ನಿಮ್ಮ ಆರೋಗ್ಯದಲ್ಲಿ ಒಂದಿಷ್ಟು ನಿರ್ಲಕ್ಷ್ಯ ತೋರಿದರೂ ಅದು ಯಾವ ರೀತಿ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇಲ್ಲಿದೆ ನಿದರ್ಶನ. ಇತನ ಹೆಸರು ಮೈಕ್ ಕ್ರೂಮ್‌ಹೋಲ್ಜ್ (21) ಕಾಂಟ್ಯಾಕ್ಟ್ ಲೆನ್ಸ್(Contact Lenses) ಬಳಸುತ್ತಿದ್ದ, ಆದರೆ ಆ ದಿನ ರಾತ್ರಿ ಕಾಂಟ್ಯಾಕ್ಟ್ ಲೆನ್ಸ್ ತೆಗೆಯದೇ ಹಾಗೆಯೇ ಮಲಗಿದ್ದಾನೆ. ಇದರ ಪರಿಣಾಮ ಬೆಳಗ್ಗಿನ ಜಾವ ಕಣ್ಣಿನಲ್ಲಿ ತೀವ್ರ ಅಲರ್ಜಿಯ ಲಕ್ಷಣಗಳು ಕಂಡುಬಂದಿದೆ. ನಂತರ ವೈದ್ಯರನ್ನು ಸಂಪರ್ಕಿಸಿದ್ದಾನೆ. ಆದರೆ ಅಂತಿಮವಾಗಿ ಒಟ್ಟು ಐದು ವಿಭಿನ್ನ ನೇತ್ರಶಾಸ್ತ್ರಜ್ಞರು ಮತ್ತು ಇಬ್ಬರು ಕಾರ್ನಿಯಾ ತಜ್ಞರನ್ನು ಭೇಟಿ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಒಂದು ಕಣ್ಣಿನ ದೃಷ್ಟಿಯನ್ನು ಕಳೆದು ಕೊಂಡಿದ್ದಾನೆ.
‘ನನಗೆ ಇದು ತುಂಬಾ ಅಘಾತವನ್ನುಂಟು ಮಾಡಿದೆ. ಈ ಕಷ್ಟದ ಸಮಯದಿಂದ ಹೊರಬರಲು ಪ್ರಯತ್ನಿಸುತ್ತಿದ್ದೇನೆ. ಆದರೆ ನನ್ನ ಹಾಗೇ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರಿಗೆ ಅರಿವು ಮೂಡಿಸುವ ಉದ್ದೇಶವನ್ನು ನಾನು ಹೊಂದ್ದಿದೇನೆ. ನನ್ನ ಸ್ಥಿತಿ ಯಾರಿಗೂ ಬರುವುದು ಬೇಡ’ ಎಂದು ಸ್ವತಃ ಮೈಕ್ ಕ್ರೂಮ್‌ಹೋಲ್ಜ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ.
ನೇತ್ರವಿಜ್ಞಾನಿಯಾಗಿರುವ ಡಾ. ನಿರತಿ ಶ್ರೀವಾಸ್ತವ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವವರಿಗೆ ಯಾವ ರೀತಿ ಜಾಗರೂಕರಾಗಿ ಇರಬೇಕೆಂದು ಸಲಹೆ ನೀಡುತ್ತಾರೆ.
ರಾತ್ರಿಯಿಡೀ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವುದಿಂದ ದೃಷ್ಟಿಗೆ ಹಾನಿಯಾಗುತ್ತದೆ. ನಿದ್ದೆ ಮಾಡುವಾಗ ಕಾಂಟ್ಯಾಕ್ಟ್ ಲೆನ್ಸ್ ಧರಿಸಿದರೆ ಇದು ಕಣ್ಣುಗಳನ್ನು ತಲುಪುವ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಕಾಂಟ್ಯಾಕ್ಟ್ ಲೆನ್ಸ್ ನಿದ್ರಾವಸ್ಥೆಯಲ್ಲಿ ಬ್ಯಾಕ್ಟೀರಿಯಾ ಅಥವಾ ಸೂಕ್ಷ್ಮಜೀವಿಯ ಆಕ್ರಮಣವನ್ನು ತಡೆಯಲು ಅಗತ್ಯವಾದ ಆಮ್ಲಜನಕ ಮತ್ತು ತೇವಾಂಶವನ್ನು ಸ್ವೀಕರಿಸದಂತೆ ನಿಮ್ಮ ಕಣ್ಣುಗಳನ್ನು ತಡೆಯುತ್ತದೆ ಎಂದು ಡಾ ಶ್ರೀವಾಸ್ತವ ಎಚ್ಚರಿಕೆ ನೀಡುತ್ತಾರೆ.
ಇದನ್ನೂ ಓದಿ: ಕಣ್ಣೀರಿನಿಂದ ಕ್ಯಾನ್ಸರ್ ಪತ್ತೆ ಮಾಡುವ ಕಾಂಟ್ಯಾಕ್ಟ್ ಲೆನ್ಸ್ , ಹೇಗೆ ಕೆಲಸ ಮಾಡುತ್ತೆ?
ಹೈದರಾಬಾದ್ನ ನೇತ್ರತಜ್ಞರಾದ ಡಾ ದೀಪ್ತಿ ಮೆಹ್ತಾ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸಿದರೆ ನೀವು ಅನುಸರಿಸಬೇಕಾದ ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ:
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 1:02 pm, Wed, 22 February 23