Airbag Jeans: ವಿಶ್ವದ ಮೊದಲ ಏರ್​​ ಬ್ಯಾಗ್​​ ಜೀನ್ಸ್, ಇದರ ಬೆಲೆ ಹಾಗೂ ವಿಶೇಷತೆ ಇಲ್ಲಿದೆ

|

Updated on: Feb 22, 2023 | 3:24 PM

ಸ್ವೀಡಿಷ್ ಕಂಪನಿ ದ್ವಿ ಚಕ್ರ ಚಾಲಕರಿಗಾಗಿ ಏರ್ ಬ್ಯಾಗ್ ಜೀನ್ಸ್ ಬಿಡುಗಡೆ ಮಾಡಿದೆ. ಇದು ಯಾವುದೇ ಅಪಘಾತದ ಸಮಯದಲ್ಲಿ ಸುರಕ್ಷತೆಯನ್ನು ನೀಡುತ್ತದೆ. ಇದು ಅಪಘಾತದ ಸಮಯದಲ್ಲಿ ರಸ್ತೆಯ ಮೇಲೆ ಬಿದ್ದಾಗ ಚಾಲಕನ ಮೊಣಕಾಲುಗಳಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ.

Airbag Jeans: ವಿಶ್ವದ ಮೊದಲ ಏರ್​​ ಬ್ಯಾಗ್​​ ಜೀನ್ಸ್, ಇದರ ಬೆಲೆ ಹಾಗೂ ವಿಶೇಷತೆ ಇಲ್ಲಿದೆ
ಏರ್​​ ಬ್ಯಾಗ್​​ ಜೀನ್ಸ್
Image Credit source: Aajtak.in
Follow us on

ಬೈಕ್ ಓಡಿಸುವಾಗ ಸುರಕ್ಷತೆಯೇ ತುಂಬಾ ಮುಖ್ಯವಾಗಿರುತ್ತದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಮಟ್ಟದ ಸುರಕ್ಷತೆಯನ್ನು ಇಟ್ಟುಕೊಳ್ಳುವುದು ಅಗತ್ಯವಾಗಿದೆ. ಕಾರುಗಳು ಏರ್‌ಬ್ಯಾಗ್‌ಗಳಂತಹ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ ಆದರೆ ಬೈಕ್‌ಗಳಿಗೆ ಏರ್‌ಬ್ಯಾಗ್‌ಗಳನ್ನು ಸೌಲಭ್ಯವಿಲ್ಲ. ಈ ಎಲ್ಲಾ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸ್ವೀಡಿಷ್ ಕಂಪನಿ ದ್ವಿ ಚಕ್ರ ವಾಹನ ಸವಾರರಿಗಾಗಿ ಏರ್ ಬ್ಯಾಗ್ ಜೀನ್ಸ್ ಬಿಡುಗಡೆ ಮಾಡಿದೆ. ಸ್ವೀಡಿಶ್ ಬ್ರ್ಯಾಂಡ್ ಮೋಟರ್​​ ಸೈಕಲ್ ಒಂದು ಜೋಡಿ ಜೀನ್ಸ್ ವಿನ್ಯಾಸಗೊಳಿಸಿದ್ದು ಅದು ಏರ್‌ಬ್ಯಾಗ್ ವೈಶಿಷ್ಟ್ಯವನ್ನು ಹೊಂದಿದೆ.

