ಹಾಸನ: ಮದುವೆ ನಿಶ್ಚಯವಾಗಿದ್ದ ಯುವತಿಗೆ ಬಲವಂತವಾಗಿ ತಾಳಿ ಕಟ್ಟಿದ್ದ ಪಾಗಲ್​ ಪ್ರೇಮಿಯ ಬಂಧನ

ಜನವರಿ 21 ರಂದು ಸ್ನೇಹಿತರ ಜೊತೆ ಯುವತಿ ಮನೆಗೆ ನುಗ್ಗಿ ಅರೆಕೆರೆಯ ಸತೀಶ್ ಎಂಬಾತ ತಾಳಿಕಟ್ಟಿದ್ದರು.

ಹಾಸನ: ಮದುವೆ ನಿಶ್ಚಯವಾಗಿದ್ದ ಯುವತಿಗೆ ಬಲವಂತವಾಗಿ ತಾಳಿ ಕಟ್ಟಿದ್ದ ಪಾಗಲ್​ ಪ್ರೇಮಿಯ ಬಂಧನ
ಬಲವಂತದ ಮದುವೆ
Edited By:

Updated on: Jan 27, 2021 | 12:23 PM

ಹಾಸನ: ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯವಾಗಿದ್ದ ಯುವತಿಗೆ ಬಲವಂತವಾಗಿ ತಾಳಿ ಕಟ್ಟಿದ್ದ ಯುವಕನನ್ನು ಸಕಲೇಶಪುರ ಟೌನ್ ಪೊಲೀಸರು ಬಂಧಿಸಿದ್ದಾರೆ.

ಜನವರಿ 21 ರಂದು ಸ್ನೇಹಿತರ ಜೊತೆ ಯುವತಿ ಮನೆಗೆ ನುಗ್ಗಿ ಅರೆಕೆರೆಯ ಸತೀಶ್ ಎಂಬಾತ ತಾಳಿ ಕಟ್ಟಿದ್ದರು. ಮರುದಿನ ಯುವತಿ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಯುವತಿ ಹೇಳಿಕೆ ಆಧರಿಸಿ ನಿನ್ನೆಯೇ ಸತೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಜನವರಿ 25 ರಂದು ಸುಜಿತ್ ಕೃಷ್ಣ ಎಂಬುವವರ ಜೊತೆ ಯುವತಿಗೆ ಮದುವೆ ನಿಗದಿಯಾಗಿತ್ತು. ಆದರೆ ತಾನು ಆಕೆಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿ ಸತೀಶ್ ಬಲವಂತವಾಗಿ ತಾಳಿ ಕಟ್ಟಿದ್ದರು.

ಹಾಸನ: ಮದುವೆ ನಿಶ್ಚಯವಾಗಿದ್ದ ಯುವತಿಗೆ ಬಲವಂತವಾಗಿ ತಾಳಿ ಕಟ್ಟಿ ಎಳೆದೊಯ್ದ ಮಾಜಿ ಪ್ರೇಮಿ..!