ಆಮ್ಲಾ ಅಥವಾ ನೆಲ್ಲಿಕಾಯಿಯನ್ನು ಸಾವಿರಾರು ವರ್ಷಗಳಿಂದ ಹಲವಾರು ವೈದ್ಯಕೀಯ ಪದ್ಧತಿಗಳಲ್ಲಿ ಬಳಸಲಾಗುತ್ತಿದೆ. ಜೊತೆಗೆ ಇದು, ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರಿಂದ ಹಿಡಿದು, ಜೀರ್ಣ ಕ್ರಿಯೆಯನ್ನು ಹೆಚ್ಚಿಸಿ, ಚರ್ಮದ ಆರೋಗ್ಯವನ್ನು ಸುಧಾರಿಸುವವರೆಗೆ, ಅತ್ಯಂತ ಪರಿಣಾಮಕಾರಿ ಮನೆ ಮದ್ದುಗಳಲ್ಲಿ ಒಂದಾಗಿದೆ! ಅಲ್ಲದೆ ಮುಖ್ಯವಾಗಿ ಇದನ್ನು ನಿಮ್ಮ ಕೂದಲಿಗೆ ಬಳಸುವುದರಿಂದ ಹೆಚ್ಚುವರಿ ಪ್ರಯೋಜನಗಳನ್ನೂ ನೀಡಲಿದೆ. ಹಲವಾರು ಪೋಷಕಾಂಶಗಳಿಂದ ತುಂಬಿರುವ ಆಮ್ಲಾ, ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಬಳಸಬಹುದಾದ ಉತ್ತಮ ಘಟಕಾಂಶವಾಗಿದೆ ಅಥವಾ ಉತ್ಪನ್ನವಾಗಿದೆ. `
ಆಮ್ಲಾ ಎಣ್ಣೆ ನಿಮ್ಮ ಕೂದಲಿಗೆ ಯಾವ ರೀತಿಯ ಉಪಯೋಗಗಗಳನ್ನು ನೀಡುತ್ತದೆ ಎಂದು ತಿಳಿಯಲು ಹೆಲ್ತ್ ಶಾಟ್ಸ್ ಕಾಸ್ಮೆಟಾಲಜಿಸ್ಟ್, ಡಾ. ಮಧು ಚೋಪ್ರಾ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಆಮ್ಲಾವನ್ನು ಅನೇಕ ತಲೆಮಾರುಗಳಿಂದ ಬಳಸಲಾಗುತ್ತಿದೆ. ಇದು ಉತ್ತಮ ಕೊಬ್ಬಿನಾಮ್ಲಗಳು, ಫೈಟೊನ್ಯೂಟ್ರಿಯೆಂಟ್ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಅಲ್ಲದೆ ಕೂದಲಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ ಹಾಗೂ ಕೂದಲು ಉದುರುವಿಕೆಯನ್ನು ತಡೆಯುತ್ತದೆ, ಹಾರ್ಮೋನ್ ಸಂಬಂಧಿತ ಕೂದಲು ಉದುರುವಿಕೆಯನ್ನು ಸಹ ಇದು ತಡೆಯುತ್ತದೆ. ಇದನ್ನು ಬಳಸುವುದರಿಂದ ಒಣ, ಚಪ್ಪಟೆಯಾದ ನೆತ್ತಿಯವರಿಗೂ ಒಳ್ಳೆಯದು. ಜೊತೆಗೆ, ಭಾರತೀಯ ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ತಲೆಹೊಟ್ಟನ್ನು ನಿರ್ಮೂಲನೆ ಮಾಡಲು ಸಹಾಯ ಮಾಡುತ್ತದೆ. ಅಕಾಲಿಕ ಬೂದು ಬಣ್ಣದ ಕೂದಲನ್ನು ತಡೆಗಟ್ಟಲು ಇದನ್ನು ಮನೆಮದ್ದಾಗಿಯೂ ಬಳಸಲಾಗುತ್ತದೆ ಎಂದು ಡಾ. ಚೋಪ್ರಾ ಹೇಳಿದ್ದಾರೆ. ಒಟ್ಟಾರೆಯಾಗಿ, ಆಮ್ಲಾ ಪ್ರಬಲ ಕೂದಲು ರಕ್ಷಕವಾಗಿದೆ ಎಂದರೆ ತಪ್ಪಾಗಲಾರದು.