ಅಪಘಾತದ ಸಂದರ್ಭದಲ್ಲಿ ದೇಹದ ಕೆಳಭಾಗಕ್ಕೆ ರಕ್ಷಣೆ ನೀಡಲು ಬೈಕ್ ಸವಾರ ಕೆಳಗೆ ಬಿದ್ದ ಕೆಲವೇ ಸೆಕೆಂಡುಗಳಲ್ಲಿ ಈ ಜೀನ್ಸ್ ಊದಿಕೊಳ್ಳುತ್ತದೆ. ಏರ್ ಬ್ಯಾಗ್ ಅಳವಡಿಸಿರುವ ಈ ಜೀನ್ಸ್ ಸಾಮಾನ್ಯ ಪ್ಯಾಂಟ್ ಗಳಂತೆಯೇ ಇದ್ದರೂ ಅದರಲ್ಲಿ ವಿಶೇಷವಾದ ಬಟ್ಟೆಯನ್ನು ಬಳಸಲಾಗಿದೆ. ಧರಿಸುವಾಗ ನಿಮಗೆ ಉತ್ತಮ ರಕ್ಷಣೆಯನ್ನು ಒದಗಿಸುವುದರ ಜೊತೆಗೆ ಆರಾಮದಾಯಕವಾಗಿದೆ. ಮೊದಲನೆಯದಾಗಿ, ಈ ಜೀನ್ಸ್‌ನಲ್ಲಿ CO2 (ಕಾರ್ಬನ್ ಡೈಆಕ್ಸೈಡ್) ಕಾರ್ಟ್ರಿಡ್ಜ್ ನೀಡಲಾಗಿದೆ. ಒಮ್ಮೆ ಬಳಸಿದ ನಂತರ ಅದನ್ನು ಮತ್ತೆ ಬದಲಾಯಿಸಬೇಕಾಗುತ್ತದೆ. ವಾಸ್ತವವಾಗಿ, ಈ ಜೀನ್ಸ್ ಧರಿಸಿದ ನಂತರ, ಅದರಲ್ಲಿ ನೀಡಲಾದ ಸ್ಟ್ರಿಪ್ ಅನ್ನು ಶಾಕರ್, ಫ್ರೇಮ್ ಅಥವಾ ಫುಟ್‌ರೆಸ್ಟ್ ಮುಂತಾದ ಬೈಕ್‌ನ ಯಾವುದೇ ಭಾಗಕ್ಕೆ ಕಟ್ಟಬೇಕು.

ಇದನ್ನೂ ಓದಿ: ತಪ್ಪಾಗಿಯೂ ದೇಹದ ಈ ಭಾಗಗಳಲ್ಲಿ ಹಚ್ಚೆ ಹಾಕಿಸಿಕೊಳ್ಳಬೇಡಿ, ನೀವು ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತೆ

ಇಟಲಿ ಮತ್ತು ಫ್ರಾನ್ಸ್‌ನಲ್ಲಿ ಕೈಯಿಂದ ವಿನ್ಯಾಸಗೊಳಿಸಿದ ಈ ಜೀನ್ಸ್‌ಗಳನ್ನು ಅತ್ಯುತ್ತಮ ನೋಟ ಮತ್ತು ಸುರಕ್ಷತೆಗಾಗಿ ರಚಿಸಲಾಗಿದೆ. ಮೊಣಕಾಲುಗಳ ಸುರಕ್ಷತೆಯನ್ನು ಸುಧಾರಿಸಲು, ಕಂಪನಿಯು ಈ ಏರ್‌ಬ್ಯಾಗ್‌ನಲ್ಲಿ ವಿಶೇಷ ಮೊಣಕಾಲು ಪ್ರೊಟೆಕ್ಟರ್‌ಗಳನ್ನು ಬಳಸಿದೆ, ಇದು ಅಪಘಾತದ ಸಮಯದಲ್ಲಿ ರಸ್ತೆಯ ಮೇಲೆ ಬಿದ್ದಾಗ ಚಾಲಕನ ಮೊಣಕಾಲುಗಳಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ. ಈ ಏರ್ ಬ್ಯಾಗ್ ಜೀನ್ಸ್ ಕಪ್ಪು ಮತ್ತು ನೀಲಿ ಎರಡು ಬಣ್ಣಗಳಲ್ಲಿ ಲಭ್ಯವಿದೆ.

ಈ ಏರ್‌ಬ್ಯಾಗ್ ಜೀನ್ಸ್‌ನ ತೂಕ ಮತ್ತು ಬೆಲೆ ಎಷ್ಟು?

ಏರ್‌ಬ್ಯಾಗ್ ಸರಿಸುಮಾರು 88 ಪೌಂಡ್‌ಗಳ (40 ಕೆಜಿ) ಬಲದ ಅಗತ್ಯವಿದೆ. ಇದರ ಬೆಲೆಯನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿದಾಗ ಸುಮಾರು 41,317 ರೂ. ಕಂಪನಿಯು ಈ ಏರ್ ಬ್ಯಾಗ್ ಜೀನ್ಸ್ ಮುಂದಿನ ತಿಂಗಳಿನಿಂದ ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:24 pm, Wed, 22 February 23