AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eye Infections: ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಸಂಗತಿ ಇಲ್ಲಿದೆ

21 ವರ್ಷದ ಮೈಕ್ ಕ್ರೂಮ್‌ಹೋಲ್ಜ್, ಆಕಸ್ಮಿಕವಾಗಿ ತನ್ನ ಕಾಂಟ್ಯಾಕ್ಟ್ ಲೆನ್ಸ್‌ ಹಾಕಿ ರಾತ್ರಿಯಿಡೀ ನಿದ್ರಿಸಿದ ನಂತರ ಒಂದು ಕಣ್ಣಿನ ದೃಷ್ಟಿ ಕಳೆದು ಕೊಂಡಿರುವ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ಸಂಭವಿಸಿದೆ.

Eye Infections: ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಸಂಗತಿ ಇಲ್ಲಿದೆ
ಮೈಕ್ ಕ್ರೂಮ್‌ಹೋಲ್ಜ್Image Credit source: The Mirror
ಅಕ್ಷತಾ ವರ್ಕಾಡಿ
|

Updated on:Feb 22, 2023 | 1:03 PM

Share

ನಿಮ್ಮ ಆರೋಗ್ಯದಲ್ಲಿ ಒಂದಿಷ್ಟು ನಿರ್ಲಕ್ಷ್ಯ ತೋರಿದರೂ ಅದು ಯಾವ ರೀತಿ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇಲ್ಲಿದೆ ನಿದರ್ಶನ. ಇತನ ಹೆಸರು ಮೈಕ್ ಕ್ರೂಮ್‌ಹೋಲ್ಜ್ (21) ಕಾಂಟ್ಯಾಕ್ಟ್ ಲೆನ್ಸ್‌(Contact Lenses) ಬಳಸುತ್ತಿದ್ದ, ಆದರೆ ಆ ದಿನ ರಾತ್ರಿ ಕಾಂಟ್ಯಾಕ್ಟ್ ಲೆನ್ಸ್‌ ತೆಗೆಯದೇ ಹಾಗೆಯೇ ಮಲಗಿದ್ದಾನೆ. ಇದರ ಪರಿಣಾಮ ಬೆಳಗ್ಗಿನ ಜಾವ ಕಣ್ಣಿನಲ್ಲಿ ತೀವ್ರ ಅಲರ್ಜಿಯ ಲಕ್ಷಣಗಳು ಕಂಡುಬಂದಿದೆ. ನಂತರ ವೈದ್ಯರನ್ನು ಸಂಪರ್ಕಿಸಿದ್ದಾನೆ. ಆದರೆ ಅಂತಿಮವಾಗಿ ಒಟ್ಟು ಐದು ವಿಭಿನ್ನ ನೇತ್ರಶಾಸ್ತ್ರಜ್ಞರು ಮತ್ತು ಇಬ್ಬರು ಕಾರ್ನಿಯಾ ತಜ್ಞರನ್ನು ಭೇಟಿ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಒಂದು ಕಣ್ಣಿನ ದೃಷ್ಟಿಯನ್ನು ಕಳೆದು ಕೊಂಡಿದ್ದಾನೆ.

‘ನನಗೆ ಇದು ತುಂಬಾ ಅಘಾತವನ್ನುಂಟು ಮಾಡಿದೆ. ಈ ಕಷ್ಟದ ಸಮಯದಿಂದ ಹೊರಬರಲು ಪ್ರಯತ್ನಿಸುತ್ತಿದ್ದೇನೆ. ಆದರೆ ನನ್ನ ಹಾಗೇ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರಿಗೆ ಅರಿವು ಮೂಡಿಸುವ ಉದ್ದೇಶವನ್ನು ನಾನು ಹೊಂದ್ದಿದೇನೆ. ನನ್ನ ಸ್ಥಿತಿ ಯಾರಿಗೂ ಬರುವುದು ಬೇಡ’ ಎಂದು ಸ್ವತಃ ಮೈಕ್ ಕ್ರೂಮ್‌ಹೋಲ್ಜ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ.

ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಷಯ ಇಲ್ಲಿದೆ:

ನೇತ್ರವಿಜ್ಞಾನಿಯಾಗಿರುವ ಡಾ. ನಿರತಿ ಶ್ರೀವಾಸ್ತವ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವವರಿಗೆ ಯಾವ ರೀತಿ ಜಾಗರೂಕರಾಗಿ ಇರಬೇಕೆಂದು ಸಲಹೆ ನೀಡುತ್ತಾರೆ.

