Hebbuli hair cut: ವಿದ್ಯಾರ್ಥಿಗಳ ಹೆಬ್ಬುಲಿ ಹೇರ್ ಕಟಿಂಗ್  ಸ್ಟೈಲ್ ಗೆ ಬೇಸತ್ತ ರಬಕವಿಬನಹಟ್ಟಿ ಮುಖ್ಯ ಶಿಕ್ಷಕ ಏನು ಮಾಡಿದರು ಗೊತ್ತಾ!?

Hebbuli hair cut: ವಿದ್ಯಾರ್ಥಿಗಳ ಹೆಬ್ಬುಲಿ ಹೇರ್ ಕಟಿಂಗ್ ಸ್ಟೈಲ್ ಗೆ ಬೇಸತ್ತ ರಬಕವಿಬನಹಟ್ಟಿ ಮುಖ್ಯ ಶಿಕ್ಷಕ ಏನು ಮಾಡಿದರು ಗೊತ್ತಾ!?

ರವಿ ಹೆಚ್ ಮೂಕಿ, ಕಲಘಟಗಿ
| Updated By: ಸಾಧು ಶ್ರೀನಾಥ್​

Updated on:Jul 22, 2023 | 2:24 PM

Bagalkot: ಶಾಲೆಯ ಗಂಡುಮಕ್ಕಳು ಹೆಬ್ಬುಲಿಯಂತಹ ಹೇರ್ ಕಟಿಂಗ್ ಮಾಡಿಸಿಕೊಂಡು ಬರುತ್ತಿದ್ದಾರೆ. ಇದರಿಂದ ಕಲಿಕೆಗೆ ಆಸಕ್ತಿ ತೋರಿಸುತ್ತಿಲ್ಲ.‌ ಆದ್ದರಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಒಪ್ಪುವಂತಹ ಹೇರ್ ಕಟಿಂಗ್ ಮಾಡಲು ತಮ್ಮಲ್ಲಿ‌ ವಿನಂತಿಸುತ್ತೇನೆ‌‌ -ಕುಲಹಳ್ಳಿ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ

ವಿದ್ಯಾರ್ಥಿಗಳ “ಹೆಬ್ಬುಲಿ” ಕಟಿಂಗ್ (Hebbuli) ಸೇರಿದಂತೆ ವಿಚಿತ್ರ ಹೇರ್ ಸ್ಟೈಲ್ ಗೆ ಬೇಸತ್ತ ಮುಖ್ಯ ಶಿಕ್ಷಕರೊಬ್ಬರು ಅಂತಹ ಕಟಿಂಗ್ ಮಾಡದಂತೆ ಸಲೂನ್ ಮಾಲೀಕರಿಗೆ ಪತ್ರ ಬರೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ (Rabkavi Banhatti, bagalkot) ಕುಲಹಳ್ಳಿ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ (head master) ಶಿವಾಜಿ ನಾಯಕ ಎಂಬ ಮುಖ್ಯ ಶಿಕ್ಷಕರು ಹೀಗೆ ಕುಲಹಳ್ಳಿ ಗ್ರಾಮದ ಸಲೂನ್ ಅಂಗಡಿಗಳಿಗೆ ಪತ್ರ ಬರೆದಿದ್ದಾರೆ

ನಮ್ಮ ಶಾಲೆಯ ಗಂಡುಮಕ್ಕಳು ಹೆಬ್ಬುಲಿಯಂತಹ ಹೇರ್ ಕಟಿಂಗ್ ಮಾಡಿಸಿಕೊಂಡು ಬರುತ್ತಿದ್ದಾರೆ. ತಲೆಯ ಒಂದು ಬದಿ ಕೂದಲು ಬಿಟ್ಟು, ಇನ್ನೊಂದು ಬದಿ ಕೂದಲು ಉಳಿಸಿಕೊಂಡು ಕಟಿಂಗ್ ಮಾಡಿಸಿಕೊಂಡು ಶಾಲೆಗೆ ಬರುತ್ತಿದ್ದಾರೆ‌. ಇದರಿಂದ ವಿದ್ಯಾರ್ಥಿಗಳು ಕಲಿಕೆಗೆ ಆಸಕ್ತಿ ತೋರಿಸುತ್ತಿಲ್ಲ.‌ ಶೈಕ್ಷಣಿಕ ಚಟುವಟಿಕೆಗಳಿಗೆ ಮಹತ್ವ ನೀಡುತ್ತಿಲ್ಲ. ಆದ್ದರಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಒಪ್ಪುವಂತಹ ಹೇರ್ ಕಟಿಂಗ್ ಮಾಡಲು ತಮ್ಮಲ್ಲಿ‌ ವಿನಂತಿಸುತ್ತೇನೆ‌‌. ಒಂದು ವೇಳೆ ವಿದ್ಯಾರ್ಥಿಗಳು “ಹೆಬ್ಬುಲಿ” ಹೇರ್ ಕಟಿಂಗ್ ಮಾಡಲು ಒತ್ತಾಯ ಮಾಡಿದರೆ… ಅಂತಹ ವಿದ್ಯಾರ್ಥಿಗಳ ಹೆಸರನ್ನು ನನಗೆ ಅಥವಾ ಪಾಲಕರ ಗಮನಕ್ಕೆ ತನ್ನಿ ಎಂದು ತಮ್ಮಲ್ಲಿ ಕೋರುತ್ತೇನೆ ಎಂದು ಪತ್ರದಲ್ಲಿ ಮುಖ್ಯ ಶಿಕ್ಷಕ ಉಲ್ಲೇಖಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Jul 22, 2023 02:14 PM