ತುಮಕೂರು: ಮಳೆಯಿಂದ ಹಾನಿಯಾದ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕೆಸರುಮಯವಾದ ರಸ್ತೆಯಲ್ಲಿ ಭತ್ತ ನಾಟಿ ಮಾಡಿ ಯುವಕರು ವಿನೂತನ ಪ್ರತಿಭಟನೆ ಮಾಡಿರುವಂತಹ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ದೊಮ್ಮತಮರಿ ವೃತ್ತದಲ್ಲಿ ನಡೆದಿದೆ. ರಸ್ತೆ ದುರಸ್ತಿ ಮಾಡಿಸದ ಗ್ರಾ.ಪಂ. ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ. ಸತತ ಮಳೆಗೆ ರಸ್ತೆ ಹಾಳಾಗಿದ್ದು, ಸಂಪೂರ್ಣ ಕೇಸರುನಿಂದ ಗ್ರಾಮದ ರಸ್ತೆ ಕೂಡಿದೆ. ಗದ್ದೆಯಂತಾಗಿರುವ ಗ್ರಾಮದ ವೃತ್ತದಲ್ಲಿ ಭತ್ತ ನಾಟಿ ಮಾಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿದ್ದು, ದುರಸ್ತಿ ಮಾಡುವಂತೆ ಒತ್ತಾಯಿಸಿದ್ರೂ ಗ್ರಾಪಂ ಅಧಿಕಾರಿಗಳು ಕೇರ್ ಮಾಡಿಲ್ಲ. ವಾಹನ ಸವಾರರು, ವಿದ್ಯಾರ್ಥಿಗಳು, ವೃದ್ದರು, ಮಹಿಳೆಯರು ಓಡಾಡಲು ಪರದಾಡುವಂತ್ತಾಗಿದೆ. ಹೀಗಾಗಿ ಗ್ರಾಮದ ಯುವಕರಿಂದ ಭತ್ತ ನಾಟಿ ಮಾಡಿ ವಿನೂತನ ಪ್ರತಿಭಟನೆ ಮಾಡಲಾಗಿದೆ.
ಮಳೆಯಿಂದ ಕುಸಿದು ಬಿದ್ದ ಸರ್ಕಾರಿ ಶಾಲೆ ಕಾಂಪೌಂಡ್
ಕೋಲಾರ: ಭಾರಿ ಮಳೆಯಿಂದಾಗಿ ಕೆಜಿಎಫ್ ತಾಲೂಕಿನ ಬಡಮಾಕನಹಳ್ಳಿಯಲ್ಲಿ ಪ್ರೌಢ ಶಾಲೆಯ ಕಾಂಪೌಂಡ್ ಕುಸಿದಿರುವಂತಹ ಘಟನೆ ಸಂಭವಿಸಿದೆ. ಒಂದು ತಿಂಗಳ ಹಿಂದಷ್ಟೇ, ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಕಾಂಪೌಂಡ್ ಕುಸಿತವಾಗಿದ್ದು, ಕಳಪೆ ಕಾಮಗಾರಿ ಎಂದು ಡಿಸಿಗೆ ಸ್ಥಳೀಯರಿಂದ ದೂರು ನೀಡಲಾಗಿದೆ.
ಆಣೆಕಟ್ಟೆ ಸುರಕ್ಷಾ ಸಮಿತಿ ಭೇಟಿ, ಪರಿಶೀಲನೆ
ಚಿತ್ರದುರ್ಗ: 88 ವರ್ಷದ ಬಳಿಕ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಡ್ಯಾಂ ಭರ್ತಿಯಾದ ಹಿನ್ನೆಲೆ ಡ್ಯಾಂಗೆ ಭೇಟಿ ನೀಡಿದ ಆಣೆಕಟ್ಟು ಸುರಕ್ಷಾ ಸಮಿತಿ ಪರಿಶೀಲನೆ ನಡೆಸಿದರು. ಎಸ್.ಬಿ.ಕೊಯಮತ್ತೂರು ನೇತೃತ್ವದ ಸಮಿತಿಯಿಂದ ಪರಿಶೀಲನೆ ಮಾಡಿದ್ದು, ವಾಣಿವಿಲಾಸ ಸಾಗರ ಜಲಾಶಯ ಸುರಕ್ಷಿತವಾಗಿದೆ ಎಂದು ಸಮಿತಿ ಹೇಳಿದೆ.
ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ಏಕಾಂಗಿ ಪ್ರತಿಭಟನೆ
ಕೋಲಾರ: ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ರಸ್ತೆ ಮದ್ಯೆ ಕುಳಿತು ಏಕಾಂಗಿ ಪ್ರತಿಭಟನೆ ಮಾಡಿರುವಂತಹ ಘಟನೆ ಗಾಂಧಿನಗರ ಬಳಿ ನಡೆದಿದೆ. ನಿವೃತ್ತ ಸರ್ಕಾರಿ ನೌಕರ ನಾಗರಾಜ್ ಎಂಬುವರಿಂದ ಪ್ರತಿಭಟನೆ ಮಾಡಿದ್ದು, ಗಾಂಧಿನಗರ ಬಳಿ ಹಾಳಾಗಿರುವ ರಸ್ತೆಯನ್ನು ಸರಿಪಡಿಸುವಂತೆ ಆಗ್ರಹಿಸಲಾಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು ವಾಹನ ಸವಾರರು ಪರದಾಡುವಂತಾಗಿದೆ. ನಿರಂತರ ಮಳೆಯಿಂದ ರಸ್ತೆಯಲ್ಲಿ ದೊಡ್ಡ ಹೊಂಡಗಳು ನಿರ್ಮಾಣವಾಗಿವೆ. ಕೂಡಲೇ ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ರಸ್ತೆ ಮದ್ಯೆ ಕುಳಿತು ಪ್ರತಿಭಟನೆ ಮಾಡಲಾಗಿದೆ.
ಸುಮಾರು ಅರ್ಧ ಕಿಲೋಮೀಟರ್ ನಷ್ಟು ಕೊಚ್ಚಿ ಹೋದ ರಸ್ತೆ
ಗದಗ: ಮಳೆ ಮಾಡಿದ ಅವಾಂತರಕ್ಕೆ ಜನರು ತತ್ತರವಾಗಿದ್ದು, ಮಳೆ ನಿಂತರು ರೈತರ ಗೋಳಾಟ ನಿಂತ್ತಿಲ್ಲ. ಗದಗ ತಾಲೂಕಿನ ಹೊಂಬಳ ಗ್ರಾಮದ ಬಳಿ ಮಳೆ ಆರ್ಭಟಕ್ಕೆ ರಸ್ತೆ ಛಿದ್ರ ಛಿದ್ರವಾಗಿರುವಂತಹ ಘಟನೆ ನಡೆದಿದೆ. ಸವಳ ಹಳ್ಳ ಉಕ್ಕಿ ಹರಿದು ಸುಮಾರು 50 ಅಡಿ ಉದ್ದ, 10 ಕ್ಕೂ ಹೆಚ್ಚು ಅಡಿ ಆಳ ರಸ್ತೆ ಕೊಚ್ಚಿ ಹೋಗಿದೆ. ಸುಮಾರು ಅರ್ಧ ಕಿಲೋಮೀಟರ್ನಷ್ಟು ರಸ್ತೆ ಹಾನಿಯಾಗಿದ್ದು, ಹೊಂಬಳ-ಚಿಕ್ಕಹಂದಿಗೋಳ ಗ್ರಾಮದ ಸಂಪರ್ಕ ಕಡಿತವಾಗಿದೆ. ನೂರಾರು ಜನರು ಜಮೀನುಗಳಿಗೆ ಹೋಗುವ ಸಂಪರ್ಕ ಕಟ್ ಆಗಿದ್ದು, ರಸ್ತೆ ಕೊಚ್ಚಿ ಹೋಗಿ ರೈತರ ಜಮೀನು ಸರ್ವನಾಶವಾಗಿದೆ. ಶೀಘ್ರ ರಸ್ತೆ ಸರಿಮಾಡಿ, ಜಮೀನುಗಳಿಗೆ ಹೋಗಲು ಅನುಕೂಲ ಮಾಡುವಂತೆ ಒತ್ತಾಯ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:13 am, Fri, 9 September 22