ಆರಾಮದಾಯಕವಾಗಿ ನೆಲದ ಮೇಲೆ ಕುಳಿತುಕೊಂಡು ಆಹಾರವನ್ನು ನಿಧಾನವಾಗಿ ಜಗಿಯುತ್ತಾ, ಪ್ರತಿಯೊಂದು ತುತ್ತನ್ನು ಆನಂದಿಸುತ್ತಾ ತಿನ್ನಬೇಕೆಂದು ಹಿರಿಯರು ಹೇಳುವ ಮಾತಿದೆ. ಆದರೆ ಇಂದಿನ ಬಿಡುವಿಲ್ಲದ ಜೀವನಶೈಲಿಯ ಕಾರಣದಿಂದಾಗಿ ಅನೇಕ ಜನರಿಗೆ ಸಮಯಕ್ಕೆ ಸರಿಯಾಗಿ ಊಟವನ್ನು ಮಾಡಲು ಕೂಡಾ ಸಮಯ ಸಿಗುತ್ತಿಲ್ಲ. ಹೆಚ್ಚಿನ ಜನರು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ತರಾತುರಿಯಲ್ಲಿ ಆಹಾರವನ್ನು ಸರಿಯಾಗಿ ಜಗಿಯದೆ ಗಡಿಬಿಡಿಯಲ್ಲಿ ಆಹಾರವನ್ನು ಸೇವಿಸುತ್ತಾರೆ. ಆದರೆ ಈ ಅಭ್ಯಾಸವು ಖಂಡಿತವಾಗಿಯೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಆರೋಗ್ಯ ತಜ್ಞರ ಪ್ರಕಾರ ನಾವು ಯಾವಾಗಲು ನಮ್ಮ ಆಹಾರವನ್ನು ನಿಧಾನವಾಗಿ ತಿನ್ನಬೇಕು, ಚೆನ್ನಾಗಿ ಅಗಿಯಬೇಕು ಮತ್ತು ಪ್ರತಿಯೊಂದು ತುತ್ತನ್ನು ಆನಂದಿಸುತ್ತಾ ಊಟವನ್ನು ಸವಿಯಬೇಕು. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ ಮತ್ತು ಈ ಅಭ್ಯಾಸವು ಲೆಕ್ಕಕ್ಕಿಂತ ಹೆಚ್ಚು ಆಹಾರವನ್ನು ಸೇವನೆ ಮಾಡುವುದನ್ನು ತಪ್ಪಿಸುತ್ತದೆ ಎಂದು ಹೇಳುತ್ತಾರೆ. ಆದರೆ ತ್ವರಿತವಾಗಿ, ಜಗಿಯದೆ ಆಹಾರವನ್ನು ಸೇವನೆ ಮಾಡುವ ಅಭ್ಯಾಸವು ಆರೋಗ್ಯಕ್ಕೆ ಹಲವು ರೀತಿಯಲ್ಲಿ ತೊಂದರೆಯನ್ನು ಉಂಟುಮಾಡಬಹುದು.
ಆಹಾರವನ್ನು ಸರಿಯಾಗಿ ಜಗಿಯದೆ ತ್ವರಿತವಾಗಿ ತಿನ್ನುವ ಅಭ್ಯಾಸವು ಮಧುಮೇಹದಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ನಾವು ವೇಗವಾಗಿ ತಿನ್ನುವಾಗ, ನಾವು ಆಹಾರವನ್ನು ಸರಿಯಾಗಿ ಅಗಿಯದೆ ನುಂಗುತ್ತೇವೆ. ಹೀಗೆ ಮಾಡುವುದರಿಂದ ಆಹಾರವು ಸಮರ್ಪಕವಾಗಿ ಜೀರ್ಣವಾಗುವುದಿಲ್ಲ. ಮತ್ತು ಇದರಿಂದಾಗಿ ರಕ್ತದಲ್ಲಿ ಗ್ಲೂಕೋಸ್ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಅಸ್ಥಿರಗೊಳಿಸುತ್ತದೆ. ಮತ್ತು ಮಧುಮೇಹಕ್ಕೆ ಕಾರಣವಾಗುತ್ತದೆ. ಆದ್ದರಿಂದ ಆರೋಗ್ಯಕರವಾಗಿರಲು ಯಾವಾಗಲೂ ಆಹಾರವನ್ನು ನಿಧಾನವಾಗಿ ಅಗಿಯುತ್ತಾ ಸೇವಿಸಬೇಕು. ತರಾತುರಿಯಲ್ಲಿ ಆಹಾರವನ್ನು ಸೇವಿಸುವ ಅಭ್ಯಾಸವನ್ನು ತಪ್ಪಿಸಿ.
