Heavy downpour in Yadgir: ಕೇವಲ ವಾರದ ಹಿಂದೆ ಬತ್ತಿಹೋಗಿದ್ದ ಭೀಮಾನದಿಯಲ್ಲಿ ಭಾರೀ ಪ್ರಮಾಣದ ನೀರು, ರೈತರ ಮುಖದಲ್ಲಿ ಗೆಲುವು
ಜಿಲ್ಲೆಯಲ್ಲಿ ಕಳೆದ 5-6 ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವುದರಿಂದ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿದು ಬಂದಿದೆ.
ಯಾದಗಿರಿ: ನಿಮಗೆ ನೆನಪಿರಬಹುದು, ಕೇವಲ ಒಂದು ವಾರದ ಹಿಂದೆ ನಗರದ ಹೊರಭಾಗದಿಂದ ಹರಿಯುವ ಭೀಮಾ ನದಿಯ (Bhima River) ಬತ್ತಿದ ಒಡಲಿನ ವಿಡಿಯೋ ತೋರಿಸಿದ್ದೆವು. ಮಾನ್ಸೂನ್ (monsoon ) ವಿಳಂಬಗೊಂಡಿದ್ದರಿಂದ ರೈತ ಸಮುದಾಯ ಕಂಗಾಲಾಗಿ ಹತಾಷೆಗೊಂಡಿತ್ತು. ಅದರೆ, ಇವತ್ತು ಭೀಮೆ ಉಕ್ಕಿ ಹರಿಯುತ್ತಿದ್ದಾಳೆ. ನದಿ ತೀರಕ್ಕಿದ್ದ ಕಂಗಾಲೇಶ್ವರ ಮತ್ತು ವೀರಾಂಜನೇಯ ದೇವಸ್ಥಾನಗಳು ಹೆಚ್ಚುಕಡಿಮೆ ಜಲಾವೃತಗೊಂಡಿವೆ. ಹಾಗಾಗೇ, ಭಕ್ತರು ನದಿ ದಡಕ್ಕೆ ಕೂತು ಪೂಜೆ ಮಾಡುವ ಪರಿಸ್ಥಿತಿ ತಲೆದೋರಿದೆ. ಕಲಬುರಗಿ ಜಿಲ್ಲೆಯಲ್ಲಿ ಹರಿಯುಬ ಕಾಗಿನಾ ನದಿನೀರು (Kagina River water) ಕೂಡ ಭೀಮಾನದಿ ಬಂದು ಸೇರುತ್ತದೆ. ಜಿಲ್ಲೆಯಲ್ಲಿ ಕಳೆದ 5-6 ದಿನಗಳಿಂದ ಸತತವಾಗಿ ಮಳೆಯಾಗಿತ್ತಿರುವುದರಿಂದ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿದು ಬಂದಿದೆ ಎಂದು ಟಿವಿ9 ಕನ್ನಡ ವಾಹಿನಿಯ ಯಾದಗಿರಿ ವರದಿಗಾರ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos