
ಹಾಸನ: ದನ ಮೇಯಿಸುತ್ತಿದ್ದ ಮಹಿಳೆ ತಲೆಗೆ ಹೊಡೆದು ಸರಗಳ್ಳತನ ಮಾಡಿರುವ ಘಟನೆ ಹಾಸನ ತಾಲೂಕಿನ ಶಂಕದಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗಂಭೀರ ಗಾಯಗೊಂಡಿರುವ ಶಾರದಮ್ಮಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೊದಲು ಮಾಂಗಲ್ಯ ಸರ ಕೀಳಲು ಆರೋಪಿ ಚಿಕ್ಕಕೊಂಡಕೊಳ್ಳ ಗ್ರಾಮದ ಚಂದನ್ ಯತ್ನಿಸಿದ್ದಾನೆ. ಇದಕ್ಕೆ ಶಾರದಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಶಾರದಮ್ಮಗೆ ಮರದ ತುಂಡಿನಿಂದ ಹಲ್ಲೆ ಮಾಡಿ ಸರ ಕಸಿದು ಆರೋಪಿ ಎಸ್ಕೇಪ್ ಆಗಿದ್ದಾನೆ. ಪರಾರಿಯಾಗುವ ಭರದಲ್ಲಿ ಬೈಕನ್ನು ಅಲ್ಲಿಯೇ ಬಿಟ್ಟಿದ್ದಾನೆ.
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಆರೋಪಿ ಚಂದನ್ನನ್ನು ಹಾಸನದ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
Published On - 7:20 pm, Wed, 1 July 20