ರಾತ್ರಿಯಿಡೀ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವುದಿಂದ ದೃಷ್ಟಿಗೆ ಹಾನಿಯಾಗುತ್ತದೆ. ನಿದ್ದೆ ಮಾಡುವಾಗ ಕಾಂಟ್ಯಾಕ್ಟ್ ಲೆನ್ಸ್ ಧರಿಸಿದರೆ ಇದು ಕಣ್ಣುಗಳನ್ನು ತಲುಪುವ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಕಾಂಟ್ಯಾಕ್ಟ್ ಲೆನ್ಸ್ ನಿದ್ರಾವಸ್ಥೆಯಲ್ಲಿ ಬ್ಯಾಕ್ಟೀರಿಯಾ ಅಥವಾ ಸೂಕ್ಷ್ಮಜೀವಿಯ ಆಕ್ರಮಣವನ್ನು ತಡೆಯಲು ಅಗತ್ಯವಾದ ಆಮ್ಲಜನಕ ಮತ್ತು ತೇವಾಂಶವನ್ನು ಸ್ವೀಕರಿಸದಂತೆ ನಿಮ್ಮ ಕಣ್ಣುಗಳನ್ನು ತಡೆಯುತ್ತದೆ ಎಂದು ಡಾ ಶ್ರೀವಾಸ್ತವ ಎಚ್ಚರಿಕೆ ನೀಡುತ್ತಾರೆ.

ಇದನ್ನೂ ಓದಿ: ಕಣ್ಣೀರಿನಿಂದ ಕ್ಯಾನ್ಸರ್ ಪತ್ತೆ ಮಾಡುವ ಕಾಂಟ್ಯಾಕ್ಟ್​ ಲೆನ್ಸ್ , ಹೇಗೆ ಕೆಲಸ ಮಾಡುತ್ತೆ?

ಹೈದರಾಬಾದ್​​ನ ನೇತ್ರತಜ್ಞರಾದ ಡಾ ದೀಪ್ತಿ ಮೆಹ್ತಾ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸಿದರೆ ನೀವು ಅನುಸರಿಸಬೇಕಾದ ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ:

  • ಬಳಕೆಯ ಮೊದಲು ಮತ್ತು ನಂತರ ನಿಮ್ಮ ಲೆನ್ಸ್‌ಗಳನ್ನು ಪ್ರತಿದಿನ ಸೋಂಕು ರಹಿತಗೊಳಿಸುವುದು ಮುಖ್ಯ.
  • ನಿಮ್ಮ ಲೆನ್ಸ್ ಕೇಸ್​​ನಲ್ಲಿ ಬೇರೆ ಯಾವುದೇ ದ್ರಾವಣಗಳು ಉಳಿಯದಂತೆ ಪ್ರತಿ ಬಾರಿ ಸ್ವಚ್ಚಗೊಳಿಸಿ ಇಡಿ.
  • ಯಾವುದೇ ಕಿರಿಕಿರಿ ಅಥವಾ ನೋವು ಅಥವಾ ಕಣ್ಣುಗಳಲ್ಲಿ ನೀರು ಬಂದ ತಕ್ಷಣ ಲೆನ್ಸ್ ಧರಿಸುವುದನ್ನು ನಿಲ್ಲಿಸಿ.
  • ನೀವು ನಿಮ್ಮ ಲೆನ್ಸ್‌ಗಳನ್ನು ಹಾಕಿಕೊಂಡು ಹೊರಗೆ ಹೋಗುವಾಗ ಯಾವಾಗಲೂ ಕಾಂಟ್ಯಾಕ್ಟ್ ಲೆನ್ಸ್ ಕೇಸ್ ಮತ್ತು ಕನ್ನಡಕವನ್ನು ತೆಗೆದುಕೊಂಡು ಹೋಗುವುದು ಅಗತ್ಯ.
  • ಕಣ್ಣುಗಳಲ್ಲಿ ಸ್ವಲ್ಪ ನೋವು ಅಥವಾ ಅಸ್ವಸ್ಥತೆ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 1:02 pm, Wed, 22 February 23

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?