Yoga Benefits: ಆ್ಯಸಿಡಿಟಿಯನ್ನು ದೂರ ಮಾಡಲು ನಿತ್ಯ ಈ 5 ಯೋಗಾಸನಗಳನ್ನು ತಪ್ಪದೇ ಮಾಡಿ

| Updated By: ನಯನಾ ರಾಜೀವ್

Updated on: Jul 27, 2022 | 12:58 PM

ನಮ್ಮ ಆಹಾರ ಕ್ರಮವು ಉದರಕ್ಕೆ ಸಂಬಂಧಿಸಿದ ಕಾಯಿಲೆಯನ್ನು ಹುಟ್ಟುಹಾಕುತ್ತದೆ. ನೀವು ತಿನ್ನುವ ಆಹಾರವು ಸುಲಭವಾಗಿ ಜೀರ್ಣವಾಗದಿದ್ದರೆ ಕೂಡ ಆ್ಯಸಿಡಿಟಿ ರೀತಿಯ ಹಲವು ಆರೋಗ್ಯ ಸಮಸ್ಯೆಗಳು ಶುರುವಾಗುತ್ತದೆ.

Yoga Benefits: ಆ್ಯಸಿಡಿಟಿಯನ್ನು ದೂರ ಮಾಡಲು ನಿತ್ಯ ಈ 5 ಯೋಗಾಸನಗಳನ್ನು ತಪ್ಪದೇ ಮಾಡಿ
Yoga
Follow us on

ನಮ್ಮ ಆಹಾರ ಕ್ರಮವು ಉದರಕ್ಕೆ ಸಂಬಂಧಿಸಿದ ಕಾಯಿಲೆಯನ್ನು ಹುಟ್ಟುಹಾಕುತ್ತದೆ. ನೀವು ತಿನ್ನುವ ಆಹಾರವು ಸುಲಭವಾಗಿ ಜೀರ್ಣವಾಗದಿದ್ದರೆ ಕೂಡ ಆ್ಯಸಿಡಿಟಿ ರೀತಿಯ ಹಲವು ಆರೋಗ್ಯ ಸಮಸ್ಯೆಗಳು ಶುರುವಾಗುತ್ತದೆ.

ವಜ್ರಾಸನ: ವಜ್ರಾಸನವು ಆಹಾರದ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸಿ ಸುಲಭವಾಗಿ ಜೀರ್ಣವಾಗಲು ಸಹಕಾರಿ, ವಜ್ರಾಸನ ಮಾಡುವಾಗ ಕಾಲನ್ನು ಮಡಚಿ ನಮಸ್ಕರಿಸುವ ಭಂಗಿಯಲ್ಲಿ ಕುಳಿತುಕೊಳ್ಳಿ.

ಹಲಾಸನ: ಈ ಆಸನವು ಕೂಡ ಆ್ಯಸಿಡಿಟಿಯನ್ನು ದೂರ ಮಾಡಲು ಸಹಕಾರಿ, ಹಾಗೆಯೇ ಮನಸ್ಸನ್ನು ಶಾಂತವಾಗಿಸಲು ಸಹಾಯ ಮಾಡುತ್ತದೆ. ಹಲಾಸನ ಅಭ್ಯಾಸ ಆರಂಭದ ಅತ್ಯುತ್ತಮ ವಿಧಾನವೆಂದರೆ, ಅರ್ಧ ಹಲಾಸನ ಭಂಗಿಯಿಂದ ಆರಂಭ. ಆದರೆ ನೀವು ನಿಮ್ಮ ಕೈಗಳ ಮೇಲೆ ಯಾವುದೇ ಒತ್ತಡ ಹಾಕಬೇಕಿಲ್ಲ. ನೀವು ನಿಮ್ಮ ಅಂಗೈಗಳನ್ನು ನೆಲಕ್ಕೆ ಊರುವ ವೇಳೆಯೂ ನಿಧಾನಕ್ಕೆ ಉಸಿರುಬಿಡಿ. ಏಕಕಾಲಕ್ಕೆ ನಿಮ್ಮ ಬೆನ್ನು, ಸೊಂಟ ಮತ್ತು ನಿತಂಬವನ್ನು ನೆಲದಿಂದ ಮೇಲಕ್ಕೆತ್ತಿ.