ತಜ್ಞರು ಹಂಚಿಕೊಂಡಂತೆ ಕೂದಲಿಗೆ ನೆಲ್ಲಿಕಾಯಿ ಎಣ್ಣೆ ಅಥವಾ ಆಮ್ಲಾವನ್ನು ಬಳಸುವ ಕೆಲವು ಪ್ರಮುಖ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿವೆ:
ಆಮ್ಲಾ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಅದಲ್ಲದೆ ಕೂದಲು ಉದುರುವುದನ್ನು ತಡೆಯುವುದರ ಜೊತೆಗೆ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ ಮತ್ತು ಹೊಸ ಕೂದಲಿನ ಬೆಳವಣಿಗೆಗೆ ಮತ್ತು ಸೊಂಪಾದ ಕೂದಲು ಬೆಳೆಯಲು ಸಹಾಯ ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಆಮ್ಲಾ ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತದ ನಿವಾರಕ ಗುಣಲಕ್ಷಣಗಳನ್ನು ಹೊಂದಿದೆ, ಇದು ಆರೋಗ್ಯಕರ ನೆತ್ತಿಯನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ ಮತ್ತು ತಲೆಹೊಟ್ಟು, ತುರಿಕೆ ಹಾಗೂ ನೆತ್ತಿಯಲ್ಲಿರುವ ಸೋಂಕನ್ನು ನಿವಾರಿಸುತ್ತದೆ.
ಆಮ್ಲಾ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ, ಇದು ಕೂದಲನ್ನು ಪೋಷಿಸುತ್ತದೆ ಮತ್ತು ಕೂದಲಿನ ಎಳೆಗಳಿಗೆ ಹೊಳಪು, ಮೃದುತ್ವ ವನ್ನು ನೀಡುತ್ತದೆ.
ಇದನ್ನೂ ಓದಿ: ಆರೋಗ್ಯಕರ ಕೂದಲಿಗಾಗಿ ಸೂಕ್ತ ಆಹಾರಗಳು
ಆಮ್ಲಾ ಕೂದಲು ಒಡೆಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕೂದಲು ದಪ್ಪವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಇನ್ನೋವೇರ್ ಜರ್ನಲ್ ಆಫ್ ಆಯುರ್ವೇದಿಕ್ ಸೈನ್ಸಸ್ನ ದತ್ತಾಂಶವು, ಆಮ್ಲಾ ಸಾರವು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ ಎಂದು ಸಂಶೋಧನೆಗಳ ಮೂಲಕ ತಿಳಿಸಿದೆ.
ನಿಮ್ಮ ಕೂದಲು ಹಿಂದೆಂದಿಗಿಂತಲೂ ಹೆಚ್ಚಾಗಿ ಒಡೆಯುತ್ತಿದೆಯೇ? ಹೌದು ಎಂದಾದರೆ, ಆಮ್ಲಾ ಎಣ್ಣೆ ನಿಮಗೆ ಸಹಾಯ ಮಾಡುತ್ತದೆ. ಏಕಂದರೆ ಆಮ್ಲಾದಲ್ಲಿರುವ ಟ್ಯಾನಿನ್ ಮತ್ತು ಕ್ಯಾಲ್ಸಿಯಂ ಕೂದಲಿನಲ್ಲಿರುವ ಕೆರಾಟಿನ್ ನೊಂದಿಗೆ ಬೆರೆಯುತ್ತದೆ ಇದರಿಂದಾಗಿ ಕೂದಲು ಒಡೆಯುವುದು ಸಂಪೂರ್ಣವಾಗಿ ಕಡಿಮೆಯಾಗುತ್ತದೆ.
ತಲೆಹೊಟ್ಟಿನಿಂದಾಗಿ ನೆತ್ತಿಯಲ್ಲಿ ತುರಿಕೆ ಕಂಡುಬರುವುದು ಸಾಮಾನ್ಯ ಸ್ಥಿತಿ. ಆದರೆ ಇದು ತುಂಬಾ ಕಿರಿಕಿರಿ ಉಂಟುಮಾಡುವುದಂತೂ ಸತ್ಯ. ಇದಕ್ಕೆ ಪರಿಹಾರವೆಬಂತೆ ನೆಲ್ಲಿಕಾಯಿ ಎಣ್ಣೆ ಬಳಸುವುದರಿಂದ ಅದರಲ್ಲಿರುವ ವಿಟಮಿನ್ ಸಿ ತಲೆಹೊಟ್ಟನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಡಯಾಗ್ನೋಸ್ಟಿಕ್ ರಿಸರ್ಚ್ ನಲ್ಲಿ ಪ್ರಕಟವಾದ ಅಧ್ಯಯನವು ಆಮ್ಲಾ ಪರಿಣಾಮಕಾರಿ ಪರಿಹಾರವಾಗಿದ್ದು, ಇದು ತಲೆಹೊಟ್ಟನ್ನು ಪೂರ್ತಿಯಾಗಿ ಕಡಿಮೆ ಮಾಡಲು ಮತ್ತು ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ. ಕೂದಲಿನ ಅನೇಕ ಸಮಸ್ಯೆಗೆ ಇದು ರಾಮಬಾಣ ವಾಗಿರುವುದರಿಂದ ನೀವು ಬಳಸಬಹುದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:14 pm, Sat, 29 July 23