ದಕ್ಷಿಣ ಕನ್ನಡ: ಕುಡಿದ ಅಮಲಿನಲ್ಲಿ ಯುವಕರ ಗುಂಪೊಂದು ಮನೆಗೆ ನುಗ್ಗಿ ಗಲಾಟೆ ಮಾಡಿರುವ ಘಟನೆ ಮಂಗಳೂರು ಬಳಿಯ ಪಚ್ಚನಾಡಿಯಲ್ಲಿ ತಡರಾತ್ರಿ ನಡೆದಿದೆ.
ಮದ್ಯದ ಅಮಲಿನಲ್ಲಿ ತಲ್ವಾರ್ ಹಿಡಿದು ಫ್ರಾನ್ಸಿಸ್ ಎಂಬುವವರ ಮನೆಗೆ ನುಗ್ಗಿ ಯುವಕರು ಗಲಾಟೆ ಮಾಡಿದ್ದಾರೆ. ನಿತಿನ್ ಎಂಬಾತನ ನೇತೃತ್ವದ ಗ್ಯಾಂಗ್ ಮನೆಗೆ ನುಗ್ಗಿ ಗಲಾಟೆ ಮಾಡಿದೆ. ಪುಂಡರ ಗಲಾಟೆಯ ದೃಶ್ಯ ಮೊಬೈಲ್ ಫೋನ್ನಲ್ಲಿ ಸೆರೆಯಾಗಿದೆ.
ಯುವಕರು ಕುಡಿದ ಮತ್ತಿನಲ್ಲಿ ಅನೇಕ ಮನೆಗಳಿಗೆ ನುಗ್ಗಿ ಗಲಾಟೆ ಮಾಡಿದ್ದು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.