World Pharmacists Day 2024: ಔಷಧಿಗಳ ಕುರಿತು ಸಲಹೆ ನೀಡುವ ನಿಮ್ಮ ಗೆಳೆಯನಿಗೆ ಫಾರ್ಮಾಸಿಸ್ಟ್ ದಿನದ ಶುಭಾಶಯ ತಿಳಿಸಿ

ನಮಗೆ ವೈದ್ಯರು ಎಷ್ಟು ಮುಖ್ಯವೋ ಫಾರ್ಮಸಿ ವಿಭಾಗವೂ ಅಷ್ಟೇ ಪ್ರಾಮುಖ್ಯವಾದದ್ದು, ಹಾಗಾಗಿ 2009ರಲ್ಲಿ ಇಂಟರ್‌ನ್ಯಾಶನಲ್‌ ಫಾರ್ಮಸುಟಿಕಲ್‌ ಫೆಡರೇಶನ್‌ನ ಆದೇಶದಂತೆ ಪ್ರತಿ ವರ್ಷ ಸೆಪ್ಟಂಬರ್‌ 25ರಂದು ವಿಶ್ವದಾದ್ಯಂತ ಫಾರ್ಮಸಿಸ್ಟ್‌ ದಿನವನ್ನು ಆಚರಿಸಲಾಗುತ್ತಿದೆ. ಈ ದಿನ ಫಾರ್ಮಸಿ ವಿಭಾಗದ ತಜ್ಞರುಗಳು ತಮ್ಮ ವೃತ್ತಿ ಜೀವನವನ್ನು ವಿಮರ್ಶಿಸಿಕೊಂಡು ಕೊರತೆಗಳನ್ನು ಪರಾಮರ್ಶಿಸಿಕೊಂಡು ಮುಂದುವರಿಯುತ್ತ ಹೆಮ್ಮೆಯಿಂದ ತಮ್ಮ ಸಹಕರ್ಮಿಗಳಿಗೆ ಶುಭಾಶಯ ವಿನಿಯಮ ಮಾಡಿಕೊಳ್ಳುವ ದಿನವಾಗಿದೆ.

World Pharmacists Day 2024: ಔಷಧಿಗಳ ಕುರಿತು ಸಲಹೆ ನೀಡುವ ನಿಮ್ಮ ಗೆಳೆಯನಿಗೆ ಫಾರ್ಮಾಸಿಸ್ಟ್ ದಿನದ ಶುಭಾಶಯ ತಿಳಿಸಿ
ಸಾಂದರ್ಭಿಕ ಚಿತ್ರ ( ಫಾರ್ಮಾಸಿಸ್ಟ್ ದಿನ)
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 25, 2024 | 9:32 AM

ಆರೋಗ್ಯ ಕ್ಷೇತ್ರದಲ್ಲಿ ವೈದ್ಯರು ಎಷ್ಟು ಮುಖ್ಯವೋ ಫಾರ್ಮಸಿ ವಿಭಾಗವೂ ಅಷ್ಟೇ ಪ್ರಾಮುಖ್ಯವಾದದ್ದು, ಹಾಗಾಗಿ 2009ರಲ್ಲಿ ಇಂಟರ್‌ನ್ಯಾಶನಲ್‌ ಫಾರ್ಮಸುಟಿಕಲ್‌ ಫೆಡರೇಶನ್‌ನ ಆದೇಶದಂತೆ ಪ್ರತಿ ವರ್ಷ ಸೆಪ್ಟಂಬರ್‌ 25ರಂದು ವಿಶ್ವದಾದ್ಯಂತ ಫಾರ್ಮಸಿಸ್ಟ್‌ ದಿನವನ್ನು ಆಚರಿಸಲಾಗುತ್ತಿದೆ. ಈ ದಿನ ಫಾರ್ಮಸಿ ವಿಭಾಗದ ತಜ್ಞರುಗಳು ತಮ್ಮ ವೃತ್ತಿ ಜೀವನವನ್ನು ವಿಮರ್ಶಿಸಿಕೊಂಡು ಕೊರತೆಗಳನ್ನು ಪರಾಮರ್ಶಿಸಿಕೊಂಡು ಮುಂದುವರಿಯುತ್ತ ಹೆಮ್ಮೆಯಿಂದ ತಮ್ಮ ಸಹಕರ್ಮಿಗಳಿಗೆ ಶುಭಾಶಯ ವಿನಿಯಮ ಮಾಡಿಕೊಳ್ಳುವ ದಿನವಾಗಿದೆ.

ಈ ದಿನದ ಉದ್ದೇಶವೇನು?