ಅದೇ ವೇಳೆ ನಿಧಾನಕ್ಕೆ, ಆದರೆ ಒಂದೇ ನಡೆಯಲ್ಲಿ ನಿಮ್ಮ ಕಾಲುಗಳನ್ನು ಮೊಣಕಾಲುಗಳನ್ನು ಬಗ್ಗಿಸದೆ ನಿಮ್ಮ ತಲೆಯ ಮೇಲಕ್ಕೆ ತನ್ನಿ. ನೇರವಾದ, ಭಾಗದ ನಿಮ್ಮ ಕಾಲುಗಳನ್ನು ತಲೆಯಿಂದ ಆಚೆಗೆ ಕಾಲ್ಬೆರಳುಗಳು ನೆಲಕ್ಕೆ ಮುಟ್ಟುವಂತೆ ಭಾಗಿಸಿ.

ಕಾಲಿನ ಬೆರಳುಗಳು ನಿಮ್ಮ ತಲೆಯಿಂದ ಆಚೆಗೆ ಹತ್ತಿರದ ಬಿಂದುವಿಗೆ ತಾಕುತ್ತಿರಬೇಕು. ಉಸಿರನ್ನು ಒಳಗೆಳೆದುಕೊಂಡು ಸಹಜವಾಗಿ ಉಸಿರಾಡಿ. ನಿಧಾನಕ್ಕೆ ಕಾಲ್ಬೆಳುಗಳನ್ನು ಒಟ್ಟಿಗೆ ನೆಲದ ಮೇಲೆ ಇನ್ನು ಜಾರಿಸಿ.

ಸಾಧ್ಯವಾದಷ್ಟು ಬೆನ್ನನ್ನು ಸುರುಳಿ ಮಾಡಿ. ನಿಮ್ಮ ಗಲ್ಲವನ್ನು ಎದೆಗೆ ಒತ್ತಿ. ಈಗ ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ಮತ್ತು ಅವುಗಳನ್ನು ನಿಧಾನವಾಗಿ ನಿಮ್ಮ ತಲೆಗಳ ಎರಡೂ ಪಕ್ಕದಲ್ಲಿ ಇರಿಸಿ.

ನಿಮ್ಮ ಕೈಬೆರಳುಗಳನ್ನು ಪರಸ್ಪರ ಬಂಧಿಸಿ ನಿಮ್ಮ ತಲೆಯು ಅದರಿಂದ ಆವೃತವಾಗುವಂತೆ ಇರಿಸಿ. ಇಷ್ಟೂ ಹೊತ್ತು ನಿಮ್ಮ ಕಾಲುಗಳು ಜೋಡಿಸಿದಂತೆ ನೆಟ್ಟಗಿರಬೇಕು.

ಸಹಜವಾಗಿ ಉಸಿರಾಡುತ್ತಿರಿ. ಆರಂಭದ ಹಂತದಲ್ಲಿ ಕನಿಷ್ಠ ಎರಡು ನಿಮಿಷಗಳ ಕಾಲ ಅಥವಾ ನಿಮಗೆ ಆಹಿತವೆನಿಸುವ ತನಕ ಈ ಭಂಗಿಯಲ್ಲಿರಿ.

ಪಶ್ಚಿಮೋತ್ತಾಸನ: ಮಾಡುವ ಕ್ರಮ
-ಮೊದಲು ನೆಲದ ಮೇಲೆ ಕುಳಿತು ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಬೇಕು.
-ಬಳಿಕ ಎರಡೂ ಕೈಗಳನ್ನು ಮೇಲಕ್ಕೆತ್ತಿ ದೀರ್ಘವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳಬೇಕು.
-ಉಸಿರನ್ನು ನಿಧಾನವಾಗಿ ಹೊರಕ್ಕೆ ಬಿಡುತ್ತಾ ಸಾಧ್ಯವಾದಷ್ಟೂ ಮಟ್ಟಿಗೆ ಮುಂದಕ್ಕೆ ಬಗ್ಗುವಾಗ ಮಂಡಿಯು ಮೇಲಕ್ಕೆ ಎಳೆದಿರುವ ಕಡೆ ಗಮನಿಸುವುದು ಅಗತ್ಯ.

