ನಂಜುಂಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ಕುಟುಂಬ; ಸರಳತೆ ಮೆರೆದ ರೇವತಿ ನಿಖಿಲ್
ರೇವತಿ ಜೆಡಿಎಸ್ ಪಿತಾಮಹ ಹೆಚ್ ಡಿ ದೇವೇಗೌಡರ ಮನೆತನದ ಸೊಸೆಯಾದರೂ ರೇವತಿ ತಮ್ಮ ನಡೆ ನುಡಿಯಲ್ಲಿ ಅದನ್ನು ತೋರಿಸಿಕೊಳ್ಳುವುದಿಲ್ಲ. ಸರಳತೆಯ ಪ್ರತಿರೂಪವಾಗಿದ್ದಾರೆ ಅಂತ ಹೇಳಿದರು ಉತ್ಪ್ರೇಕ್ಷೆ ಅನಿಸದು. ತುಂಬಿದ ಮನೆಯ ಸದದ್ಗೃಹಿಣಿಯಂತೆ ರೇವತಿ ತಮ್ಮ ಮಗುವನ್ನು ಎತ್ತಿಕೊಂಡು ಅತ್ತೆ ಮಾವನ ಜೊತೆ ದೇವಸ್ಥಾನಕ್ಕೆ ನಡೆದು ಬರುತ್ತಾರೆ.
ಮೈಸೂರು: ಲೋಕಸಭಾ ಚುನಾವಣೆಗೆ ಮೊದಲು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಹೊಸ ಹುರುಪಿನಲ್ಲಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಇಂದು ಪತ್ನಿ ಹಾಗೂ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ (Anita Kumaraswamy) ಹಾಗೂ ಸೊಸೆ ಮತ್ತು ಮೊಮ್ಮಗನ ಜೊತೆ ಜಿಲ್ಲೆಯ ನಂಜನಗೂಡಿನಲ್ಲಿರುವ ಪ್ರಸಿದ್ಧ ನಂಜುಂಡೇಶ್ವರ ದೇವಸ್ಥಾನಕ್ಕೆ (Nanjundeshwara temple) ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವಿಡಿಯೋದಲ್ಲಿ ನಿಖಿಲ್ ಕುಮಾರಸ್ವಾಮಿಯವರ ಪತ್ನಿ ರೇವತಿ ನಿಖಿಲ್ (Revathi Nikhil) ಗಮನ ಸೆಳೆಯುತ್ತಾರೆ. ಸಾಮಾನ್ಯವಾಗಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ನಿಖಿಲ್ ಕೂಡ ಈಗ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಅನ್ನೋದು ಕೂಡ ಸರಿ. ರೇವತಿ ಜೆಡಿಎಸ್ ಪಿತಾಮಹ ಹೆಚ್ ಡಿ ದೇವೇಗೌಡರ ಮನೆತನದ ಸೊಸೆಯಾದರೂ ರೇವತಿ ತಮ್ಮ ನಡೆ ನುಡಿಯಲ್ಲಿ ಅದನ್ನು ತೋರಿಸಿಕೊಳ್ಳುವುದಿಲ್ಲ. ಸರಳತೆಯ ಪ್ರತಿರೂಪವಾಗಿದ್ದಾರೆ ಅಂತ ಹೇಳಿದರು ಉತ್ಪ್ರೇಕ್ಷೆ ಅನಿಸದು. ತುಂಬಿದ ಮನೆಯ ಸದದ್ಗೃಹಿಣಿಯಂತೆ ರೇವತಿ ತಮ್ಮ ಮಗುವನ್ನು ಎತ್ತಿಕೊಂಡು ಅತ್ತೆ ಮಾವನ ಜೊತೆ ದೇವಸ್ಥಾನಕ್ಕೆ ನಡೆದು ಬರುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