ಗೊರಕೆ ನಿಲ್ಲಿಸಲು ಬಂದಿದೆ ಮೌತ್ ​​ಟ್ಯಾಪಿಂಗ್, ಪ್ರಯೋಜನ ಹಾಗೂ ಅಡ್ಡ ಪರಿಣಾಮಗಳ ಕುರಿತು ತಿಳಿದುಕೊಳ್ಳಿ

|

Updated on: Feb 14, 2023 | 2:15 PM

ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಮೌತ್ ​​ಟ್ಯಾಪಿಂಗ್ ವಿಡಿಯೋ, ಪೋಸ್ಟ್​​ಗಳು 33 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗೊಂಡಿದೆ. ಆದರೆ ಇದರ ಕುರಿತು ಆರೋಗ್ಯ ತಜ್ಞರು ಹೇಳುವುದೇನು? ಇದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಇಲ್ಲಿದೆ ಸಂಪೂರ್ಣ ವಿವರ.

ಗೊರಕೆ ನಿಲ್ಲಿಸಲು ಬಂದಿದೆ ಮೌತ್ ​​ಟ್ಯಾಪಿಂಗ್, ಪ್ರಯೋಜನ ಹಾಗೂ ಅಡ್ಡ ಪರಿಣಾಮಗಳ ಕುರಿತು ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
Image Credit source: Rise Science
Follow us on

ಮೌತ್ ​​ಟ್ಯಾಪಿಂಗ್ ಎಂಬ ಹೊಸ ಟ್ರೆಂಡ್ ವೈರಲ್ ಆಗುತ್ತಿದೆ. ಸಾಕಷ್ಟು ಜನರು ಎದುರಿಸುತ್ತಿರುವ ಸಮಸ್ಯೆ ಗೊರಕೆ. ನನ್ನ ಸಂಗಾತಿಯ ಗೊರಕೆಯಿಂದಾಗಿ ನನಗೆ ನಿದ್ದೆ ಬರುತ್ತಿಲ್ಲ ಎಂದು ವಿಚ್ಛೇದನ ನೀಡಿರುವ ಪ್ರಕರಣಗಳು ಅದೆಷ್ಟೋ ಇದೆ. ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಮೌತ್ ​​ಟ್ಯಾಪಿಂಗ್ ವಿಡಿಯೋ, ಪೋಸ್ಟ್​​ಗಳು 33 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗೊಂಡಿದೆ. ಆದರೆ ಇದರ ಕುರಿತು ಆರೋಗ್ಯ ತಜ್ಞರು ಹೇಳುವುದೇನು? ಇದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಇಲ್ಲಿದೆ ಸಂಪೂರ್ಣ ವಿವರ.

ಬಾಯಿ ಅಥವಾ ಮೂಗಿಗೆ ಗಾಳಿಯ ಹರಿವು ಅಡಚಣೆಯಾದ ಪ್ರದೇಶ ಅಥವಾ ಬಾಯಿಯಲ್ಲಿರುವ ಮೃದು ಅಂಗಾಂಶಗಳ ಮೂಲಕ ನಿರ್ಬಂಧಿಸಲ್ಪಟ್ಟಾಗ ಗೊರಕೆ ಸಂಭವಿಸುತ್ತದೆ. ಇದರಿಂದಾಗಿ ಮೂಗು ಮತ್ತು ಗಂಟಲು ಒಂದಕ್ಕೊಂದು ಬಡಿದುಕೊಳ್ಳುತ್ತವೆ ಮತ್ತು ಕಂಪಿಸುತ್ತವೆ. ಇದು ಗೊರಕೆಗೆ ಕಾರಣವಾಗುತ್ತದೆ. ಇದಲ್ಲದೇ ಅಧಿಕ ತೂಕ, ಮೂಗಿನಲ್ಲಿ ಸರಿಯಾಗಿ ಉಸಿರಾಡಲು ಆಗದಿರುವುದು, ಮೂಗಿನ ಮೂಳೆಗಳ ಯಾವುದೇ ಸಮಸ್ಯೆ, ನೆಗಡಿ, ಶ್ವಾಸಕೋಶದ ತೊಂದರೆಗಳಿಂದ ಜನರು ಗೊರಕೆ ಹೊಡೆಯುತ್ತಾರೆ ಎಂದು ತಜ್ಞರು ಹೇಳುತ್ತಾರೆ.

ಆದರೆ ಗೊರಕೆ ನಿಲ್ಲಿಸಲು ಹಲವು ಮಾರ್ಗಗಳನ್ನು ನೀವು ಈಗಾಗಲೇ ತಿಳಿದಿರಬಹುದು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಈ ಮೌತ್ ​​ಟ್ಯಾಪಿಂಗ್ ತುಂಬಾ ವೈರಲ್​​ ಆಗುತ್ತಿದೆ. ಇದರ ಮೂಲಕ ಉತ್ತಮವಾಗಿ ಉಸಿರಾಡಬಹುದು ಮತ್ತು ಕಡಿಮೆ ಗೊರಕೆ ಹೊಡೆಯಲು ಸಹಾಯಕವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗೊರಕೆಯ ಸಮಸ್ಯೆಯನ್ನು ಕಡಿಮೆ ಮಾಡುವುದು ಹೇಗೆ?

ಮೌತ್ ​​ಟ್ಯಾಪಿಂಗ್​​ನ ಪ್ರಯೋಜನಗಳು:

ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಗಂಟಲನ್ನು ತೇವವಾಗಿಡುತ್ತದೆ.
ಆತಂಕವನ್ನು ಕಡಿಮೆ ಮಾಡುತ್ತದೆ.

ಮೌತ್ ​​ಟ್ಯಾಪಿಂಗ್​​ನ ಅಪಾಯಗಳು:

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನವು ಮೌತ್ ಟೇಪಿಂಗ್ ನಂತರ 30 ರೋಗಿಗಳು ಕಡಿಮೆ ಗೊರಕೆ ಹೊಡೆಯುವುದನ್ನು ತೋರಿಸಿದೆ. ಆದರೆ ಇದರಿಂದಾಗುವ ಅಪಾಯಗಳನ್ನು ತಿಳಿದುಕೊಳ್ಳಿ.
ಉಸಿರಾಟದಲ್ಲಿ ಅಡಚಣೆ ಉಂಟಾಗಬಹುದು.
ಟೇಪ್​​ನಿಂದ ಚರ್ಮದಲ್ಲಿ ಕಿರಿಕಿರಿ
ನಿದ್ರಾ ಭಂಗ
ಮೂಗು ಕಟ್ಟಿರುವುದು
ಅಲರ್ಜಿಗಳು

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

Published On - 2:14 pm, Tue, 14 February 23