– ಮುಂದಕ್ಕೆ ಬಗ್ಗುವಾಗ ಕಾಲುಗಳನ್ನು ಕೈಗಳಿಂದ ಭದ್ರವಾಗಿ ಹಿಡಿದುಕೊಂಡು, ಮೊಣಕೈಗಳನ್ನು ನೆಲಕ್ಕೆ ಮುಟ್ಟಿಸುತ್ತಾ ಹಣೆಯನ್ನು ಅಥವಾ ಎದೆಯನ್ನು ಮಂಡಿಗೆ ಮುಟ್ಟಿಸುವಾಗಲೂ ಬೆನ್ನು ಗೂನಾಗದಿರುವತ್ತ ಗಮನ ನೀಡುವುದು ಉತ್ತಮ. ಪಶ್ಚಿಮೋತ್ತಾನಾಸನವನ್ನು ಮೂರರಿಂದ ಐದು ನಿಮಿಷಗಳವರೆಗೆ ಮಾಡಬೇಕು.
ಲಾಭಗಳು: ಪಶ್ಚಿಮೋತ್ತಾನಾಸನದ ಅಭ್ಯಾಸದಿಂದ ಜೀರ್ಣಶಕ್ತಿ ಹೆಚ್ಚುವುದು, ಮಲಬದ್ಧತೆ ನಿವಾರಣೆಯಾಗುವುದು, ಬೊಜ್ಜು ಕರಗುವುದು. ಹೊಟ್ಟೆ ಹಾಗೂ ಸೊಂಟದ ಎಲ್ಲ ಅವಯವಗಳೂ ಸುದೃಢವಾಗುವವು.

ಪವನಮುಕ್ತಾಸನ: ಪವನಮುಕ್ತಾಸನವು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೆಯೇ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೂಡ ಒಳ್ಳೆಯದು.
ಮ್ಯಾಟ್​ ಮೇಲೆ ಕುಳಿತುಕೊಂಡು ಎರಡೂ ಕಾಲುಗಳನ್ನು ಮುಂದೆ ಚಾಚಿ ನಿಮ್ಮ ಕೈಗಳನ್ನು ಕಾಲುಬೆರಳು ಹಿಡಿಯುವಂತೆ ತೆಗೆದುಕೊಂಡು ಹೋಗಿ.

ಉಷ್ಟ್ರಾಸನ:
-ಮೊದಲು ನೇರವಾಗಿ ನಿಲ್ಲಬೇಕು.
-ಬಳಿಕ ಮೊಣಕಾಲೂರಿ ಕುಳಿತುಕೊಳ್ಳಬೇಕು.
-ಉಸಿರನ್ನು ಹೊರಕ್ಕೆ ದೂಡುತ್ತಾ ನಿಧಾನವಾಗಿ ಹಿಂದಕ್ಕೆ ( ಸೊಂಟದ ಮೇಲಿನ ಶರೀರವನ್ನು) ಭಾಗಬೇಕು. ಈ ಸ್ಥಿತಿಯಲ್ಲಿ ಕತ್ತನ್ನು ಸಹ ಆದಷ್ಟು ಹಿಂದಕ್ಕೆ ಬಗ್ಗಿಸಬೇಕು.
-ಸಾಧ್ಯವಾದಷ್ಟು ಬೆನ್ನನ್ನು ಹಿಂದಕ್ಕೆ ಬಗ್ಗಿಸಿ ಚಿತ್ರದಲ್ಲಿ ತೋರಿಸುವಂತೆ ಕೈಗಳಿಂದ ಭೂಮಿಯನ್ನು ಸ್ವರ್ಶಿಸಬೇಕು.
-ಈ ಸ್ಥಿತಿಯಲ್ಲಿ ಬೆನ್ನು ಬಿಲ್ಲಿನಂತೆ ಬಗ್ಗಿರುತ್ತದೆ. ಇದೇ ಸ್ಥಿತಿಯಲ್ಲಿ ಆರೆಂಟು ಬಾರಿ ದೀರ್ಘವಾಗಿ ಉಸಿರಾಡಿ ಅನಂತರ ಯಥಾಸ್ಥಿತಿಗೆ ಬರಬೇಕು. ಹಿಂದಕ್ಕೆ ಬಾಗುವಾಗ ಹೆಚ್ಚಿನ ಜಾಗರೂಕತೆಯನ್ನು ವಹಿಸುವುದು ಉತ್ತಮ.

ಲಾಭಗಳು: ಉಷ್ಟ್ರಾಸನದ ಅಭ್ಯಾಸದಿಂದ ತೊಡೆ, ಸೊಂಟ, ಹೊಟ್ಟೆ, ಕುತ್ತಿಗೆ ಹೆಚ್ಚು ಸದೃಢವಾಗುವವು. ಹರ್ನಿಯ, ಆಪೆಂಡಿಸೈಟಸ್ ನಿಂದ ನರಳುವವರಿಗೆ ಉಷ್ಟ್ರಾಸನವು ಉಪಕಾರಿ ಮತ್ತು ಗೂನುಬೆನ್ನು ಸಹ ಇದರಿಂದ ಸ್ವಲ್ಪಮಟ್ಟಿಗೆ ನಿವಾರಣೆಯಾಗುವುದು.