ತರಾತುರಿಯಲ್ಲಿ ಆಹಾರವನ್ನು ತಿನ್ನುವ ಅಭ್ಯಾಸವು ವ್ಯಕ್ತಿಯನ್ನು ಸ್ಥೂಲಕಾಯಕ್ಕೆ ಬಲಿಪಶು ಮಾಡಬಹುದು. ನಾವು ವೇಗವಾಗಿ ತಿನ್ನುವಾಗ ನಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ. ಇದರಿಂದಾಗಿ ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಾರಂಭವಾಗುತ್ತದೆ ಮತ್ತು ಇದರಿಂದಾಗಿ ತೂಕವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಆದರೆ ಆಹಾರವನ್ನು ನಿಧಾನವಾಗಿ ತಿನ್ನುವುದರಿಂದ ಹೊಟ್ಟೆ ತುಂಬಿದಂತಾಗುತ್ತದೆ ಮತ್ತು ಇದು ಅತಿಯಾಗಿ ತಿನ್ನುವುದನ್ನು ಕೂಡಾ ತಡೆಯುತ್ತದೆ. ಅಲ್ಲದೆ ನಾವು ಆಹಾರವನ್ನು ಸರಿಯಾಗಿ ಅಗಿದು ತಿಂದಾಗ ಅದು ಸರಿಯಾಗಿ ಜೀರ್ಣವಾಗುತ್ತದೆ ಮತ್ತು ಚಯಾಪಚಯಕ್ರಿಯೆಯು ಸರಾಗವಾಗಿರುತ್ತದೆ. ಆದ್ದರಿಂದ ಯಾವಾಗಲು ಆಹಾರವನ್ನು ಚೆನ್ನಾಗಿ ಜಗಿದು ತಿನ್ನಬೇಕು.
ಇದನ್ನೂ ಓದಿ: ಮದ್ಯಪಾನ ಮಾಡುವಾಗ ಅಪ್ಪಿತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ, ಯಾಕೆ ಗೊತ್ತಾ?
ಆಹಾರವನ್ನು ಜಗಿಯದೆ ಅತಿ ವೇಗವಾಗಿ ತಿನ್ನುವುದರಿಂದ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಅಷ್ಟೇ ಅಲ್ಲದೆ ಇದು ಗ್ಯಾಸ್, ಅಜೀರ್ಣದ ಸಮಸ್ಯೆಯನ್ನು ಸಹ ಉಂಟುಮಾಡುತ್ತದೆ. ಆಹಾರವನ್ನು ಸರಿಯಾಗಿ ಅಗಿವುದರಿಂದ, ಜಗಿಯುವ ಪ್ರಕ್ರಿಯೆಯು ಜೀರ್ಣಕ್ರಿಯೆಗೆ ಸಹಾಯ ಮಾಡುವ ಲಾಲಾರಸದಲ್ಲಿನ ಕಿಣ್ವಗಳನ್ನು ಉತ್ಪತ್ತಿ ಮಾಡುತ್ತದೆ. ಇದರಿಂದಾಗಿ ಜೀರ್ಣಕ್ರಿಯೆಯು ಸರಾಗವಾಗುತ್ತದೆ. ಆದರೆ ವೇಗವಾಗಿ ತಿನ್ನುವುದರಿಂದ ಆಹಾರವು ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: