ಅ.27ರಿಂದ ಮೂರು ದಿನ ಟಿವಿ9 ಕನ್ನಡದಿಂದ ಲೈಫ್​ಸ್ಟೈಲ್, ಫರ್ನಿಚರ್, ಅಟೊಮೊಬೈಲ್ ಎಕ್ಸ್​ಪೋ

| Updated By: ರಮೇಶ್ ಬಿ. ಜವಳಗೇರಾ

Updated on: Oct 24, 2023 | 11:45 AM

TV9 Kannada Lifestyle, Auto, Furniture Expo 2023: ಟಿವಿ9 ಕನ್ನಡದ ಲೈಫ್​ಸ್ಟೈಲ್, ಫರ್ನಿಚರ್, ಅಟೊಮೊಬೈಲ್ ಎಕ್ಸ್​ಪೋ ಮತ್ತೆ ಬಂದಿದೆ. ಇದೇ ಅಕ್ಟೋಬರ್ 29ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಲೈಫ್​ಸ್ಟೈಲ್, ಫರ್ನಿಚರ್, ಅಟೊಮೊಬೈಲ್ ಎಕ್ಸ್​ಪೋ ನಡೆಯಲಿದ್ದು, .ಗ್ರಾಹಕರು ತಮ್ಮ ಅಭಿರುಚಿ ಹಾಗೂ ಯೋಗ್ಯ ಬೆಲೆಗಳಲ್ಲಿ ತಮ್ಮ ಕನಸು ನನಸು ಮಾಡಿಕೊಳ್ಳಬಹುದು.

ಅ.27ರಿಂದ ಮೂರು ದಿನ ಟಿವಿ9 ಕನ್ನಡದಿಂದ ಲೈಫ್​ಸ್ಟೈಲ್, ಫರ್ನಿಚರ್, ಅಟೊಮೊಬೈಲ್ ಎಕ್ಸ್​ಪೋ
Follow us on

ಬೆಂಗಳೂರು, (ಅಕ್ಟೋಬರ್ 24): ನಿಮ್ಮ ನಂಬರ್ ಒನ್ ಕನ್ನಡ ಸುದ್ದಿ ವಾಹಿನಿ​ ಟಿವಿ9, ಮತ್ತೆ ಲೈಫ್‌ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್‌ಪೋ (Lifestyle, Automobile & Furniture Expo 2023) ಹೊತ್ತು ತಂದಿದೆ. ಹೌದು.. ಇದೇ ಅಕ್ಟೋಬರ್ 27,28,29ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಲೈಫ್‌ಸ್ಟೈಲ್, ಆಟೋಮೊಬೈಲ್ ಮತ್ತು ಫರ್ನಿಚರ್ಸ ಎಕ್ಸ್‌ಪೋ ಏರ್ಪಡಿಸಿದ್ದು, ನಿಮ್ಮ ಕನಸಿನ ಕಾರು, ಬೈಕ್ ಹಾಗೂ ವೈವಿಧ್ಯಮಯ , ಪೀಠೋಪಕರಣಗಳು​ ಈ ಎಕ್ಸ್​​ಪೋನಲ್ಲಿ ಲಭ್ಯ ಇರಲಿವೆ.

ಸಿಲಿಕಾನ್ ಸಿಟಿ ಮತ್ತು ಟೆಕ್ನಾಲಜಿ ಹಬ್ ಎಂದೇ ಬೆಂಗಳೂರು ಹೆಸರುವಾಸಿಯಾಗಿದೆ. ವಿವಿಧ ಸ್ಟಾರ್ಟ್‌ಅಪ್‌ಗಳು ಮತ್ತು ತಂತ್ರಜ್ಞಾನ ಆಧಾರಿತ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಪ್ರಧಾನ ಕಛೇರಿಯನ್ನು ಹೊಂದಿವೆ. ಬೆಂಗಳೂರು ತನ್ನ ಕಾಸ್ಮೋಪಾಲಿಟನ್ ಸಂಸ್ಕೃತಿಯಿಂದಾಗಿ ಫ್ಯಾಷನ್ ಕೇಂದ್ರವಾಗಿಯೂ ಹೆಸರುವಾಸಿಯಾಗಿದೆ. ಈ ಹಬ್ಬದ ಸಂಭ್ರಮದದಲ್ಲಿ ರಿಯಾಯಿತಿ ಮತ್ತು ಹಣಕ್ಕೆ ಮೌಲ್ಯದ ಡೀಲ್‌ಗಳನ್ನು ಹುಡುಕುತ್ತಿರುವವರಿಗೆ, TV9 ಕನ್ನಡ ಲೈಫ್‌ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್‌ಪೋ ಆಯೋಜಿಸಿದ್ದು, ಈ ಮೂರು ದಿನ ನಡೆಯಲಿರುವ TV9 ಕನ್ನಡ ಜೀವನಶೈಲಿ ಆಟೋಮೊಬೈಲ್ ಮತ್ತು ಪೀಠೋಪಕರಣಗಳ ಎಕ್ಸ್‌ಪೋನಲ್ಲಿ ಗ್ರಾಹಕರು ತಮ್ಮ ಅಭಿರುಚಿ, ಬಜೆಟ್ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು.

ಪ್ರಮುಖ ಬ್ರಾಂಡ್​ಗಳ ಪ್ರತಿನಿಧಿಗಳೊಂದಿಗೆ ಗ್ರಾಹಕರು ನೇರ ಸಂಪರ್ಕ ಹೊಂದಲು ಎಕ್ಸ್​ಪೋ ವೇದಿಕೆ ಮಾಡಿಕೊಡುತ್ತಿದೆ. ಇದರಿಂದ ಮಾರಾಟಗಾರರು ಮತ್ತು ಗ್ರಾಹಕರು ಇಬ್ಬರಿಗೂ ಎಕ್ಸ್​ಪೋದಿಂದ ಅನುಕೂಲವಾಗುತ್ತದೆ. ತಮ್ಮ ಮನೆಗೆ ಶಾಪಿಂಗ್ ಮಾಡಲು, ನವೀಕರಿಸಲು ಅಥವಾ ಹೊಸ ವಸ್ತುಗಳನ್ನು ಖರೀದಿಸಲು ಯೋಜಿಸುವವರಿಗೆ ಎಕ್ಸ್‌ಪೋ ವೇದಿಕೆಯಾಗಿದೆ. ಉತ್ತಮ ಡೀಲ್‌ಗಳ ಹುಡುಕಾಟದಲ್ಲಿ ಜನರು ಅಲ್ಲಿ ಇಲ್ಲಿ ತಲೆ ಕೆಡಿಸಿಕೊಂಡು ಸುತ್ತಬೇಕಿಲ್ಲ. ಒಂದೇ ಸೂರಿನಡಿ ಈ ಎಕ್ಸ್​ಪೋನಲ್ಲಿ ಭಾಗವಹಿಸಿ ನಿಮ್ಮ ಕನಸಿನ ಕಾರು, ಬೈಕ್​ ಹಾಗೂ ವೈವಿಧ್ಯಮಯದ ಫರ್ನಿಚರ್​​ಗಳನ್ನು ನಿಮ್ಮದಾಗಿಸಿಕೊಳ್ಳಿ. ಇನ್ನೇನು ಯೋಚಿಸುತ್ತೀರಿ ಉಚಿತ ಪ್ರವೇಶ ಇವದೆ. ಮೇಲೆ ತಿಳಿಸಲಾದ ದಿನಾಂಕ, ವಿಳಾಸಕ್ಕೆ ಭೇಟಿ ನೀಡಿ.