AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣೀರಿನಿಂದ ಕ್ಯಾನ್ಸರ್ ಪತ್ತೆ ಮಾಡುವ ಕಾಂಟ್ಯಾಕ್ಟ್​ ಲೆನ್ಸ್ , ಹೇಗೆ ಕೆಲಸ ಮಾಡುತ್ತೆ?

ಕ್ಯಾನ್ಸರ್ ಎಂಬುದು ಮಾರಣಾಂತಿಕ ಕಾಯಿಲೆಯಾಗಿದ್ದು, ಆರಂಭದಲ್ಲೇ ಪತ್ತೆ ಹಚ್ಚಿಸದರೆ ಸ್ವಲ್ಪ ಮಟ್ಟಿಗೆ ಗುಣಪಡಿಸಬಹುದು ಆದರೆ ಕಾಲ ಮೀರಿದರೆ ರೋಗಿ ಬದುಕುಳಿಯುವುದು ಕಷ್ಟ.

ಕಣ್ಣೀರಿನಿಂದ ಕ್ಯಾನ್ಸರ್ ಪತ್ತೆ ಮಾಡುವ ಕಾಂಟ್ಯಾಕ್ಟ್​ ಲೆನ್ಸ್ , ಹೇಗೆ ಕೆಲಸ ಮಾಡುತ್ತೆ?
Cancer
TV9 Web
| Updated By: ನಯನಾ ರಾಜೀವ್|

Updated on: Aug 20, 2022 | 8:30 AM

Share

ಕ್ಯಾನ್ಸರ್ ಎಂಬುದು ಮಾರಣಾಂತಿಕ ಕಾಯಿಲೆಯಾಗಿದ್ದು, ಆರಂಭದಲ್ಲೇ ಪತ್ತೆ ಹಚ್ಚಿಸದರೆ ಸ್ವಲ್ಪ ಮಟ್ಟಿಗೆ ಗುಣಪಡಿಸಬಹುದು ಆದರೆ ಕಾಲ ಮೀರಿದರೆ ರೋಗಿ ಬದುಕುಳಿಯುವುದು ಕಷ್ಟ. ಅಮೆರಿಕದ ವಿಜ್ಞಾನಿಗಳು ಹೊಸ ಆವಿಷ್ಕಾರ ಮಾಡಿದ್ದು, ಕಣ್ಣೀರಿನಿಂದ ಕ್ಯಾನ್ಸರ್ ಪತ್ತೆ ಹಚ್ಚುವ ಲೆನ್ಸ್​ ಅನ್ನು ಕಂಡು ಹಿಡಿದಿದ್ದಾರೆ.

ಕ್ಯಾಲಿಫೋರ್ನಿಯಾದ ಟೆರಾಸಾಕಿ ಇನ್​ಸ್ಟಿಟ್ಯೂಟ್ ಫಾರ್ ಬಯೋಮೆಡಿಕಲ್ ಇನ್ನೋವೇಷನ್ ತಂಡವು ಅಭಿವೃದ್ಧಿಪಡಿಸಿದ ನೋವರಲ್ ಲೆನ್ಸ್ ಎಕ್ಸೋಸೋಮ್​ಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ.

ಕಣ್ಣೀರಿನಲ್ಲಿ ಬಿಡುಗಡೆಗೊಳ್ಳುವ ಅತಿಸೂಕ್ಷ್ಮ ಎಕ್ಸೋಸೋಮ್​ಗಳನ್ನು ಹಿಡಿದಿಡುವಂಥ ಅತ್ಯಂತ ಸೂಕ್ಷ್ಮ ಕಣಗಳನ್ನು ಈ ಮಸೂರಗಳು ಹೊಂದಿವೆ. ಇದರಿಂದಾಗಿ ಸುಲಭ ಹಾಗೂ ಕ್ಷಿಪ್ರವಾಗಿ ಕ್ಯಾನ್ಸರ್ ಕಾಯಿಲೆಗಳನ್ನು ಪ್ರಾರಂಭದ ಹಂತದಲ್ಲಿಯೇ ಪತ್ತೆಹಚ್ಚಬಹುದು .

ಶರೀರವು ತನಗೆ ಬೇಡದ ವಸ್ತುಗಳನ್ನು ಕೋಶಗಳ ಮೂಲಕ ಹೊರ ಹಾಕುವ ಎಲ್ಲಾ ವಸ್ತುಗಳಲ್ಲೂ ಎಕ್ಸೋಸೋಮ್​ಗಳು ಧಾರಾಳವಾಗಿವೆ. ಆಯಾ ದೇಹದ ಜೈವಿಕ ಗುರುತುಗಳಿಂದ ಸಮೃದ್ಧವಾಗಿರುವ ಈ ಎಕ್ಸೋಸೋಮ್​ಗಳು ದೇಹಕ್ಕೆ ಮುಂದಾಗಬಹುದಾದ ವಿಷಯಗಳ ಮುನ್ಸೂಚನೆ ನೀಡಬಲ್ಲದು.

ಎಕ್ಸೋಸೋಮ್​ಗಳು ಹೆಚ್ಚಿನ ಜೀವಕೋಶಗಳಲ್ಲಿ ರೂಪುಗೊಳ್ಳುತ್ತವೆ, ಪ್ಲಾಸ್ಮಾ, ಲಾಲಾರಸ, ಮೂತ್ರ ಮತ್ತು ಕಣ್ಣೀರು ಮುಂತಾದ ಅನೇಕ ದೈಹಿಕ ದ್ರವಗಳಾಗಿ ಸ್ರವಿಸುತ್ತದೆ. ತಂಡ ಅಭಿವೃದ್ಧಿಪಡಿಸಿದ ವಿಧಾನವು ಈ ಮೂಲವನ್ನು ಸ್ಪರ್ಶಿಸುವ ನಮ್ಮ ಸಾಮರ್ಥ್ಯವನ್ನು ಹೆಚ್ಚು ಸುಗಮಗೊಳಿಸುತ್ತದೆ ಎಂದು ಸಂಶೋಧಕರ ತಂಡ ಹೇಳಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!