ಜಾಗತಿಕ ಮಟ್ಟದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಿ, ಬಲಪಡಿಸುವುದರಲ್ಲಿ ಔಷಧಿಕಾರರು ವಹಿಸುವ ಪ್ರಮುಖ ಪಾತ್ರವನ್ನು ಶ್ಲಾಘಿಸುವುದು ಈ ದಿನದ ಉದ್ದೇಶವಾಗಿದೆ. ಅಲ್ಲದೆ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾದ ಜ್ಞಾನ ವಿನಿಮಯ, ಸಂಘಟನೆ, ಜನಪರ ಕಾಳಜಿ, ಗುಣಮಟ್ಟ ಕಾಯ್ದುಕೊಳ್ಳುವುದು ಇತ್ಯಾದಿ ಮಹತ್ತರ ಉದ್ದೇಶಗಳನ್ನು ಪ್ರತಿಪಾದಿಸುತ್ತಾ ಬಂದ ಅಂತಾರಾಷ್ಟ್ರೀಯ ಫಾರ್ಮಾಸ್ಯುಟಿಕಲ್ ಪೆಫೆಡರೇಷನ್‌ನ ಹಿನ್ನೆಲೆಯಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಜೊತೆಗೆ ಔಷಧ ದುರ್ಬಳಕೆ ತಡೆಗಟ್ಟಲು, ಔಷಧ ಬಳಕೆಯ ಅರಿವು ಮೂಡಿಸಲು ಫಾರ್ಮಸಿಸ್ಟ್‌ ದಿನ ಪೂರಕವಾಗಿರಲಿ ಎಂಬುದು ಎಲ್ಲರ ಆಶಯವಾಗಿದೆ.

ಫಾರ್ಮಾಸಿಸ್ಟ್ ಗೆ ಈ ರೀತಿ ಧನ್ಯವಾದ ಹೇಳಿ;

ವಿಶ್ವ ಫಾರ್ಮಸಿಸ್ಟ್ ದಿನವನ್ನು ಆಚರಿಸಲು ಉತ್ತಮ ಮಾರ್ಗವೆಂದರೆ ಸ್ಥಳೀಯ ಔಷಧಾಲಯಕ್ಕೆ ಹೋಗಿ ಅವರಿಗೆ ಧನ್ಯವಾದ ಹೇಳುವುದು ಮತ್ತು ನಿಮಗೆ ಔಷಧಿಗಳ ಬಗ್ಗೆ ನಿಯಮಿತವಾಗಿ ಸಲಹೆಗಳನ್ನು ನೀಡುವವರಿಗೆ ಮೆಚ್ಚುಗೆ ನೀಡಿ. ಕುಟುಂಬದಲ್ಲಿ (ವಿಶೇಷವಾಗಿ ವಯಸ್ಸಾದರಿಗೆ) ಯಾವ ಔಷಧಿಗಳನ್ನು ತೆಗೆದುಕೊಳ್ಳಬೇಕು. ಯಾರಿಗೆ ಯಾವುದು ಒಳ್ಳೆಯದು ಎಂಬುದರ ಕುರಿತು ಗಮನ ನೀಡುವುದಲ್ಲದೆ ಮನೆಯವರಂತೆ ಕಾಳಜಿ ವಹಿಸುವ ಫಾರ್ಮಾಸಿಸ್ಟ್ ಗಳ ತಂಡಕ್ಕೆ ಧನ್ಯವಾದ ಹೇಳುವ ಮೂಲಕ ಕಾರ್ಡ್ ನೀಡಬಹುದು.

ಇದನ್ನೂ ಓದಿ: ಕಡಿಮೆ ಉಪ್ಪು ಸೇವನೆಯು ನಿಮ್ಮ ದೇಹಕ್ಕೆ ಸಮಸ್ಯೆಗಳನ್ನು ಉಂಟುಮಾಡಬಹುದು

ಔಷಧಿಕಾರರಿಗೆ ಸ್ವಲ್ಪ ಪ್ರೀತಿ ತೋರಿಸಿ

ನಿಮ್ಮ ಕುಟುಂಬ ಅಥವಾ ಸ್ನೇಹಿತರ ಗುಂಪಿನಲ್ಲಿರುವ ಫಾರ್ಮಾಸಿಸ್ಟ್ ಗೆ ವಿಶ್ವ ಫಾರ್ಮಾಸಿಸ್ಟ್ಸ್ ದಿನದ ಶುಭಾಶಯ ತಿಳಿಸಿ. ಜೊತೆಗೆ ಅವರಿಗೆ ಇಷ್ಟವಾಗುವಂತಹ ಕೆಲಸ ಮಾಡಿ. ಇಲ್ಲವಾದಲ್ಲಿ ಅವರನ್ನು ಕುಟುಂಬ ಸಮೇತರಾಗಿ ಊಟಕ್ಕೆ ಕರೆದುಕೊಂಡು ಹೋಗಿ, ಅಥವಾ ಗೌರವಾರ್ಥವಾಗಿ ಪಾರ್ಟಿ ಆಯೋಜಿಸಿ. ಇದು ನೀವು ಅವರನ್ನು ಖುಷಿ ಪಡಿಸಲು ಮಾಡುವ ಒಂದು ಸಣ್ಣ ಉಪಾಯವಾಗಿದೆ. ಈ ರೀತಿ ನಿಮಗೆ ಅನುಕೂಲವಾಗುವ ರೀತಿ ಯಾವುದಾದರೂ ಒಂದು ಚಟುವಟಿಕೆಯನ್ನು ಆಯೋಜಿಸಿ, ಅವರನ್ನು ಖುಷಿಪಡಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?