Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore Dasara: ನಟಿ ಮತ್ತು ಪಕ್ಷದ ಕಾರ್ಯಕರ್ತೆ ಭಾವನಾರ ನೃತ್ಯಕಲೆ ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಂದತುಂದಿಲ!

Mysore Dasara: ನಟಿ ಮತ್ತು ಪಕ್ಷದ ಕಾರ್ಯಕರ್ತೆ ಭಾವನಾರ ನೃತ್ಯಕಲೆ ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಂದತುಂದಿಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 16, 2023 | 10:48 AM

Mysore Dasara: ಪ್ರೇಕ್ಷಕರ ನಡುವೆ ಕೂತು ಭಾವನಾ ಅವರ ನೃತ್ಯವನ್ನು ಆಸ್ವಾದಿಸಿದ ಸಿದ್ದರಾಮಯ್ಯ ಅದು ಮುಗಿದ ವೇದಿಕೆ ಮೇಲೆ ಹೋಗಿ ನಟಿಯನ್ನು ಅಭಿನಂದಿಸಿದರು. ಅವರೊಬ್ಬ ಪರಿಣಿತ ನೃತ್ಯಗಾತಿ ಅಂತ ಪ್ರಾಯಶಃ ಮುಖ್ಯಮಂತ್ರಿಯವರಿಗೆ ಗೊತ್ತಿರಲಿಲ್ಲ. ಅವರ ಕಲೆಯನ್ನು ಸಿದ್ದರಾಮಯ್ಯ ಹೊಗಳುವಾಗ ಭಾವನಾ ನಾಚುತ್ತಾ, ಸಂಕೋಚದಿಂದ ಪ್ರಶಂಸೆ ಸ್ವೀಕರಿಸಿದರು.

ಮೈಸೂರು: ಬರಗಾಲದ ಸಂಕಷ್ಟದ ನಡುವೆ ನಾಡಹಬ್ಬ ದಸರಾ ರಾಜ್ಯದ ಸಾಂಸ್ಕೃತಿಕ ನಗರಿಯಲ್ಲಿ ಅದ್ದೂರಿಯಿಂದ ಆರಂಭಗೊಂಡಿದೆ. ನಿನ್ನೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಉತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭಾಗವಹಿಸಿದ್ದ್ದರು. ಖ್ಯಾತ ನಟಿ ಭಾವನಾ (Bhavana) ವಿಧಾನಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷ ಸೇರಿದ್ದು ಕನ್ನಡಿಗರಿಗೆ ಗೊತ್ತಿದೆ. ರವಿವಾರದ ಕಾರ್ಯಕ್ರಮದಲ್ಲಿ ಅವರು ಭರತನಾಟ್ಯದ (Bharatanatyam) ಪ್ರದರ್ಶನ ನೀಡಿ ವೀಕ್ಷಕರ ಮನಸೂರೆಗೊಂಡರು. ಭಾವನಾ ಅತ್ಯುತ್ತಮ ನಟಿಯ ಜೊತೆ ಅಸಾಧಾರಣ ನೃತ್ಯಪಟವೂ ಹೌದು. ಪ್ರೇಕ್ಷಕರ ನಡುವೆ ಕೂತು ಭಾವನಾ ಅವರ ನೃತ್ಯವನ್ನು ಆಸ್ವಾದಿಸಿದ ಸಿದ್ದರಾಮಯ್ಯ ಅದು ಮುಗಿದ ವೇದಿಕೆ ಮೇಲೆ ಹೋಗಿ ನಟಿಯನ್ನು ಅಭಿನಂದಿಸಿದರು. ಅವರೊಬ್ಬ ಪರಿಣಿತ ನೃತ್ಯಗಾತಿ ಅಂತ ಪ್ರಾಯಶಃ ಮುಖ್ಯಮಂತ್ರಿಯವರಿಗೆ ಗೊತ್ತಿರಲಿಲ್ಲ. ಅವರ ಕಲೆಯನ್ನು ಸಿದ್ದರಾಮಯ್ಯ ಹೊಗಳುವಾಗ ಭಾವನಾ ನಾಚುತ್ತಾ, ಸಂಕೋಚದಿಂದ ಪ್ರಶಂಸೆ ಸ್ವೀಕರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