ದೇಶದಲ್ಲಿರುವ ಜನರು ಅಭಿವೃದ್ಧಿ ಹೊಂದಿದ್ದಾಗ ಮಾತ್ರ ಇಡೀ ದೇಶವೇ ಅಭಿವೃದ್ಧಿಯಾಗಲು ಸಾಧ್ಯ. ಹೀಗಾಗಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಸಮಾಜದ ಯಾವುದೇ ವ್ಯಕ್ತಿ ಅಭಿವೃದ್ಧಿಯಲ್ಲಿ ಹಿಂದೆ ಉಳಿಯಬಾರದು ಎಂದು ನಂಬಿದ್ದರು. ಅವರ ಅಂತ್ಯೋದಯ ಪರಿಕಲ್ಪನೆಯು ಕೇವಲ ಆರ್ಥಿಕ ಯೋಜನೆಯಲ್ಲ, ಆದರೆ ಅದೊಂದು ಸಾಮಾಜಿಕ ಚಳುವಳಿಯಾಗಿತ್ತು. ಇದರಡಿಯಲ್ಲಿ ಸಾಕಷ್ಟು ಯೋಜನೆಗಳು ಜಾರಿಗೆ ಬಂದಿದೆ. ಇದು ಸಮಾಜದ ದುರ್ಬಲ ವರ್ಗಗಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾದ ನೀತಿಗಳು ಮತ್ತು ಕಾರ್ಯಕ್ರಮಗಳ ಗುಂಪಾಗಿದೆ. ಹೀಗಾಗಿ ಹಿಂದುಳಿದವರ ಉನ್ನತಿಗಾಗಿ ಜಾಗೃತಿ ಮೂಡಿಸಲು ಮತ್ತು ಅವರನ್ನು ಮುಖ್ಯವಾಹಿನಿಗೆ ತರುವುದೇ ಈ ದಿನದ ಉದ್ದೇಶವಾಗಿದ್ದು ಪ್ರತಿ ವರ್ಷ ಸೆಪ್ಟೆಂಬರ್ 25 ರಂದು ಅಂತ್ಯೋದಯ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ಅಂತ್ಯೋದಯ ದಿವಸ್‌ನ ಮುಖ್ಯ ಉದ್ದೇಶವು ಸಮಾಜದ ಬಡವರು, ವಂಚಿತರು ಮತ್ತು ಹಿಂದುಳಿದ ವರ್ಗಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅವರನ್ನು ಮುಖ್ಯವಾಹಿನಿಗೆ ತರಲು ಸರ್ಕಾರದ ಮತ್ತು ಸಾಮಾಜಿಕ ಪ್ರಯತ್ನಗಳನ್ನು ಉತ್ತೇಜಿಸುವುದಾಗಿದೆ. ಸಮಾಜದಲ್ಲಿ ಹೆಚ್ಚು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ, ಅವರ ಜೀವನಮಟ್ಟ ಸುಧಾರಿಸಲು ಮತ್ತು ಅವರು ಸ್ವಾವಲಂಬಿಯಾಗುವಂತೆ ಮಾಡುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಸಮಾಜದ ಪ್ರತಿಯೊಂದು ವರ್ಗಕ್ಕೂ ಸಮಾನ ಅವಕಾಶಗಳು ದೊರೆತಾಗ ಮಾತ್ರ ದೇಶದ ನಿಜವಾದ ಅಭಿವೃದ್ಧಿ ಸಾಧ್ಯ ಎಂಬುದನ್ನು ಈ ದಿನವು ನೆನಪಿಸುತ್ತದೆ.
ಅಂತ್ಯೋದಯ ದಿವಸ್ 25 ಸೆಪ್ಟೆಂಬರ್ 2000 ರಂದು ಪ್ರಾರಂಭವಾಯಿತು, ಭಾರತ ಸರ್ಕಾರವು ಇದನ್ನು ಅಧಿಕೃತವಾಗಿ ಆಚರಿಸಲು ನಿರ್ಧರಿಸಿತು. ಈ ದಿನವನ್ನು ಭಾರತದ ಪ್ರಮುಖ ಚಿಂತಕ ಮತ್ತು ರಾಜಕೀಯ ನಾಯಕರಾಗಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನವಾಗಿ ಆಚರಿಸಲಾಗುತ್ತದೆ. ಪಂಡಿತ್ ಉಪಾಧ್ಯಾಯರು ಸಮಾಜದ ದುರ್ಬಲ ವರ್ಗದವರ ಉನ್ನತಿಗಾಗಿ ಅಂತ್ಯೋದಯ ಪರಿಕಲ್ಪನೆಯನ್ನು ಮಂಡಿಸಿದ್ದರು.
ಬಡವರಲ್ಲಿ ಬಡವರಿಗೂ ಸಾಕಷ್ಟು ಅವಕಾಶಗಳು ಮತ್ತು ಸಂಪನ್ಮೂಲಗಳು ದೊರೆತಾಗ ಮಾತ್ರ ಸಮಾಜದ ನಿಜವಾದ ಅಭಿವೃದ್ಧಿಯಾಗುತ್ತದೆ ಎನ್ನುವ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು. ಅದಲ್ಲದೇ ಈ ಅಂತ್ಯೋದಯವು ಸಿದ್ದಾಂತವು ಆರ್ಥಿಕ ದೃಷ್ಟಿಯಿಂದ ಮಾತ್ರವಲ್ಲ, ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಯಿಂದಲೂ ಮುಖ್ಯವಾಗಿದೆ. ಭಾರತೀಯ ಸಮಾಜದಲ್ಲಿ ಬಡವರು ಮತ್ತು ಹಿಂದುಳಿದವರ ಉನ್ನತಿಗಾಗಿ ಜಾಗೃತಿ ಮೂಡಿಸಲು ಮತ್ತು ಅವರನ್ನು ಮುಖ್ಯವಾಹಿನಿಗೆ ತರಲು ಈ ದಿನವು ಮಹತ್ವದ್ದಾಗಿದೆ.
ಇದನ್ನೂ ಓದಿ: ಔಷಧಿಗಳ ಕುರಿತು ಸಲಹೆ ನೀಡುವ ನಿಮ್ಮ ಗೆಳೆಯನಿಗೆ ಫಾರ್ಮಾಸಿಸ್ಟ್ ದಿನದ ಶುಭಾಶಯ ತಿಳಿಸಿ
* ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ : ಈ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಖಾತರಿಯ ಉದ್ಯೋಗವನ್ನು ಒದಗಿಸುತ್ತದೆ. ಆ ಮೂಲಕ ಬಡವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಉದ್ದೇಶವನ್ನು ಹೊಂದಿದೆ.
* ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ : ಈ ಕಾಯಿದೆಯಡಿಯಲ್ಲಿ, ಬಡವರಿಗೆ ಕೈಗೆಟಕುವ ದರದಲ್ಲಿ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ, ಇದರಿಂದ ಅವರು ಹಸಿವು ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡುವುದು ಇದರ ಮೂಲ ಉದ್ದೇಶವಾಗಿದೆ.
* ಸ್ವಸಹಾಯ ಗುಂಪು : ಈ ಕಾರ್ಯಕ್ರಮವು ಮಹಿಳೆಯರನ್ನು ಗುಂಪುಗಳಾಗಿ ಸಂಘಟಿಸಲು ಮತ್ತು ಅವರನ್ನು ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದತ್ತ ಸಾಗಿಸುವುದಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