದಾರೆ ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಯವರು. 5 ವರ್ಷಗಳಿಂದ ಇಲ್ಲೇ ಡಯಾಲಿಸಿಸ್ ಮಾಡಿಸಿಕೊಂಡಿದ್ದಾರೆ. ಆದ್ರೀಗ, ಹಣ ಇಲ್ಲ ಎಂದು ಡಯಾಲಿಸಿಸ್‌ಗೆ ನಿರಾಕರಣೆ ಮಾಡಿದ್ದಾರೆ.

ಇನ್ನು, ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೆ ತಾಂತ್ರಿಕ ದೋಷದ ನೆಪ ಹೇಳಿ ಸರ್ಕಾರಿ ಸಿಬ್ಬಂದಿ ಸಾಗಹಾಕಿದ್ದಾರೆ. ಈಗ, ಡಯಾಲಿಸಿಸ್‌ ಮಾಡಿಸದೆ ನಮ್ಮ ತಾಯಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ವರ್ಷದ ಹಿಂದೆ ತಂದೆಯನ್ನೂ ಕಳೆದುಕೊಂಡಿರುವೆ ಎಂದು ದೀಪಿಕಾ ಕಣ್ಣೀರುಹಾಕಿದ್ದಾರೆ.

Published On - 4:41 pm, Tue, 26 May 20