Mysore Dasara: ಸುತ್ತೂರು ಮಠದಲ್ಲಿ ಶ್ರೀಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸನ್ಮಾನ, ಸಚಿವ ಹೆಚ್ ಸಿ ಮಹದೇವಪ್ಪ ಉಪಸ್ಥಿತಿ

Mysore Dasara: ಸುತ್ತೂರು ಮಠದಲ್ಲಿ ಶ್ರೀಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸನ್ಮಾನ, ಸಚಿವ ಹೆಚ್ ಸಿ ಮಹದೇವಪ್ಪ ಉಪಸ್ಥಿತಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 24, 2023 | 12:02 PM

Mysore Dasara: ಸನ್ಮಾನ ಮುಗಿದ ಬಳಿಕ, ಹಾರ, ಶಾಲು ಮತ್ತು ನೆನಪಿನ ಕಾಣಿಕೆಯನ್ನು ಕಾರಲ್ಲಿಡುವಂತೆ ತಮ್ಮ ಜೊತೆಯಲ್ಲಿರುವವರಿಗೆ ನೀಡುವಾಗ ತಟ್ಟೆಯಲ್ಲಿದ್ದ ದೇವರ ವಿಗ್ರಹ ಉರುಳುವ ಹಾಗೆ ಕಾಣುತ್ತದೆ. ಅಲ್ಲೇ ಇದ್ದ ಕಾಂಗ್ರೆಸ್ ಶಾಸಕ ತನ್ವೀರ್ ಸೇಟ್ (Tanveer Sait) ಮತ್ತು ಬೇರೆಯವರು ವಿಗ್ರಹ ಬೀಳದ ಹಾಗೆ ಹಿಡಿಯುತ್ತಾರೆ.

ಮೈಸೂರು: ದಸರಾ ಉತ್ಸವ ಮತ್ತು ಜಂಬೂ ಸವಾರಿಯಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ಬೆಳಗ್ಗೆ ಸುತ್ತೂರು ಮಠಕ್ಕೆ (Suttur Mutt) ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು. ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ (Sri Shivarathri Deshikendra Swamiji) ಅವರು ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ಶಾಲು ಹೊದೆಸಿ ಸನ್ಮಾನಿಸಿ ನೆನಪಿನ ಕಾಣಿಕೆ ರೂಪದಲ್ಲಿ ಗಂಧದ ಕಟ್ಟಿಗೆಯಲ್ಲಿ ಕೆತ್ತಿದ ದೇವರ ವಿಗ್ರಹವನ್ನು ನೀಡಿದರು. ಸಾಮಾನ್ಯವಾಗಿ ಸಿದ್ದರಾಮಯ್ಯ ಹಾರ ಹಾಕಿಸಿಕೊಳ್ಳುವಿದಿಲ್ಲ ಅದರೆ ಶ್ರೀಗಳು ಹಾಕುವಾಗ ಬೇಡ ಅನ್ನಲಾದೀತೇ? ಸನ್ಮಾನ ಮುಗಿದ ಬಳಿಕ, ಹಾರ, ಶಾಲು ಮತ್ತು ನೆನಪಿನ ಕಾಣಿಕೆಯನ್ನು ಕಾರಲ್ಲಿಡುವಂತೆ ತಮ್ಮ ಜೊತೆಯಲ್ಲಿರುವವರಿಗೆ ನೀಡುವಾಗ ತಟ್ಟೆಯಲ್ಲಿದ್ದ ದೇವರ ವಿಗ್ರಹ ಉರುಳುವ ಹಾಗೆ ಕಾಣುತ್ತದೆ. ಅಲ್ಲೇ ಇದ್ದ ಕಾಂಗ್ರೆಸ್ ಶಾಸಕ ತನ್ವೀರ್ ಸೇಟ್ (Tanveer Sait) ಮತ್ತು ಬೇರೆಯವರು ವಿಗ್ರಹ ಬೀಳದ ಹಾಗೆ ಹಿಡಿಯುತ್ತಾರೆ. ಸಿದ್ದರಾಮಯ್ಯ ಎಡಭಾಗದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹಾದೇವಪ್ಪ ನಿಂತಿರುವುದನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